March 19, 2025

Vokkuta News

kannada news portal

ಧಾರ್ಮಿಕ ಸೇವಾಕರ್ತ ನೌಶಾದ್ ಹಾಜಿ ಸೂರಲ್ಪಾಡಿ ಅಫಘಾತದಲ್ಲಿ ನಿಧನ: ಮುಸ್ಲಿಮ್ ಒಕ್ಕೂಟ ಸಂತಾಪ: ಕೆ.ಅಶ್ರಫ್.

ದ.ಕ.ಜಿಲ್ಲಾ ಮಾದರಸ ಮ್ಯಾನೇಜ್ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ,ಬೆಳ್ತಂಗಡಿ ದಾರುಸ್ಸಲಾ ಮ್ ಎಜುಕೇಷನ್ ಸೆಂಟರ್ ಕೋಶಾಧಿಕಾರಿ, ಮೂಡಬಿದ್ರಿ ದಾರುನ್ನೂರ್ ಎಜುಕೇಷನ್ ಸೆಂಟರ್ ಉಪಾಧ್ಯಕ್ಷರಾಗಿದ್ದ, ನಂಡೆ ಪೆಂಗಲ್ ವಿವಾಹ ಸಂಸ್ಥೆಯ ಮಾಜಿ ಅಧ್ಯಕ್ಷರು,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಸದಸ್ಯರು ಆಗಿದ್ದ,ಹಾಲಿ ಗಂಜಿ ಮಠ ದಲ್ಲಿ ವಾಸಿಸುತ್ತಿದ್ದ ನೌಶಾದ್ ಹಾಜಿ ಸೋರಲ್ಪಾಡಿ ಯವರು ಇಂದು ಬೆಳಿಗ್ಗೆ ವೇಣೂರು ಗೊಳಿಯಂಗಡಿಯಲ್ಲಿ ನಡೆದ ವಾಹನ ಮುಖಾಮುಖಿ ಅಪಘಾತದಲ್ಲಿ ಮೃತ ಹೊಂದಿರುತ್ತಾರೆ ಮತ್ತು ವಾಹನ ಚಾಲಕ ಮುಷರಫ್ ರವರು ನಿಧನ ಹೊಂದಿರುತ್ತಾರೆ. ನೌಶಾದ್ ಹಾಜಿ ಯವರು ಓರ್ವ ಸಮಾಜ ಮುಖೀ ಚಿಂತಕ,ಸೇವಕ ಮತ್ತು ಉದಾರತಾ ವ್ಯಕ್ತಿಯಾಗಿದ್ದರು. ಮೃತರ ಅಗಲಿಕೆಯಿಂದ ಇಂದು ಮುಸ್ಲಿಮ್ ಸಮುದಾಯ ಒಂದು ಸಂಸ್ಥೆಯನ್ನೇ ಕಳದು ಕೊಂಡಅಂತಿದೆ. ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಕೆ ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.