November 4, 2024

Vokkuta News

kannada news portal

ಫಾಝಿಲ್,ಮಸೂದ್ ಹತ್ಯೆ: ತಾರತಮ್ಯ ವಿರೋಧಿಸಿ ದ.ಕ.ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಮೌನ ಧರಣಿ

ಮಂಗಳೂರು:( ಸೋಷಿಯಲ್ ಫಾರೂಕ್) ವರದಿ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮತೀಯ ಆಧಾರಿತ ಸರಣಿ ಹತ್ಯೆ,ನಂತರದ ಬೆಳವಣಿಗೆ ಗಳಲ್ಲಿ ಸರಕಾರ ತಳೆದ ನಿಲುವು,ತಾರತಮ್ಯ,ಧರ್ಮಾಧಾರಿತ ಬಿಂಬನೆ ಇತ್ಯಾದಿ ವಿಷಯಗಳನ್ನು ಕೇಂದ್ರವಾಗಿ ರಿಸಿ,ಸರಕಾರದ ತಾರತಮ್ಯ ಮತ್ತು ಅನ್ಯಾಯದ ನಿಲುವುಗಳ ವಿರುದ್ಧ ಇಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನ ( ಪುರಭವನ) ದ ಎದುರಿಗೆ ಬೆಳಿಗ್ಗೆ ಘಂಟೆ 9.30 ರಿಂದ ಅಪರಾಹ್ನ 3.00 ಗಂಟೆ ವರೆಗೆ ದ.ಕ.ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಮೌನ ಧರಣಿ ನಡೆಯಿತು.

ಮೌನ ಧರಣಿಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರಾದ ಶ್ರೀ ಬಿ.ರಾಮನಾಥ ರೈ,ದ.ಕ.ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಸಾಹುಲ್ ಹಮೀದ್,ಮಾಜಿ ಶಾಸಕರಾದ ಮೊಯಿದಿನ್ ಭಾವ, ಜೇ.ಆರ್. ಲೋಬೋ,ಅಭಯ ಚಂದ್ರ ಜೈನ್, ಐವನ್ ಡಿ ಸೋಝಾ,ಮಿಥುನ್ ರೈ, ಶಶಿಧರ ಹೆಗ್ಡೆ, ಬಿ. ಎಚ್.ಖಾದರ್,ಇಬ್ರಾಹಿಂ ಕೋಡಿಜಾಲ್,ಮೊಹಮ್ಮದ್ ಮೋನು,ಎಂ.ಎಸ್.ಮೊಹಮ್ಮದ್,ಮೊಹಮ್ಮದ್ ಕುಂಜತಬೈಲ್, ಸಿ.ಎಂ.ಮುಸ್ತಾಫಾ, ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ,ಅಶ್ರಫ್ ಬದ್ರಿಯಾ,ಎನ್.ಎಸ್. ಕರೀಮ್, ಶ್ರೀಮತಿ ಕವಿತಾ, ಪ್ರತಿಭಾ ಕುಳಾಯಿ, ಹಾರಿಸ್ ಬೈಕಂಪಾಡಿ, ಫಾಝಿಲ್ ತಂದೆ ಮತ್ತು ಕುಟುಂಬಸ್ಥರು ಮತ್ತಿತರ ಪ್ರಮುಖ ಪದಾಧಿಕಾರಿಗಳು,ಕಾರ್ಯಕರ್ತರು ,ಬಾಗವಹಿಸಿದರು.

ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಮತೀಯ ದ್ವೇಷಿತ ಎಲ್ಲ ಕೊಲೆಗಳ ಬಗ್ಗೆ ತನಿಖೆ ನಡೆಯಲಿ ಎಂದು ಪ್ರಮುಖ ನಾಯಕರು ಬೇಡಿಕೆ ಇಟ್ಟರು. ಫಾಝಿಲ್ ಹತ್ಯೆಯಲ್ಲಿ ಸ್ಥಳೀಯ ಪೊಲೀಸರಿಂದ ನ್ಯಾಯ ಲಭ್ಯವಾಗುವ ಲಕ್ಷಣ ಕಾಣುವುದಿಲ್ಲ ಎಂದು ಮೃತರ ತಂದೆ ಅವಹಾಲು ಹೇಳಿದರು.

ಕ್ರಿಯೆಗೆ ಪ್ರತಿಕ್ರಿಯೆ ಹೆಸರಿನಲ್ಲಿ ನಡೆದ ಧರ್ಮಾಧಾರಿತ ಮೂರು ಕೊಲೆಗಳ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಸಾಂತ್ವಾನ ಹಾಗೂ ಪರಿಹಾರ ವಿತರಣೆಯಲ್ಲಿ ಕಣ್ಣಿಗೆ ಕಾಣುವ ಬಹಿರಂಗ ತಾರತಮ್ಯ ನೀತಿಯನ್ನು ಖಂಡಿಸಿ,.ಆಶಯಗಳನ್ನು ಗಾಳಿಗೆ ತೂರಿ ಜಿಲ್ಲೆಯ ನಾಗರಿಕರ ಘನತೆ ಗೌರವ ಕ್ಕೆ ಚ್ಯುತಿ ತಂದ ಸರಕಾರದ ಅವಮಾನವೀಯ ನಡೆಯ ವಿರುದ್ಧ ಮೌನ ಧರಣಿ ಪ್ರತಿಭಟನಾ ಕಾರ್ಯಕ್ರಮ ನಡೆಸಲಾಯಿತು.