July 27, 2024

Vokkuta News

kannada news portal

ಯೋಗಿ ಬುಲ್ಡೋಝರ್: ಮಂಗಳೂರು ಅವೈಜ್ಞಾನಿಕ ಕಾಮಗಾರಿಯ ನೆರೆ ಪರಿಹಾರಕ್ಕಾಗಿ ಬಳಕೆಯಾಗಲಿ: ಕೆ.ಅಶ್ರಫ್. ಮುಸ್ಲಿಮ್ ಒಕ್ಕೂಟ.

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಬಜ್ಪೆಯ ಶೋಭಾ ಯಾತ್ರೆಯಲ್ಲಿ ಪ್ರದರ್ಶಿತಗೊಂಡ,’ ಯೋಗಿ ‘ ಬಿಂಬಿತ ಬುಲ್ಡೋಝರ್ ಪ್ರದರ್ಶನ ಸೂಕ್ತ ಸಮಯದಲ್ಲಿಯೇ ಆಗಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದ ಬಹು ಆರೋಪಿತ ಅವ್ಯವಹಾರ ಮತ್ತು ಅಷ್ಟೇ ಮಟ್ಟದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಳೆದ ಮಳೆಗಾಲ ಆರಂಭದಲ್ಲಿ,ಮಂಗಳೂರು ನಗರದ ಹಲವು ಬೀದಿಗಳು ಮತ್ತು ರಸ್ತೆಗಳು ಜಲಾವೃತವಾಗಿ,ನಗರ,ಗ್ರಾಮೀಣ ಮತ್ತು ಅಂತರ್ ಜಿಲ್ಲಾ ಸಾರಿಗೆ ಬಸ್ಸುಗಳ ಒಳಗೆ ಪ್ರಯಾಣಿಕರಿಗೆ ನೆರೆ ಬಾಗ್ಯ ಲಭ್ಯವಾಯಿತು.

ಬೀದಿಗಳಲ್ಲಿ ಜನರಿಗೆ ಮತ್ಸ್ಯ ದರ್ಶನ ವಾಗಿ ಹಲವರಿಗೆ ಮತ್ಸ್ಯ ಬೋಜನ ಭಾಗ್ಯವು ದೊರೆತದ್ದನ್ನು ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಮರೆತಿರಬೇಕು. ಮಂಗಳೂರಿನ ಬಹು ಅಂತಸ್ತು ಕಟ್ಟಡ ಗಳ ವಾಹನ ನಿಲುಗಡೆ ಸ್ಥಳವನ್ನು ಅಧಿಕಾರಿಗಳ ಬೃಷ್ಟತೆಯ ಬೆಂಬಲದಲ್ಲಿ ನಿಯಮ ಉಲ್ಲಂಘಿಸಿ,ವಾಣಿಜ್ಯ ಅಂಗಡಿ ಘಟಕ ಗಳಾಗಿ ಉಪಯೋಗಿಸಿ,ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ ಗೊಂಡು,ಮಂಗಳೂರು ನಗರದಲ್ಲಿ ಪೊಲೀಸು ಇಲಾಖೆ ನಿರಂತರ ಸಂಚಾರ ನಿಬಿಡತೆಯ ಸಮಸ್ಯೆ ಎದುರಿಸಿ ಜನರಿಂದ ಬೈಸಿ ಕೊಳ್ಳುವ ಸ್ಥಿತಿ ನಿರ್ಮಾಣ ಆದುದನ್ನು ಬಹುಷ್ಯ ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಮರೆತಂತಿದೆ.

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಘಾಡ ಮಳೆ ಸುರಿದ ಪರಿಣಾಮವಾಗಿ ಅವೈಜ್ಞಾನಿಕ ಕಮಿಷನ್ ಕಾಮಗಾರಿ ಯಿಂದಾಗಿ ಬೆಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿ ಹಾಲಿ ‘ ಯೋಗಿ ಮಾದರಿ ‘ ಸರಕಾರವನ್ನು ಜನರು ಮನಸ್ಸೋ ಇಚ್ಛಾ ಉಗಿದು, ಬೈದದನ್ನು ‘ ಯೋಗಿ ಬುಲ್ಡೋಝರ್’ ಆಯೋಜಕರು ಮರೆತಿರಬೇಕು.

ಹೀಗಿರುವಲ್ಲಿ ಮಂಗಳೂರಿನ ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಜನರಿಗೆ ತನ್ನ ಶೋಭ ಯಾತ್ರೆಯಲ್ಲಿ ನೀಡುವ ಸಂದೇಶ ಏನು ಎಂದು ಜನರಿಗೆ ತಿಳಿಸಬೇಕಿದೆ. ಹಾಲಿ ರಾಜ್ಯದಲ್ಲಿ ಆಡಳಿತ ನಡೆಸುವ ಬೊಮ್ಮಾಯಿ ಸರಕಾರ ಈಗಾಗಲೇ ಯೋಗಿ ಬುಲ್ಡೋಝರ್ ಅನ್ನು ಬಳಕೆ ಮಾಡದೆಯೇ ಕರ್ನಾಟಕವನ್ನು ಯುಪಿ ಮಾದರಿಗೊಳಿಸಿ ಆಗಿದೆ. ಇನ್ನು ‘ ಯೋಗಿ ಬುಲ್ಡೋಝರ್ ‘ ನಲ್ಲಿ ಮಾಡಲಿಕ್ಕೆ ಬಾಕಿ ಇರುವುದು, ಮಾಡಿಟ್ಟ ಅವಶೇಷಗಳನ್ನು ಅಗೆದು ಮಣ್ಣು ಮಾಡುವುದು ಮಾತ್ರ.’ ಯೋಗಿ ಬುಲ್ಡೋಝರ್’ ಶೋಭಯಾತ್ರೆಯ ಪ್ರದರ್ಶನದಲ್ಲಿ ದೃಶ್ಯವು, ನೆಲದ ಮಣ್ಣನ್ನು ಆರು ಅಡಿ ಆಗೆತಗೊಳಿಸುವ ದೃಷ್ಯರಹಿತವಾದದ್ದು ಖೇದಕರ.

ವಿಧ್ಯಾ ಮಹತ್ವತೆ ಹೊಂದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಪ್ರಚೋದಿತ ಟ್ಯಾಬ್ಲೋ ಬಳಕೆಯ ವಿರುದ್ಧ ಇಲಾಖೆ ಕ್ರಮಕೈಗೊಳ್ಳಬೇಕು.

ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.