July 27, 2024

Vokkuta News

kannada news portal

ಅ.18 ರಂದು ಸುರತ್ಕಲ್ ಟೋಲ್ ಮುತ್ತಿಗೆ, ಸಮಾನ ಮನಸ್ಕ ವಕೀಲರ ಸಭೆ.

ಮಂಗಳೂರು: ಇತ್ತೀಚೆಗೆ ನಗರದ ಉಡ್ ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಅಕ್ರಮ ಟೋಲ್ ಗೇಟ್ ತೆರವಿನ ಮುತ್ತಿಗೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಭೆ ನಡೆಯಿತು, ಮಂಗಳೂರು ನಗರದ ಹಿರಿಯ ವಕೀಲರು ಭಾಗವಹಿಸಿದ್ದರು.

( ಎಸ್.ಪಿ.ಚೆಂಗಪ್ಪ ಮಾಜಿ ಅಧ್ಯಕ್ಷರು,ವಕೀಲರ ಸಂಘ ಮಂಗಳೂರು,ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು)

ಅಕ್ಟೋಬರ್ 18 ನಡೆಯುವ ಟೋಲ್ ಗೇಟ್ ಮುತ್ತಿಗೆ ಹಾಗೂ ನೇರ ಕಾರ್ಯಾಚರಣೆಗೆ ವಕೀಲರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈಗಾಗಲೇ ವಿವಿಧ ಸ್ವರೂಪದ ಹೋರಾಟಗಳು ನಡೆದು,ಕೇಂದ್ರ ಸರಕಾರದ ಸಾರಿಗೆ ಮಂತ್ರಿಯಾಗಿದ್ದ ನಿತಿನ್ ಗಡ್ಕರಿ ರವರು ಈ ಹಿಂದೆ ಟೋಲ್ ರದ್ದತಿ ಬಗ್ಗೆ ಹೇಳಿಕೆ ನೀಡಿ,ನಂತರದ ದಿನಗಳಲ್ಲಿ ಇತ್ತೀಚೆಗೆ ವಿವಿಧ ಹೋರಾಟ ಸಂಘಟನೆಗಳು,ಸಾರಿಗೆ ಸಂಸ್ಥೆಗಳು,ಜನ ಪ್ರತಿನಿಧಿಗಳು, ಜಿಲ್ಲೆಯ ಎಡ ಪಕ್ಷ ಸಹ ಸಂಘಟನೆಗಳು ವ್ಯತ್ಯಸ್ಟ ಅವಧಿಗಳಲ್ಲಿ, ಪ್ರತಿಭಟನ ರ್ಯಾಲಿ ನಡೆಸಿತ್ತು. ಇತ್ತೀಚೆಗೆ ಸದನದ ಶೂನ್ಯ ವೇಳೆಯಲ್ಲಿ ಜಿಲ್ಲೆಯ ಪ್ರಮುಖ ಶಾಸಕರು, ಮಾಜಿ ಸಚಿವರು ಆದ ಯು. ಟಿ.ಖಾದರ್ ರವರು ಟೋಲ್ ರದ್ದತಿ ಬಗ್ಗೆ ಸರಕಾರದ ಸಮಕ್ಷಮ ಸ್ಪಷ್ಟೀಕರಣ ಅಪೇಕ್ಷಿಸಿದ್ದರು,ಅದರಂತೆ ಸದನ ಪ್ರಶ್ನಾವಳಿಗೆ ಉತ್ತರಿಸಿ ಕೇಂದ್ರ ಸರಕಾರದ ಅಧೀನ ಇಲಾಖೆ ಆದ ಹೆದ್ದಾರಿ ಪ್ರಾಧಿಕಾರ ಟೋಲ್ ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿತ್ತು. ಆದರೆ ಕೇಂದ್ರ ಸರಕಾರ,ಹೆದ್ದಾರಿ ಇಲಾಖೆ ಮತ್ತು ರಾಜ್ಯ ಸರಕಾರ ಈ ಬಗ್ಗೆ ಟೋಲ್ ರದ್ದತಿಯ ಸ್ಪಷ್ಟ ದಿನಾಂಕವನ್ನು ಘೋಷಿಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಮತ್ತೆ ಟೋಲ್ ರದ್ದತಿ ವಿಷಯದಲ್ಲಿ ಹೋರಾಟ ಗರಿಗೆದರಿದೆ.

( ಪದ್ಮರಾಜ್.ಆರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು)

ಸಭೆಯ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಯಶವಂತ್ ಮರೋಳಿಯ ವರು ವಹಿಸಿದ್ದರು. ಸಭೆಯಲ್ಲಿ ಹಿರಿಯ ವಕೀಲರಾದ ಬಿ ಇಬ್ರಾಹಿಂ, ಟಿ. ಏನ್ ಪೂಜಾರಿ, ದಿನೇಶ್ ಹೆಗಡೆ ಉಳೆಪಾಡಿ, ಎಸ್. ಪಿ.ಚೆಂಗಪ್ಪ, ಪದ್ಮರಾಜ್.ಆರ್, ವಸಂತ ಕಾರಂದೂರು, ಅಜಿತ್ ಕುಮಾರ್ ಅಡೂರು,ಆಸಿಫ್, ಮುಕ್ತಾರ್ ಅಹ್ಮದ್, ಸರ್ಫ್ ರಾಝ್, ನಿತಿನ್ ಕುತ್ತಾರ್, ಹಾತಿಮ್ ಹಾಗೂ ಇತರ 30ಕ್ಕೂ ಹೆಚ್ಚು ವಕೀಲರು ಉಪಸ್ಥಿತರಿದ್ದರು. ಟೋಲ್ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥರಾದ ಮುನೀರ್ ಕಾಟಿಪಳ್ಳ ಈ ಸಂದರ್ಭದಲ್ಲಿ ಈ ಹಿಂದಿನ ಹೋರಾಟದ ಅನುಭವ ಮತ್ತು ಮುಂದಿನ ಹೋರಾಟದ ರೂಪು ರೇಷೆಗಳನ್ನು ವಿವರಿಸಿದರು. ಮುನೀರ್ ಕಾಟಿಪಳ್ಳ ಮಾತನಾಡಿ ಸ್ಥಳೀಯವಾಗಿ ಟೋಲ್ ರದ್ದತಿ ಹೋರಾಟಕ್ಕೆ ವಿರೋಧವಾಗಿ ಜಿಲ್ಲೆಯ ಕೆಲವು ಅಧಿಕಾರಸ್ಥ ಜನ ಪ್ರತಿನಿಧಿಗಳು ಟೋಲ್ ಉಪ ಗುತ್ತಿಗೆ ಪಡೆದು ಅಕ್ರಮವಾಗಿ ಟೋಲ್ ಮುಂದುವರಿಕೆಗೆ ಸಹಾಯ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಮುಂದಿನ ಅಕ್ಟೋಬರ್ 18 ರಂದು ಟೋಲ್ ತೆರವು ಗೊಳಿಸುವ ಉದ್ದೇಶದಿಂದ ಮುತ್ತಿಗೆ ನಡೆಯಲಿದೆ ಮತ್ತು ಹೋರಾಟಗಾರರ ಕಾರ್ಯಕ್ರಮ ಮತ್ತು ಕಾನೂನಾತ್ಮಕ ಪರಿಹಾರವಾಗಿ ಮಂಗಳೂರಿನ ಸಮಾನ ಮನಸ್ಕ ವಕೀಲರು ಸರ್ವ ರೀತಿಯ ನೆರವು ನೀಡಲು ಒಪ್ಪಿಗೆ ನೀಡಿದ್ದಾರೆ ಮತ್ತು ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಈ ಹಿಂದಿನ ಟೋಲ್ ವಿರೋಧಿ ಹೋರಾಟ ದೃಶ್ಯ( ಫೈಲ್ ಪೋಟೋ)