December 3, 2024

Vokkuta News

kannada news portal

ಇಂದು ನಗರದಲ್ಲಿ ‘ ಅರಿಯಿರಿ… ಪ್ರವಾದಿಯನ್ನು ‘ ಸಮಾರೋಪ ಸಮಾರಂಭ,ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾಗಿ : ಯುನಿವೆಫ್

ಮಂಗಳೂರು: ಯುನಿವೆಫ್ ಕರ್ನಾಟಕ ( ಎನ್. ಜಿ. ಒ) ಮಂಗಳೂರಿನ ಆಶ್ರಯದಲ್ಲಿ ಕಳೆದ ಎರಡು ತಿಂಗಳುಗಳಿಂದ ನಿರಂತರ ನಡೆಯುತ್ತಿರುವ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ. ಅ. ರವರನ್ನು, ಎಂಬ ಘೋಷ ವಾಖ್ಯದಡಿಯಲ್ಲಿ ಸಂವಾದ,ಚರ್ಚೆ,ವೃತ್ತಿಪರರೊಂಡಿಗೆ ಚರ್ಚೆ,ಪೋಸ್ಟರ್ ಅಭಿಯಾನ, ಸಾರ್ವಜನಿಕ ಸಭೆ, ವಾಹನ ಜಾಥಾ, ಬೀದಿ ಬದಿ ಕಾರ್ಯಕ್ರಮ ಇತ್ಯಾದಿ ಚಟುವಟಿಕೆಯಲ್ಲಿ ಇಸ್ಲಾಂ ಮತ್ತು ಮುಸ್ಲಿಮ್ ಸಮುದಾಯದ ಮೇಲೆ,ಸಹ ಸಮುದಾಯದ ಜನರಿಗೆ ಇರುವ ಅಪ ನಂಬಿಕೆ,ವ್ಯತ್ಯಯ ಅಭಿಪ್ರಾಯ ಗಳನ್ನು ಹೋಗಾಡಿಸುವ ಪ್ರಯತ್ನ ದಂತಹ ಕಾರ್ಯ ಚಟುವಟಿಕೆಗಳನ್ನು ಸಕ್ರಿಯವಾಗಿ ಹಲವಾರು ವರ್ಷದಿಂದ ಅಭಿಯಾನದ ಮುಖಾಂತರ ಮಾಡುತ್ತಾ ಬಂದಿದೆ.

ಇಂದು ಈ ಅಭಿಯಾನದ ಸಮಾರೋಪ ಸಮಾರಂಭ ವನ್ನು ನಗರದ ಪುರಭವನದಲ್ಲಿ ಸಂಜೆ 6.45 ಕ್ಕೆ ಆಯೋಜಿಸಲಾಗಿದ್ದು, ಪ್ರಮುಖ ಪ್ರಭಾಷನಕಾರರಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಮಂಗಳೂರು ಧರ್ಮ ಪ್ರಾಂತ್ಯದ ಅಧ್ಯಕ್ಷರಾದ ರೆ.ಫಾದರ್ ಪೀಟರ್ ಪೌಲ್ ಸಲ್ದಾನಾ ರವರು ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣಕಾರರಾಗಿ ರಫೀಯುದ್ದೀನ್ ಕುದ್ರೋಳಿ ಭಾಷಣ ಮಾಡಲಿದ್ದಾರೆ. ಸಂಜೆ 6.45 ರಿಂದ ಆರಂಭಗೊಂಡು ಸಭಾ ಕಾರ್ಯಕ್ರಮ ರಾತ್ರಿ 9.15 ರವರಿಗೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.