June 13, 2024

Vokkuta News

kannada news portal

ರಾಯಿ ಹಲ್ಲೆ ಸಂತ್ರಸ್ತರನ್ನು  ಭೇಟಿ ಮಾಡಿದ ಕೆ.ಅಶ್ರಫ್

ಇತ್ತೀಚೆಗೆ ರಾಯಿ ಬಂಟ್ವಾಳದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕ ಇಸಾಕ್ ಎಂಬ ಮುಸ್ಲಿಮ್ ವ್ಯಕ್ತಿಯನ್ನು ಸಂಘ ಪರಿವಾರದ ದುಷ್ಕರ್ಮಿಗಳು ಹಲ್ಲೆ ನಡೆಸಿದ ನಂತರ ಆಸ್ಪತ್ರೆಗೆ ದಾಖಲಾದ ಸಂತ್ರಸ್ತರನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರು,ಮಾಜಿ ಮೇಯರ್ ಕೆ
ಅಶ್ರಫ್ ಭೇಟಿ ಮಾಡಿದರು. ಈ ಸಂಧರ್ಭದಲ್ಲಿ ಮುಸ್ತಾಫಾ ಸಿ.ಎಂ. ಮೊಹಮ್ಮದ್ ಹನೀಫ್.ಯು ರವರು ಕೂಡಾ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ.ಬಿ.ರಾಮನಾಥ್ ರೈ ಮತ್ತು ಇತರ ಕಾಂಗ್ರೆಸ್ ಪದಾಧಿಕಾರಿಗಳನ್ನು ಭೇಟಿ ಮಾಡಿ ಘಟನೆಯ ಗಂಭೀರತೆ ಬಗ್ಗೆ ಅವರಿಗೆ ಮನವರಿಕೆ ಮಾಡಲಾಯಿತು.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.