July 27, 2024

Vokkuta News

kannada news portal

ಹಿಂದಿ ಹೇರಿಕೆ ವಿರುದ್ಧ ಗಡಿನಾಡ ಕನ್ನಡಿಗ ಕ.ಕಿಞ್ಞಣ್ಣ ರೈ ಮಾದರಿ ಚಳುವಳಿ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ವಿವಿಧ ಭಾಷೆಗಳ ಒಕ್ಕೂಟ ವ್ಯವಸ್ಥೆಯಾದ ಭಾರತದಲ್ಲಿ,ವಿವಿಧ ಭಾಷಾ ವಾರು ಪ್ರಾಂತ್ಯಗಳ ಆಧಾರದಲ್ಲಿಯೇ ರಾಜ್ಯಗಳ ಸ್ಥಾಪನೆಯಾಗಿದ್ದು, ಪ್ರಸ್ತುತ ಕೇಂದ್ರ ಸರಕಾರ ರಾಜ್ಯಗಳ ಮೇಲೆ ಖಡ್ಡಾಯ ಹಿಂದಿ ಭಾಷೆ ಯನ್ನು ಹೇರುವ ಅಪ್ರಾಯೋಗಿಕ ಪ್ರಯತ್ನವನ್ನು ಮಾಡುತ್ತಿದೆ. ಇದು ಖಂಡನೀಯ,ವಿವಿಧತೆಯಲ್ಲಿ ಏಕತೆ ಈ ನಾಡಿನ ಒಗ್ಗಟ್ಟಿನ ಜೀವಾಳ, ಕರ್ನಾಟಕದಲ್ಲಿ ಕನ್ನಡವೇ ಆಡು ಬಾಷೆ, ಇದರ ಮೇಲೆ ಕೇಂದ್ರ ಸರಕಾರ ಹಿಂದಿಯನ್ನು ಖಡ್ಡಾಯವಾಗಿ ಹೇರಿ, ಉತ್ತರ ಭಾರತೀಯತೆಯನ್ನು ನಮ್ಮ ಮೇಲೆ ಸವಾರಿ ಮಾಡುವ ಪ್ರಯತ್ನ ಸಹಿಸಲು ಅಸಾದ್ಯ.

ಕೇಂದ್ರ ಸರಕಾರ ತನ್ನ ಹಿಂದಿ ಹೇರಿಕೆಯ ನಿಲುವಿನಿಂದ ಹಿಂದೆ ಸರಿಯದೆ ಇದ್ದಲ್ಲಿ,ಕರಾವಳಿ ಮತ್ತು ಮಲಬಾರ್ ಜಿಲ್ಲೆಗಳನ್ನು ಕೇಂದ್ರೀಕರಿಸಿ ತುಳು – ಕನ್ನಡ – ಮಲಯಾಳಂ ಸಮ್ಮಿಲನದಲ್ಲಿ ಗಡಿನಾಡ ಕನ್ನಡಿಗ ಕಯ್ಯಾರ ಕಿಂಞಣ್ಣ ರೈ ಮಾದರಿಯ ಪ್ರಾದೇಶಿಕ ಭಾಷಾ ಚಳುವಳಿ ಮಾಡಲಾಗುವುದು.

ಭಾಷಾ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗೆ ನಮಗೆ ಕಯ್ಯಾರ ರೈ ಅವರೇ ಮಾದರಿ.ಕಯ್ಯಾರ ರೈ ಅವರು 1997 ರಲ್ಲಿ ಮಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕನ್ನಡಿಗರಿಗೆ ನೀಡಿದ ಭಾಷಾ ಅನುಸರಣೆಯ ಮಾರ್ಗದರ್ಶನ ನಮಗೆ ಅಂತಿಮ.

ಕೇಂದ್ರ ಸರಕಾರ ಅಪ್ರಾಯೋಗಿಕ ಹಿಂದಿ ಹೇಳಿಕೆಯ ತನ್ನ ನಿಲುವನ್ನು ಶೀಘ್ರ ಹಿಂದಕ್ಕೆ ಪಡೆಯಬೇಕು.ಇಲ್ಲದೆ ಇದ್ದಲ್ಲಿ ಅಪ್ರಾಯೋಗಿಕ ಹಿಂದಿ ಹೇರಿಕೆಯ ವಿರುದ್ಧ ಜಿಲ್ಲೆಯಲ್ಲಿ ಸುದೃಢ ಚಳುವಳಿ ರೂಪಿಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ ಅಶ್ರಫ್ ಹೇಳಿದ್ದಾರೆ.