November 9, 2024

Vokkuta News

kannada news portal

ಪರೇಶ್ ಮೇಸ್ತ ಪ್ರಕರಣ: ಅಭಿವೃದ್ಧಿಯು ಶೂನ್ಯವಾದಾಗ ಸಾವುಗಳು ಪ್ರಣಾಳಿಕೆಯಾಗುತ್ತದೆ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ಮಂಗಳೂರು : ಕಾರವಾರ ಜಿಲ್ಲೆಯಲ್ಲಿ ಅಂದು ಸಂಭವಿಸಿದ ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಯುವಕನ ಸಾವನ್ನು, ತಕ್ಷಣ ಕೊಲೆ ಎಂದು ಪರಿವರ್ತಿಸಿ,ನಂತರ ಕೊಲೆಯ ಆರೋಪವನ್ನು ಒಂದು ನಿರ್ಧಿಷ್ಟ ಸಮುದಾಯದ ಮೇಲೆ ಹೊರಿಸಲಾಯಿತು.

ಆಗಾಗಲೇ ಅಭಿವೃದ್ಧಿ ವಿಷಯಗಳ ಬದಲಿಗೆ,ಧರ್ಮ,ನಂಬಿಕೆ,ಅತಿ ದೇಶ ಪ್ರೇಮ ಎಂಬಿತ್ಯಾದಿ ವಿಷಯಗಳ ಅಘೋಷಿತ ಪ್ರಣಾಳಿಕೆ ಹೊಂದಿದ್ದ ಬಿ.ಜೆ.ಪಿ ಪಕ್ಷಕ್ಕೆ ಸಾವುಗಳು ಪ್ರಣಾಳಿಕೆ ಯಾದವು,ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಸಾವುಗಳನ್ನು ಈ ಪಕ್ಷವು ತನ್ನ ಫಸಲು ಗಳಾಗಿ ಪರಿವರ್ತಿಸಿ,ಜನರಿಗೆ ತನ್ನ ಪ್ರಣಾಳಿಕಾ ಪ್ರಯೋಜನವನ್ನು ನೀಡಿತು.

ಆಕಸ್ಮಿಕವಾಗಿ ಮೃತನಾದ ಪರೇಶ್ ಮೇಸ್ತ

ಅದೇ ಸಂದರ್ಭದಲ್ಲಿ ತಾನು ತನ್ನ ಪಕ್ಷದ ಜನತೆಗೆ ನೀಡಿದ ಭರವಸೆಯ ಅನುಪಾತದಲ್ಲಿ ಆರೋಪಿತ ಸಮುದಾಯದ ಜನತೆಯ,ಆಸ್ತಿ,ಪಾಸ್ತಿ ಗಳನ್ನು ನಷ್ಟ ಪಡಿಸಿತು. ಆರೋಪಿತ ಸಮುದಾಯದ ಜನತೆಗೆ ಅಸುರಕ್ಷಿತತೆ ,ಭಯ,ಆತಂಕದ ಕೊಡುಗೆಯನ್ನು ನೀಡಿದೆ. ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಜೀವವು ಪ್ರಕೃತಿಯಲ್ಲಿ ಲೀನವಾಯಿತು. ಪ್ರಣಾಳಿಕಾ ಪ್ರಯೋಜನಾರ್ಥಿಗಳು ಇಂದು ನಿರಾಳರಾಗಿರುತ್ತಾರೆ.

ಪರೇಶ್ ಮೇಸ್ತ ಸಾವಿನ ತನಿಖೆಯೂ ಅಂತ್ಯಗೊಂಡು ತನಿಖಾ ತಂಡ ಸಿ.ಬಿ.ಐ ಸಾವು ಆಕಸ್ಮಿಕ ಎಂದು ಘೋಷಿಸಿದೆ. ಪರೇಶ್ ಮೇಸ್ತ ಹೆಸರಿನಲ್ಲಿ ಚುನಾವಣೆ ಗೆದ್ದ ಬಿ.ಜೆ.ಪಿ ಜನತೆಯ ‘ ಕ್ಷಮೆ ‘ ಕೇಳಬೇಕಿದೆ. ಬಿ.ಜೆ.ಪಿ ತನ್ನ ಮುಂದಿನ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ವಿಷಯವನ್ನು ಪ್ರಮುಖವಾಗಿಸಿ ಚುನಾವಣೆ ಎದುರಿಸಲಿ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿದ್ದಾರೆ.