June 13, 2024

Vokkuta News

kannada news portal

ಟೋಲ್ ಮುತ್ತಿಗೆ,ಸುರತ್ಕಲ್ ಬಳಿ ಜಮಾವಣೆಗೊಂಡ ಸಮಾನ ಮನಸ್ಕ ಪ್ರತಿಭಟನಾಕಾರರು.

ಮಂಗಳೂರು: ಬಹು ನಿರೀಕ್ಷಿತ ಸುರತ್ಕಲ್ ಟೋಲ್ ತೆರವು ಮುತ್ತಿಗೆ ನೇರ ಕಾರ್ಯಾಚರಣೆಯ ಅಂಗವಾಗಿ ಇಂದು ಮಂಗಳೂರು ಸಮಾನ ಮನಸ್ಕ ಸಂಘಟನೆಯ ಕಾರ್ಯಕರ್ತರು ಇಂದು ಸುರತ್ಕಲ್ ನಲ್ಲಿ ಜಮಾವಣೆಗೊಂಡಿದ್ದು ಟೋಲ್ ಮುತ್ತಿಗೆ ಪ್ರತಿಭಟನೆ ಆರಂಭವಾಗಿದೆ.ರಾಷ್ಟ್ರೀಯ ಹೆದ್ದಾರಿ 66 ರ ಒಂದು ಭಾಗದಿಂದ ಮುಕ್ಕ ಟೋಲ್ ಕಡೆಗೆ ಜನ ಜಮಾವಣೆ ಮೆರವಣಿಗೆ ಸಾಗು ತ್ತಿದ್ದು, ಪ್ರತಿಭಟನಾಕಾರರು ಕೇಂದ್ರ ಸರಕಾರ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಟೋಲ್ ಪ್ರತಿಭಟನೆ ಮುಂದುವರಿದಿದೆ.(ಸೋಷಿಯಲ್ ಫಾರೂಕ್ – ವರದಿ)