July 27, 2024

Vokkuta News

kannada news portal

ಪಿ. ಎಫ್.ಐ ಜಿಲ್ಲಾ ಕಚೇರಿ ಮೇಲೆ ತನಿಖಾ ತಂಡ ಧಾಳಿ:ಕಾರ್ಯಕರ್ತರ ಪ್ರತಿರೋಧ ಪ್ರತಿಭಟನೆ,ಬಂಧನ.

ಮಂಗಳೂರು:ಕೇಂದ್ರೀಯ ತನಿಖಾ ಸಂಸ್ಥೆಯಾದ ಎನ್. ಐ. ಎ ತನ್ನ ದೇಶವ್ಯಾಪಿ ಕಾರ್ಯಾಚರಣೆಯ ಭಾಗವಾಗಿ ಇಂದು ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಖಾಸಗಿ ಕಟ್ಟಡ ದಲ್ಲಿರುವ ದ ಕ.ಜಿಲ್ಲಾ ಪಿ. ಎಫ್.ಐ ಕಚೇರಿ ಮೇಲೆ ಧಾಳಿ ನಡೆಸಿದ್ದು, ಈ ದಾಳಿ ಖಂಡಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಮುಂಜಾನೆ ಎಸ್ ಡಿ ಪಿ ಐ ಜಿಲ್ಲಾ ಕಚೇರಿ ಮೇಲೆ ಎನ್ ಐಎ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಕಾರ್ಯಕರ್ತರು ಜಮಾವನೆಗೊಂಡು ಪ್ರತಿರೋಧ ಪ್ರತಿಭಟನೆ ನಡೆಸಿದರು.ತಕ್ಷಣ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಸ್ಥಳದಿಂದ ಚದುರಿ ಹೋಗಲು ಸೂಚಿಸಿದೆವು. ಆದರೆ ಅವರು ಸ್ಥಳ ಬಿಟ್ಟು ಕದಲಲಿಲ್ಲ. ಮಂಗಳೂರು ಉತ್ತರ ಪೊಲೀಸು ವ್ಯಾಪ್ತಿ ಪ್ರದೇಶ ಸೂಕ್ಷ್ಮಪ್ರದೇಶವಾಗಿದ್ದು ಇಲ್ಲಿ ಪ್ರತಿಭಟನೆ ನಡೆಸಿದರೆ ಕಾನೂನು ಸುವ್ಯವಸ್ತೆ ಸಮಸ್ಯೆ ಸಾಧ್ಯತೆ ಇರುವುದರಿಂದ ಪ್ರತಿಭಟನಾ ಕಾರರನ್ನು ವಶಕ್ಕೆ ಪಡೆದಿದ್ದೇವೆ ಎಂದು ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.