November 18, 2024

Vokkuta News

kannada news portal

ಕುರ್ ಆನ್ ಸಾಮಾಜಿಕ ವ್ಯತ್ಯಯತೆಯನ್ನು ನೀಗಿಸುತ್ತದೆ: ಯುನಿವೆಫ್ ಸಂವಾದದಲ್ಲಿ ರಫಿ ಉದ್ದೀನ್.

ಪವಿತ್ರ ಕುರಾನ್ ಸೂಕ್ತದ ಬಗ್ಗೆ ಜನರಲ್ಲಿ ತಪ್ಪು ಸಂದೇಶ ಹರಡಲಾಗುತ್ತಿದೆ. ಈ ಪವಿತ್ರ ಕುರಾನ್ ಈ ಜಗತ್ತಿಗೆ ಅವತೀರ್ಣ ಗೊಂಡ ಅಂತಿಮ ಗ್ರಂಥವಾಗಿದೆ.

ಮಂಗಳೂರು: ಯುನಿವೆಫ್ ಕರ್ಣಾಟಕ ಮಂಗಳೂರು ಇದರ ವತಿಯಿಂದ ಇಂದು ಮಂಗಳೂರಿನ ಮಿಷನ್ ಕಾಂಪೌಂಡ್,ಶಾಂತಿ ನಿಲಯ ಸಭಾಂಗಣದಲ್ಲಿ ವಿವಿಧ ವಿವಿಧ ಧರ್ಮೀಯರ ಸ್ನೇಹ ಸಂವಾದ ಕಾರ್ಯಕ್ರಮ ಜರುಗಿತು.

ಯುನಿವೆಫ್ ಕರ್ನಾಟಕ ಸಂಸ್ಥೆಯು ತನ್ನ ವರ್ಷಂಪ್ರತಿ ನಿರಂತರವಾಗಿ ಜರುಗಿಸಿಕೊಂಡು ಬರುತ್ತಿರುವ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ. ಅ. ಪ್ರವಾದಿ ಸಂದೇಶ ಪ್ರಚಾರದ ಅಭಿಯಾನದೊಂದಿಗೆ, ಈ ವರ್ಷ ಕುರ್ ಆನ್ ಪರಿಚಯ ಕಾರ್ಯಕ್ರಮವನ್ನೂ ಹಮ್ಮಿ ಕೊಂಡಿದೆ. ಅಭಿಯಾನದ ಭಾಗವಾಗಿ ಸಂಘಟನೆಯು ಇಂದು, ಧರ್ಮ ಗ್ರಂಥಗಳು ಮತ್ತು ಸಾಮಾಜ ಪರಿವರ್ತನೆ ಎಂಬ ವಿಷಯದಲ್ಲಿ ಬಹು ಧಾರ್ಮಿಕ ವಿದ್ವಾಂಸರ ಭಾಷಣ,ಸಂವಾದ ಮತ್ತು ಪ್ರಶ್ನೋತ್ತರ ಚರ್ಚೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಫಾದರ್ ಹ್ಯಾರಿ ಡಿಸೋಜಾ ರವರು ಮಾತನಾಡಿ ಕ್ರೈಸ್ತರ ಬೈಬಲ್ ಗ್ರಂಥವು ದೇಹದ ಪ್ರಜೆಯಾಗಿ,ಸಮಾಜದ ನಾಗರಿಕನಾಗಿ ಓರ್ವ ಪ್ರಜೆ ಹೇಗೆ ಬಾಳಬಹುದು ಎಂದು ವಿವರಿಸುತ್ತಾ ಮನುಷ್ಯನು ಧರೆಗೆ ಉಪಯೋಗವಾಗುವ ಉಪ್ಪು ಮತ್ತು ರುಚಿಯಾಗಿದ್ದೀರಿ, ಮತ್ತು ಮನುಷ್ಯನು ಇತರರಿಗೆ ಪ್ರಯೋಜನ ವಾಗುವ ಬಾಳು ಬಾಳಬೇಕಿದೆ.ದೇವನು ಅನೇಕ ಪ್ರವಾದಿಗಳನ್ನು ಈ ಭೂಮಿಗೆ ಕಳುಹಿಸಿದ ನಂತರ ತನ್ನ ಕುಮಾರನನ್ನು ಏಸು ರೂಪದಲ್ಲಿ ಕಳುಹಿಸಿದನು ಮತ್ತು ಎಸುವು ನಮಗೆ ಸುವಾರ್ತೆಯನ್ನು ತಂದನು ಎಂದು ಭೋದನೆ ಮಾಡಿದರು.

ಶಿಕಾರಿಪುರ ಕೃಷ್ಣಮೂರ್ತಿಯವರು ಮಾತನಾಡಿ ಹಿಂದುಗಳಿಗೆ ಇಂದು ವರಮಹಾ ಲಕ್ಷ್ಮಿ ಹಬ್ಬ, ಈ ಹಬ್ಬಕ್ಕೆ ಕೊಡುಗೆಯಾಗಿ ಹಳೆ ಮೈಸೂರು ಬೆಂಗಳೂರು ಮೈಸೂರು ಪ್ರದೇಶದಲ್ಲಿ ಮುಸ್ಲಿಮರೇ ಹಬ್ಬದ ಹೂವುಗಳನ್ನ ಮಾರುತ್ತಾರೆ.ತಲೆ ತಲಾಂತರದಿಂದ ಹಿಂದೂ,ಮುಸ್ಲಿಮರು ಮತ್ತು ಕ್ರೈಸ್ತರು ಇಲ್ಲಿ ಸಾಮರಸ್ಯದಿಂದ ಬದುಕು ನಡೆಸುತ್ತಿದ್ದಾರೆ.

ಪೂಜಾ ವಿಧಾನದಲ್ಲಿ ನಾವು ಭಿನ್ನರಾಗಿ ಇದ್ದರೂ ಸಾಮರಸ್ಯದಲ್ಲಿ ನಾವು ಬದುಕುತ್ತಾ ಇದ್ದೇವೆ. ಇಂದು ವರಮಹಾಲಕ್ಷ್ಮಿ ಹಬ್ಬ,ಆದರೆ ನಮಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಜ್ಞಾನ ಲಕ್ಷ್ಮಿ,ತಿಳುವಳಿಕೆಯ ಲಕ್ಷ್ಮಿ ಎಂದು ಪ್ರಾರ್ಥನೆ ಮಾಡಿ ನಮ್ಮ ಜನರಲ್ಲಿ ಜ್ಞಾನ ತುಂಬ ಬೇಕಿದೆ ಮತ್ತು ಮನಸ್ಸು ಹೂರಣ ದಂತಿದ್ದು ಅದಕ್ಕೆ ಒಂದು ಆವರಣದ ಅಗತ್ಯವಿದ್ದು ಹೂರಣವೆ ಪ್ರಾಮುಖ್ಯ.

ಧರ್ಮದ ಒಳಗಿನ ತತ್ವ ಹಿಂದುಗಳದ್ದು, ಮುಸ್ಲಿಮರದ್ದು, ಕ್ರೈಸ್ತರದ್ದು ಎಲ್ಲವೂ ಒಂದೇ. ನಾವು ಮಾಡುತ್ತಿರುವ ಜಪ,ತಪ ಪೂಜೆ ಸಿದ್ದಿಸಬೇಕಾದರೆ ನಮ್ಮೊಳಗಿನ ತತ್ವ ಸಮರ್ಪಕ ಇರಬೇಕು ಹೊರತು ಅದು ಪ್ರದರ್ಶನ ಆಗ ಕೂಡದು.ಮನುಷ್ಯ ಬಾಳಬೇಕಾದ ಕ್ರಮ ಅರೇಬಿಯಾದಲ್ಲಿ ಬೇರೆ,ಮಂಗಳೂರಿನಲ್ಲಿ ಬೇರೆ ಇರಲಿಕ್ಕೇ ಸಾದ್ಯ ಇಲ್ಲ ಅದು ಎಲ್ಲ ಕಡೆ ಒಂದೇ ಎಂದು ಹೇಳುತ್ತಾ ಇಂತಹಾ ಸಭೆಗಳು ವ್ಯಾಪಕವಾಗಿ ನಡೆಯಬೇಕಿದೆ ಎಂದರು.

ಯುನಿವೆಫ್ ಮುಖ್ಯಸ್ಥರಾದ ರಫಿಉದ್ದೀನ್ ಕುದ್ರೋಳಿ ಮಾತನಾಡಿ ಮಂಗಳೂರಿನ ವಾತಾವರಣ ದಿನೇ ದಿನೇ ಹದೆಗೆಡುತ್ತಾ ಇದೆ ಎಂಬ ಭಾವನೆ ನಮ್ಮಲಿ ಇದೆ ಅದನ್ನು ಸರಿ ಪಡಿಸಲು ಬೇರೆ ಕಾರ್ಯಕ್ರಮಗಳು, ವಿವಿಧ ಮುಸ್ಲಿಮ್ ಸಂಘಟನೆಗಳು ತಮ್ಮ ಸಮುದಾಯವನ್ನು ಸಬಲೀಕರಣಕ್ಕೆ ಪ್ರಯತ್ನಿಸುತ್ತಾ ಇದೆ. ಅದರೊಂದಿಗೆ ಹಲವು ಜಾತ್ಯತೀತ ತತ್ವಗಳನ್ನು ಅಳವಡಿಸಿ ಅದನ್ನು ಇನ್ನೂ ಬಲಿಷ್ಠ ಗೊಳಿಸಲು ಕೂಡಾ ಪ್ರಯತ್ನಿಸುಟ್ಟಿರುವ ದೇಶ ಬಾಂಧವರು ಮುಸ್ಲಿಮೇತರರು ಇಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಆದಾಗ್ಯೂ ಜಿಲ್ಲೆಯ ನಾನಾ ಭಾಗಗಳಲ್ಲಿ ಅನೈತಿಕ ಪೊಲೀಸುಗಿರಿ ನಡೆಯುತ್ತಾ ಇದೆ.

ಅನೇಕರು ಹೇಳುವುದು ಉಂಟು ಇದಕ್ಕೆ ಮುಖ್ಯ ಕಾರಣ ರಾಜಕೀಯ ಎಂದು, ಆದರೆ ಇದಕ್ಕೆ ಕಾರಣ ರಾಜಕೀಯ ಅಲ್ಲ, ಬದಲಾಗಿ ಅದಕ್ಕೆ ಕಾರಣ ಅಜ್ಞಾನ.ಭಾರತದಲ್ಲಿ ಸಮ್ಮಿಶ್ರ ಸಮಾಜದಲ್ಲಿ ಎಲ್ಲರೂ ಬದುಕುವ ಒಂದು ಪರಂಪರೆ ಇದೆ. ಈ ದೇಶದ ಮುಸ್ಲಿಮರು ಮತ್ತು ಕ್ರೈಸ್ತರು ಈ ದೇಶದ ಪ್ರಜೆಗಳು ಎಂದು ಇತರರು ಒಪ್ಪಿಕೊಳ್ಳುವುದರೊಂದಿಗೆ ಕೆಲವರ ಮನಸ್ಸಿನ ಆಳದಲ್ಲಿ ಅವರನ್ನು ಕಂಡಾಗ ಪರಕೀಯರಂತೆ ಭಾಸವಾಗಿಸಿ ಕೊಳ್ಳುವ ವಿಚಾರವನ್ನು ನಾವು ಕಂಡಿದ್ದೇವೆ. ಎಷ್ಟರ ತನಕ ಈ ದೇಶದಲ್ಲಿ ಭಯ ಇದೆಯೋ ಸಾಮರಸ್ಯ ಸ್ಥಾಪನೆ ಸಾದ್ಯ ಇಲ್ಲ.

ಕಳೆದ ಹದಿನೆಂಟು ವರ್ಷದಿಂದ ನಾವು ಕೆಲವು ನಿಖರ ವಾದಂತಃ ಸಂದೇಶಗಳನ್ನು ಈ ಜಿಲ್ಲೆಯ ಜನತೆಗೆ ನೀಡಿದ್ದೇವೆ. ಈ ದೇಶಕ್ಕೆ ಐದು ಸಾವಿರ ವರ್ಷದ ಇತಿಹಾಸ ಇದೆ ಎಂದು ಹೇಳುವವರು ಈ ಅಖಂಡ ಭಾರತಕ್ಕೆ ಎಷ್ಟು ಬೌಗೋಳಿಕ ಗಡಿ ರೇಖೆಗಳನ್ನು ನೀಡಿದ್ದಾರೆ ಎಂದು ಹೇಳುವುದಿಲ್ಲ. ಭಾರತ ಸ್ವತಂತ್ರ ಗೊಂಡಾಗ ಕಾಶ್ಮೀರ,ಬಾಂಗ್ಲಾ ದೇಶ ಸ್ವಾತಂತ್ರ್ಯ ಗೊಂಡಿರಲಿಲ್ಲ. ಅದರ ನಂತರ ಗಡಿ ರೇಖೆಗಳನ್ನು ನಾವೇ ತೀರ್ಮಾನ ಮಾಡಿ ಆನಂತರ ಆದೇ ಗಡಿ ರೇಖೆಗಾಗಿ ನಾವೇ ಹೋರಾಟ ನಡೆಸುವುದು ಆಗಿದೆ.

ಪವಿತ್ರ ಕುರಾನ್ ಜಗತ್ತಿನಲ್ಲಿ ಮುಸಲ್ಮಾನರು ಅನುಸರಿಸುವ ಮತ್ತು ನಬುವಂತಹ ಒಂದು ದೈವಿಕ ಗ್ರಂಥ ವಾಗಿದೆ. ಈ ಗ್ರಂಥದ ಬಗ್ಗೆ ನಮ್ಮ ದೇಶ ಭಾಂಧವ ಮುಸ್ಲಿಮೇತರರಿಗೆ ವಾಸ್ತವಾಂಶ ತಿಳಿದಿಲ್ಲ. ಪವಿತ್ರ ಕುರಾನ್ ಸೂಕ್ತದ ಬಗ್ಗೆ ಜನರಲ್ಲಿ ತಪ್ಪು ಸಂದೇಶ ಹರಡಲಾಗುತ್ತಿದೆ. ಈ ಪವಿತ್ರ ಕುರಾನ್ ಈ ಜಗತ್ತಿಗೆ ಅವತೀರ್ಣ ಗೊಂಡ ಅಂತಿಮ ಗ್ರಂಥವಾಗಿದೆ.ಸಾವಿರ ದ ನಾನೂರು ವರ್ಷದ ಹಿಂದೆ ಪ್ರವಾದಿ ಮೊಹಮ್ಮದರರಿಗೆ ಈ ಜಗತ್ತಿನ ಸೃಷ್ಟಿ ಕರ್ತ ಇಳಿಸಿದ ಧರ್ಮ ಗ್ರಂಥವಾಗಿದೆ ಕುರಾನ್.ಇದರಲ್ಲಿ ಸಮಾಜ ಶಾಸ್ತ್ರ,ರಾಜಕೀಯ ಶಾಸ್ತ್ರ,ವಿಜ್ಞಾನ, ಚರಿತ್ರೆ ಮಾನವ ಸಂಹಿತೆ ಇದೆ.

ಜಗತ್ತಿನಲ್ಲಿ ವೈಜ್ಞಾನಿಕ ಪ್ರಗತಿಗೆ ಪ್ರಪ್ರಥಮವಾಗಿ ದ್ವಾರವನ್ನು ತೆರೆದದ್ದು ಪವಿತ್ರ ಕುರಾನ್.ಸೂರ್ಯ ಚಂದ್ರಾದಿ ಗೃಹಗಳು ನಿಖರವಾಗಿ ಅದರ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಕುರಾನ್ ನ ಯಾಸೀನ್ ಅಧ್ಯಾಯದಲ್ಲಿ ವಿವರಿಸಲಾಗಿದೆ. ಅರಬ್ ದೇಶದಲ್ಲಿ ಅಂಧಕಾರದಿಂದ ಸಮಗ್ರ ಪ್ರಗತಿ ತರಲು ಕುರಾನ್ ನಿಂದ ಸಾಧ್ಯವಾಯಿತು. ಕುರಾನ್ ಒಂದೇ ಪ್ರಭು ಅಲ್ಲಾಹನನ್ನು ಆರಾಧಿಸಲು ಕರೆ ನೀಡುತ್ತದೆ. ಇಸ್ಲಾಮ್ ಏಕ ದೇವತ್ವವನ್ನು ಪ್ರತಿಪಾದಿಸಿ ಗುಪ್ತ ಮತ್ತು ಬಾಹ್ಯ ವಿಚಾರವನ್ನು ಅರಿಯುವ ನಿಮ್ಮ ಪ್ರಭು ಮಾತ್ರ ಆರಾಧನೆಗೆ ಅರ್ಹನು ಎಂದು ಪ್ರತಿಪಾದಿಸುತ್ತದೆ ಎಂದು ಹೇಳಿದರು. ಕೊನೆಯಲ್ಲಿ ಸಭಿಕರಿಂದ ವಿವಿಧ ಪ್ರಶ್ನೆಗಳು ಕೇಳಲಾಯಿತು ಮತ್ತು ಅದಕ್ಕೆ ವಿವಿಧ ಧರ್ಮ ವಿದ್ವಾಂಸರು ಉತ್ತರಿಸಿದರು. ಆರಂಭದಲ್ಲಿ ಸೈಫುದ್ದೀನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.