June 13, 2024

Vokkuta News

kannada news portal

ಸಾಮರಸ್ಯ ಮಂಗಳೂರು ವತಿಯಿಂದ ಅ.02 ರಂದು ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಜಯಂತಿ ಆಚರಣೆ: ಕೆ.ಅಶ್ರಫ್.

ಮಂಗಳೂರು: ಅಕ್ಟೋಬರ್ 02 ನೇ ತಾರೀಕು 2022 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10. 15 ಕೆ ಸಾಮರಸ್ಯ ಮಂಗಳೂರು ಸಂಸ್ಥೆ ( ಎನ್. ಜಿ. ಓ) ವತಿಯಿಂದ ಮಂಗಳೂರಿನ ಮನ್ನ ಗುಡ್ಡೆ, ಗಾಂಧಿ ನಗರ ಗಾಂಧಿ ಪಾರ್ಕ್ ಉದ್ಯಾನವನದಲ್ಲಿ, ಮಹಾತ್ಮ ಗಾಂಧಿ, ಮೋಹನ್ ದಾಸ್ ಕರಮ ಚಂದ್ ಗಾಂಧಿ ರವರ ಹುಟ್ಟು ಹಬ್ಬ ದಿನಾಚರಣೆ ನಡೆಯಲಿದೆ.

ಸಾಮರಸ್ಯ ಮಂಗಳೂರು ಸಂಸ್ಥೆಯ ಅಧ್ಯಕ್ಷೆ ಮಂಜುಳಾ ನಾಯಕ್ ನೇತೃತ್ವದಲ್ಲಿ ಗಾಂಧಿ ಪುತ್ತಳಿಗೆ ಹಾರಾರ್ಪಣ ದೊಂದಿಗೆ ನಡೆಯುವ ಈ ಕಾರ್ಯಕ್ರಮ ಸಭಾ ಕಾರ್ಯಕ್ರಮ ದೊಂದಿಗೆ ಸರಳವಾಗಿ ನಡೆಯಲಿದೆ ಎಂದು ಸಾಮರಸ್ಯ ಮಂಗಳೂರು ಸಂಸ್ಥೆಯ ಸಂಚಾಲಕರಾದ ಕೆ.ಅಶ್ರಫ್ ( ಮಾಜಿ ಮೇಯರ್) ರವರು ಪತ್ರಿಕೆಗೆ ತಿಳಿಸಿದ್ದಾರೆ.