March 19, 2025

Vokkuta News

kannada news portal

ಪ್ರಜಾಸತ್ತಾತ್ಮಕ ಟೋಲ್ ಹೋರಾಟಗಾರರ ವಿರುದ್ಧ ಪೊಲೀಸ್ ದಬ್ಬಾಳಿಕೆ: ಖಂಡನೆ, ಕೆ.ಅಶ್ರಫ್. ಮುಸ್ಲಿಮ್ ಒಕ್ಕೂಟ.

ಜಿಲ್ಲೆಯ ಜನರು ಸಮಾನ ಮನಸ್ಕ ಸಂಘಟನೆಯ ಆಶ್ರಯದಲ್ಲಿ ಅಕ್ತೋಬರ್ 18 ರಂದು ಸುರತ್ಕಲ್ ಟೋಲ್ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಕೇಂದ್ರ ಮತ್ತು ರಾಜ್ಯ ಸರಕಾರ ಜನರು ನಡೆಸುತ್ತಿರುವ ಪ್ರಜಾ ಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಪೊಲೀಸು ದಬ್ಬಾಳಿಕೆಯನ್ನು ಬಳಸುತ್ತಿದೆ. ಸಂಭಾವ್ಯ ಹೋರಾಟಗಾರರ ಮನೆಗಳಿಗೆ ಮಧ್ಯರಾತ್ರಿ ಬಲವಂತವಾಗಿ ನುಗ್ಗಿ ಪೊಲೀಸು ನೋಟೀಸು ನೀಡಲಾಗುತ್ತಿದ್ದು.ಸರಕಾರದ ಮತ್ತು ಪೊಲೀಸರ ಇಂತಹ ನಡೆ ತೀವ್ರ ಖಂಡನೀಯ.ಪ್ರಜಾಪ್ರಭುತ್ವ ಆಡಳಿತದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತುವ ಸಾಮೂಹಿಕ ಜನ ವರ್ಗವನ್ನು ಪೊಲೀಸು ಒತ್ತಡ ಮೂಲಕ ಹತ್ತಿಕ್ಕುವ ಸರಕಾರದ ಯಾವುದೇ ನಡೆ ಫಲಕಾರಿಯಾಗುವುದಿಲ್ಲ.ಹಾಲಿ ಸರಕಾರ ಜನ ಆಕ್ರೋಶ ವನ್ನು ಎದುರಿಸಬೇಕಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿಕೆ ನೀಡಿದ್ದಾರೆ