June 13, 2024

Vokkuta News

kannada news portal

ಮುಸ್ಲಿಮ್ ಐಕ್ಯತಾ ವೇದಿಕೆ – ಸುರತ್ಕಲ್ ನಿಯೋಗದಿಂದ ಜಿಲ್ಲಾಧಿಕಾರಿ ಭೇಟಿ : ಸುರತ್ಕಲ್ ವೃತ್ತಕ್ಕೆ ವಿವಾದಿತ ವ್ಯಕ್ತಿಗಳ ಹೆಸರು ನಾಮಕರಣ ಮಾಡದಂತೆ ಮನವಿ

ತುಳುನಾಡಿನ ದಂತಕತೆ ನಾಯಕರಾದ ಕೋಟಿ ಚೆನ್ನಯ ಅಥವಾ ನವಮಂಗಳೂರು ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅಥವಾ ಕಾರ್ಮಿಕ ನಾಯಕ ಎಂ.ಲೋಕಯ್ಯ ಶೆಟ್ಟಿ ರವರ ಪೈಕಿ ಒಬ್ಬರ ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕೆಂದು ಆಗ್ರಹ

ಮಂಗಳೂರು: ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ವಲಯನಿಯೋಗಇಂದು .ದ.ಕ.ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಸುರತ್ಕಲ್ ವೃತ್ತಕ್ಕೆ ವಿವಾದಿತ ಯಾವುದೇ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡದೆ,ತುಳುನಾಡಿನ ದಂತಕತೆ ನಾಯಕರಾದ ಕೋಟಿ ಚೆನ್ನಯ ಅಥವಾ ನವಮಂಗಳೂರು ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅಥವಾ ಕಾರ್ಮಿಕ ನಾಯಕ ಎಂ.ಲೋಕಯ್ಯ ಶೆಟ್ಟಿ ರವರ ಪೈಕಿ ಒಬ್ಬರ ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.

ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ.ಷರೀಫ್,ಸದಸ್ಯರಾದ ಅಝೀಝ್ ಉಪಸ್ಥಿತರಿದ್ದರು