June 22, 2024

Vokkuta News

kannada news portal

ಧರ್ಮಪ್ರಚಾರಕರು ಹಿಂಸೆಯನ್ನು ಪ್ರಚೋಧಿಸಬಾರದು: ಯುನಿವೆಫ್ ಸಮಾರೋಪ ಸಭೆಯಲ್ಲಿ ರಮೇಶ್ ಕುಮಾರ್.

ಮಂಗಳೂರು:ಯುನಿವೆಫ್ ಕರ್ನಾಟಕ ( ಎನ್. ಜಿ. ಒ) ದ.ಕ ಆಶ್ರಯದಲ್ಲಿ ಕಳೆದ ಎರಡು ತಿಂಗಳುಗಳಿಂದ ನಿರಂತರ ನಡೆಯುತ್ತಿರುವ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ. ಅ. ರವರನ್ನು, ಎಂಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯ ಭಾಷಣ ಕಾರರಾಗಿ ಮಾತನಾಡುತ್ತಾ ಧರ್ಮ ಪ್ರಚಾರಕರು ಯಾವುದೇ ಕಾರಣಕ್ಕೂ ಹಿಂಸೆಯನ್ನು ಪ್ರಚೋದಿಸುವಂತಿಲ್ಲ ಎಂಬ ನಿಲುವು ವ್ಯಕ್ತ ಪಡಿಸಿದರು.

ಸಭೆಯನ್ನು ಉದ್ದೇಶಿಸಿ ಅದಕ್ಕೂ ಮುನ್ನ ಮಾತನಾಡಿದ ಮಂಗಳೂರು ಧರ್ಮ ಪ್ರಾಂತ್ಯದ ಗುರುಗಳಾದ ರೆವರೆಂಡ್ ಫಾದರ್ ಪೀಟರ್ ಪೌಲ್ ಸಲ್ದಾಣ ರವರು ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ತತ್ವಗಳ ಬಗ್ಗೆ ಮಾತನಾಡಿ ಮುಸಲ್ಮಾನ್ ಸಮುದಾಯ ತುರ್ತು ಸಂದರ್ಭಗಳಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೆ ಎಂದರು ಮತ್ತು ಅಫಘಾತ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ದಾನ ಮತ್ತು ಕೋವಿದ್ ಸಂದರ್ಭದ ಸೇವೆಯನ್ನು ನೆನಪಿಸಿದರು. ಫಾದರ್ ರವರು ಮುಂದುವರಿದು,ಇತ್ತೀಚೆಗೆ ಅಬುಧಾಬಿಯಲ್ಲಿ ರಾಜವಂಶಸ್ಥರಾದ ಶೇಕ್ ಮತ್ತು ವಿಶ್ವಗುರು ಫ್ರಾನ್ಸಿಸ್ ರವರು ಮಹತ್ತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ ಧರ್ಮದ ಸಂತರನ್ನು ಮತ್ತು ಧಾರ್ಮಿಕ ಸಂಖೇತಗಳನ್ನು ಹಿಂಸೆಗೆ ಮತ್ತು ಬಯೋತ್ಪಾದನೆ ಪ್ರಚಾರಕ್ಕೆ ಉಪಯೋಗಿಸುವ ಹುನ್ನಾರದ ವಿರುದ್ಧ ಸಮಗ್ರ ಕ್ರಮ ಕೈಗೊಂಡ ತೀರ್ಮಾನದ ಬಗ್ಗೆ ನೆನಪಿಸಿದರು.

ಸಭೆಯ ಕೊನೆಯಲ್ಲಿ ಸಂಸ್ಥೆಯ ಅಧ್ಯಕ್ಷರಾಗಿದ್ದ ರಫೀಯುದ್ದೀನ್ ಕುದ್ರೋಳಿ ರವರು ಮಾತನಾಡಿ ಯುಣಿವೆಫ್ ಕರ್ನಾಟಕ ಈ ಹಿಂದಿನ ಚಟುವಟಿಕೆ ಮತ್ತು ಇಸ್ಲಾಂ ಮತ್ತು ಪ್ರವಾದಿ ಯವರ ಪ್ರಮುಖ ಸಂದೇಶದ ಬಗ್ಗೆ ಮಾತನಾಡಿದರು.

ಆರಂಭದಲ್ಲಿ ಪ್ರಾಸ್ತಾವಿಕ ಭಾಷಣಕಾರರಾಗಿ ಖಾಲಿದ್ ರವರು ಮಾತನಾಡಿದರು.