November 6, 2024

Vokkuta News

kannada news portal

ಅ.18,ಸುರತ್ಕಲ್ ಟೋಲ್ ಮುತ್ತಿಗೆ: ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆಗೆ ಬೆಂಬಲ: ಕೆ.ಅಶ್ರಫ್

ಮಂಗಳೂರು: ಬಹುಚರ್ಚಿತ, ತಾರೀಕು 18 ಅಕ್ಟೋಬರ್ 22 ರಂದು ವಿವಿಧ ಸಮಾನ ಮನಸ್ಕ ಸಂಘಟನೆಗಳು ಸುರತ್ಕಲ್ ಟೋಲ್ ರದ್ದತಿಗಾಗೀ ನಡೆಸುವ ಪ್ರತಿಭಟನೆ ಮತ್ತು ಮುತ್ತಿಗೆ ಕಾರ್ಯಕ್ರಮಕ್ಕೆ ದ ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿಕೆ ನೀಡಿದ್ದಾರೆ. ಸರ್ವ ನಾಗರಿಕರು ಈ ಪ್ರತಿ ಭಟನೆ ಮತ್ತು ಮುತ್ತಿಗೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಈಗಾಗಲೇ ಸರಕಾರದಿಂದ ಟೋಲ್ ತೆರವಿನ ಭರವಸೆ ನೀಡಲಾಗಿದ್ದು, ಅಕ್ರಮ ಟೋಲ್ ಸಂಗ್ರಹವನ್ನು ಹೆದ್ದಾರಿ ಪ್ರಾಧಿಕಾರವು ತಕ್ಷಣದಿಂದಲೇ ಸ್ತಗಿತ ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.