June 22, 2024

Vokkuta News

kannada news portal

ಕೇಂದ್ರ ಸರ್ಕಾರ ಪ್ರೇರಿತ ಎನ್ ಐ ಎ ಧಾಳಿ  ಮುಸ್ಲಿಂ ಜಸ್ಟೀಸ್ ಫೋರಂ ಖಂಡನೆ: ಇರ್ಷಾದ್ ಯು.ಟಿ.

ಕಳೆದ 30 ವರ್ಷಗಳಿಂದ ಭಾರತೀಯರ ನೋವುಗಳಿಗೆ ಬೆನ್ನೆಲುಬಾಗಿ ನಿಂತು ಸಾಮಾಜಿಕ ಸೇವೆಯೇ ತನ್ನ ಬದ್ಧತೆಯೆಂದು ಹಾಗೂ ಕೋರೊನಾ ಸಾಂಕ್ರಮಿಕ ಕಾಲಘಟ್ಟದಲ್ಲಿ ಮಾನವೀಯತೆಯೇ ತನ್ನ ಧ್ಯೇಯವೆಂದು ಇಡೀ ಮನುಕುಲಕ್ಕೆ ಸಾರಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಎಲ್ಲಾ ನಾಯಕರುಗಳ ಮೇಲೆ ಕೇಂದ್ರ ಸರ್ಕಾರ ಕೃಪಾಪೋಷಿತ ಎನ್ ಐ ಎ ದಾಳಿ ನಡೆಸಿ ಬಂಧಿಸಿದ್ದನ್ನು ಹಾಗೂ ಮಾನಸಿಕವಾಗಿ ಕಿರುಕುಳಕೊಡುವುದನ್ನು ಮುಸ್ಲಿಂ ಜಸ್ಟೀಸ್ ಫೋರಂ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಸಮುದಾಯವನ್ನು ಜಾಗೃತಿಗೊಳಿಸುವಂತಹ ಕಾರ್ಯಕ್ರಮವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರಾದ ಇರ್ಷಾದ್.ಯು.ಟಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ