November 20, 2024

Vokkuta News

kannada news portal

ಪ್ರತಿಭಾ ಕುಳಾಯಿಯ ಅವಹೇಳನ: ಸ್ತ್ರೀ ಪರ ಹೋರಾಟಕ್ಕೆ ಬೆಂಬಲ: ಕೆ.ಅಶ್ರಫ್.

ಮಂಗಳೂರು ಸುರತ್ಕಲ್ ಟೋಲ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಡೆದ ಪೊಲೀಸು ಕಾರ್ಯಾಚಣೆ ಘಟನೆಗೆ ಸಂಬಂಧಿಸಿ ಪ್ರತಿಭಾ ಕುಳಾಯಿ ಯ ವಿರುದ್ಧ ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ಅಶ್ಲೀಲವಾಗಿ ಶ್ಯಾಮ್ ಸುದರ್ಶನ್ ಭಟ್ ರವರು ಅವಹೇಳನಾತ್ಮಕವಾಗಿ, ನಿಂದಿಸಿರುವುದು ಖಂಡನೀಯ.

ಪ್ರತಿಭಾ ಕುಳಾಯಿರವರು ತನ್ನ ಪ್ರಜಾಸತ್ತಾತ್ಮಕ ಹೋರಾಟದ ಸಂದರ್ಭದಲ್ಲಿ ಓರ್ವ ಸ್ತ್ರೀ ಹೋರಾಟಗಾರಳಾಗಿ ಇದ್ದುಕೊಂಡು, ನ್ಯಾಯದ ಬೇಡಿಕೆ,ಪರಿಸ್ಥಿತಿಯ ಸವಾಲು,ಕಾನೂನಿಗೆ ಗೌರವ,ನೈತಿಕತೆಯ ಪರಿಪಾಲನೆ ಯೊಂದಿಗೆ ತನ್ನ ವ್ಯಕ್ತಿ ಗೌರವವನ್ನು ಸಂರಕ್ಷಿಸುವ ಪದಗಳನ್ನು ಆಡಿದ್ದಕ್ಕೆ, ಅದನ್ನೇ ದೊಡ್ಡ ಸೂಕ್ಷ್ಮ ಘಟನೆಯಾಗಿಸಿ ದ್ವಂದ ದೃಷ್ಟಿಯ ಮನಸ್ಥಿತಿಯಲ್ಲಿ ಕಂಡು, ಓರ್ವ ಸ್ತ್ರೀ ಸಹೋದರಿಯನ್ನು ,ಸಾಮಾಜಿಕ ಜಾಲ ತಾಣಗಳ ಮೂಲಕ ಅಶ್ಲೀಲ ಮತ್ತು ಲೈಂಗಿಕ ದೌರ್ಜನ್ಯದ ಭಾಷೆಯಲ್ಲಿ ನಿಂದಿಸುವುದು ಅಪರಾಧ.

ಇಂತಹ ನೀಚ ಮನಸ್ಥಿತಿಯ ವ್ಯಕ್ತಿ ಪತ್ರಿಕಾ ವೃತ್ತಿಯಲ್ಲಿ ಇರುವುದು,ಸಾಮಾಜಿಕ ಸ್ವಾಸ್ಥ್ಯ ವನ್ನು ಕೆಡಿಸುವುದಕ್ಕೆ ಆಗಿರುತ್ತದೆ. ಪತ್ರಕರ್ತರು ಸಮಾಜದ ದರ್ಪಣ ವಾಗಿ ವೃತ್ತಿ ಗೌರವವನ್ನು ಪಾಲಿಸುವುದರೊಂದಿಗೆ, ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡುವ ಸ್ತ್ರೀವರ್ಗದ ಗೌರವವನ್ನು ಸಂರಕ್ಷಿಸುವ ಮಾತುಗಳನ್ನು ಆಡುವ ಬದಲು ಶ್ಯಾಮ್ ಸುದರ್ಶನ್ ಭಟ್ ಸ್ತ್ರೀ ಅಪಮಾನವನ್ನು ಮಾಡುವ ಮೂಲಕ,ಸ್ತ್ರೀಯರ ಬಗ್ಗೆಗಿನ ತನ್ನ ಮನಸ್ಥಿತಿಯನ್ನು ಹೊರಗೆಡಹೀರುವುದು,ಅವನ ನೈಜ ದೃಷ್ಟಿ ಏನು ಎಂದು ಬಿಂಬಿಸುತ್ತದೆ. ಇಂತಹ ವ್ಯಕ್ತಿಯಿಂದ ಸ್ತ್ರೀಪರ ಬರಹಗಳನ್ನು ನಿರೀಕ್ಷಿಸುವುದು ವ್ಯರ್ಥ. ಸಹೋದರಿ ಪ್ರತಿಭಾ ಕುಳಾಯಿ, ಬಲ್ಕೀಸ್ ಬಾನು ಸಂತ್ರಸ್ತೆಯ,ಮತ್ತು ಈ ಹಿಂದೆ ಆಸಿ ಫಾ ಅತ್ಯಾಚಾರ ವಿರುದ್ಧ ನೇರ ದ್ವನಿ ಎತ್ತಿದ ಓರ್ವ ಧೀರ ಮಹಿಳೆ,ಅವರ ಅವಹೇಳನ ವಿರುದ್ಧದ ಸ್ತ್ರೀ ಶಕ್ತಿ ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಸಂಪೂರ್ಣ ಬೆಂಬಲವಿದೆ.

ಸಹೋದರಿ ಕುಳಾಯಿರವರ ಅವಹೇಳನದ ಆರೋಪಿಯ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಜಿಲ್ಲೆಯಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿದ್ದಾರೆ.