July 27, 2024

Vokkuta News

kannada news portal

ರಾಯಿ ಬಸ್ಸು ಪ್ರಯಾಣಿಕ ಮುಸ್ಲಿಮ್ ವ್ಯಕ್ತಿಯ ಮೇಲೆ ಹಲ್ಲೆ: ಶೀಘ್ರ ಕಾನೂನು ಪ್ರಕ್ರಿಯೆ ನಡೆಯಲಿ: ಕೆ.ಅಶ್ರಫ್.

ನಿನ್ನೆ ಮೂಲಾರ ಪಟ್ನ ರಾಯಿ ಎಂಬಲ್ಲಿ ಬಸ್ಸು ಪ್ರಯಾಣಿಕ ಮುಸ್ಲಿಮ್ ವ್ಯಕ್ತಿಯ ಮೇಲೆ,ಸಹ ಪ್ರಯಾಣಿಕೆಯೊಂದಿಗೆ ದುರ್ವರ್ತನೆ ತೋರಿದ ಬಗ್ಗೆ ಅಪಪ್ರಚಾರ ನಡೆಸಿ ಬಸ್ಸು ನಿರ್ವಾಹಕ ಮತ್ತು ಸ್ಥಳೀಯ ಸಂಘ ಪರಿವಾರದ ಪುಂಡರು ತೀವ್ರ ಹಲ್ಲೆ ನಡೆಸಿ ಸಂತ್ರಸ್ತ ಗಾಯಾಳುವನ್ನು ಅಜ್ಞಾತ ಸ್ಥಳದಿಂದ ಪೊಲೀಸರಿಗೆ ನೀಡಿದ ಘಟನೆಯ ಬಗ್ಗೆ ನಿನ್ನೆಯೇ ಪೊಲೀಸರಿಗೆ ಮಾಹಿತಿ ಇದ್ದರೂ ಮತ್ತು ಸಂತ್ರಸ್ತ ವ್ಯಕ್ತಿಯು ಪೊಲೀಸು ಸ್ಟೇಶನ್ ನಲ್ಲಿ ದೂರು ನೀಡಲು ತೆರಳಿದರೂ ಕೂಡಾ ಬೆಳಿಗ್ಗಿನಿಂದ ಸಂಜೆಯವರೆಗೆ ಸ್ಟೇಶನ್ ನಲ್ಲಿಯೇ ಇರಿಸಿ ಕ್ರಮ ಕೈಗೊಳ್ಳದೇ ಈ ಬಗ್ಗೆ ಮೌನ ವಹಿಸಿದ್ದು,ಆರೋಪಿತರ ವಿರುದ್ಧ ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಇರುವುದು ಖಂಡನೀಯ.

ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಸಂಘ ಪರಿವಾರ ಜಿಲ್ಲೆಯ ಕೋಮು ತಾಪಮಾನವನ್ನು ಬಿಸಿ ಇಡುವ ಹುನ್ನಾರದಿಂದ ಇಂತಹ ಅನೈತಿಕ ಗಿರಿಯನ್ನು ಉತ್ತೇಜಿಸುತ್ತಿರುವುದು ಸ್ಪಷ್ಟ.

ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಅನೈತಿಕ ಗೂಂಡಾಗಿರಿ ನಡೆಯುತ್ತಿದ್ದರೂ ಪೊಲೀಸರು ನಿಯಂತ್ರಣ ಗೊಳಿಸಲು ವಿಫಲ ಹೊಂದಿರುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕಾನೂನು ಪ್ರಕ್ರಿಯೆ ನಡೆಸಬೇಕು ಮತ್ತು ಬಸ್ಸು ನಿರ್ವಾಹಕ ಮತ್ತು ಇತರ ಆರೋಪಿತರನ್ನು ಶೀಘ್ರ ಬಂಧಿಸಬೇಕು.

ಖಾಸಗಿ ಸಾರಿಗೆ ಸಿಬ್ಬಂದಿಗಳು ಇಂತಹ ಕೋಮು ಪ್ರಚೋದಿತ ವ್ಯವಸ್ಥೆ ಸೃಷ್ಟಿಸುವುದರ ವಿರುದ್ಧ ತೀವ್ರ ಜಾಗೃತಿ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದುಕೆ.ಅಶ್ರಫ್(ಮಾಜಿಮೇಯರ್)ಅಧ್ಯಕ್ಷರು.ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.