July 27, 2024

Vokkuta News

kannada news portal

ಸಂತ ಮದರ್ ತೆರೆಸಾ ವಿಚಾರ ವೇದಿಕೆಯಿಂದ ಸೌಹಾರ್ಧ ದೀಪಾವಳಿ,ಬಹುಧರ್ಮೀಯ ಗಣ್ಯರ ಉಪಸ್ಥಿತಿ.

ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಇಂದು ಮಂಗಳೂರಿನ ತಾರೆ ತೋಟದಲ್ಲಿರುವ ಸಂದೇಶ ಪ್ರತಿಷ್ಠಾನ ಕಲಾ ಮಂದಿರ ಸಭಾಂಗಣದಲ್ಲಿಸಂತ ಮದರ್ ತೆರೆಸಾ ವಿಚಾರ ವೇದಿಕೆ ದ ಕ ವತಿಯಿಂದ ವಿವಿಧ ಧರ್ಮದ ಗಣ್ಯರನ್ನು ಒಳಗೊಂಡ ಸುಂದರ ಕಾರ್ಯಕ್ರಮ ಬೆಳಕಿನ ಹಬ್ಬ ಸೌಹಾರ್ಧ ದೀಪಾವಳಿಯನ್ನು ಆಚರಿಸಲಾಯಿತು.

ಇಂದು ಸಂಜೆ ನಡೆದ ದೀಪಾವಳಿ ಹಬ್ಬದ ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಆದ ಅತಿ ವಂದನೀಯ ಬಿಷಪ್ ಪೌಲ್ ಪೀಟರ್ ಸಲ್ದಾನ ಅವರು ದೀಪವನ್ನು ಬೆಳಗುವ ಮೂಲಕ ಉದ್ಘಾಟಿಸಿದರು,ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾ ನಿಲಯದ ಉಪ ಕುಲಪತಿಗಳಾದ ಪ್ರೊ ಸುಬ್ರಹ್ಮಣ್ಯ ಎಡಪಡಿತ್ತಾಯ ರವರು ಆಗಮಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಸ್ತಲಿನೂ ವಹಿಸಿದ್ದರು,ಇನ್ನೋರ್ವ ಅತಿಥಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ಸುದ್ದಿ ಸಂಪಾದಕ ಮೊಹಮ್ಮದ್ ಆರಿಫ್ ರವರು ಭಾಗವಹಿಸಿದ್ದರು.

ಸಭೆಯಲ್ಲಿ ಸಾಮರಸ್ಯ ಮಂಗಳೂರು ಸಂಸ್ಥೆಯ ಅಧ್ಯಕೆಯಾದ ಶ್ರೀಮತಿ ಮಂಜುಳಾ ನಾಯಕ್,ಅಖಿಲ ಭಾರತ ವಕೀಲರ ಸಂಘದ ಪದಾಧಿಕರಿಗಳಾದ,ವಕೀಲರಾದ ಶ್ರೀ ಯಶವಂತ ಮರೋಳಿ,ಕ್ಯಾಥೋಲಿಕ್ ಸಭಾದ ಅಧ್ಯಕ್ಷರಾದ ಸ್ಟ್ಯಾನಿ ಲೋಬೋ,ದಲಿತ ಚಳುವಳಿಯ ರಾಜ್ಯ ನಾಯಕರಾದ ಎಂ.ದೇವದಾಸ್,ಮಾಜಿ ಮೇಯರ್ ಮತ್ತು ದ ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್,ಸಂದೇಶ ಪ್ರತಿಷ್ಠಾನದ ನಿರ್ದೇಶಕರು ಫಾ.ಸುದೀಪ್ ಪೌಲ್, ಸಂಗೀತ ನಿರ್ದೇಶಕರಾದ ಸೈಮನ್ ಪಾಯಸ್ ಬಜಾಲ್,ಸರಿಗಮ ಟ್ರಸ್ಟ್ ನ ಟ್ರಸ್ಟೀ ಆದ ವಿಜಯ ಆಲ್ಫ್ರೆಡ್,ಲಯನ್ಸ್ ಕ್ಲಬ್ ಬಿಜೈ ಕಾರ್ಯದರ್ಶಿ ಥೋಮಸ್ ಪ್ರಸಾದ್, ರೈತ ಚಳುವಳಿಯ ನಾಯಕರಾದ ಶ್ರೀ ಯಾದವ ಶೆಟ್ಟಿ, ಡಿವೈ ಎಫ್ಐ ರಾಜ್ಯ ನಾಯಕರಾದ ಶ್ರೀ ಮುನೀರ್ ಕಾಟಿಪಳ್ಳ ಸಾಮರಸ್ಯ ಸಂಸ್ಥೆಯ ಸಂಚಾಲಕರು ಮಾಜಿ ಉಪ ಪೌರರು ಆದ ಮೊಹಮ್ಮದ್ ಕುಂಜತ್ ಬೈಲ್ , ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಮೊಹಮ್ಮದ್ ಹನೀಫ್.ಯು, ಸಿ.ಎಂ.ಮುಸ್ತಾಫಾ,ಮೊಯಿದಿನ್ ಮೋನು,ಮಂಗಳೂರಿನ ಉದ್ಯಮಿ ಜಾನ್ ಸುರೇಶ್,ದಲಿತ ಹಕ್ಕುಗಳ ಮುಖಂಡರಾದ ರಾಧಾ ಕೃಷ್ಣ, ಶಾಲಿನಿ ವಕೀಲರು ಮುಂತಾದವರು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಗಣ್ಯರು ದೀಪಾವಳಿಯ ಸಂದೇಶವನ್ನು ಮಾತನಾಡಿದರು.

ಸ್ವಾರಂಜಲಿ ಮ್ಯೂಸಿಕ್ ಸ್ಕೂಲ್, ವಂದನೀಯ ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಸಂಗೀತ ತಂಡ ದಿಂದ ದೀಪಾವಳಿ ಹಾಡುಗಳು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಪೂರ್ವ ಭಾವಿಯಾಗಿ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿತ್ತು,ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮವನ್ನು ಸುನಿಲ್ ಕುಮಾರ್ ಬಜಾಲ್ ನಿರೂಪಿಸಿದರು.