ಮಂಗಳೂರು: ದಿ.ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರು,ಜಾಮಿಯಾ ಮಸೀದಿ ಕುದ್ರೋಳಿ ಇದರ ಅಧ್ಯಕ್ಷರಾದ ಹಾಜಿ. ಕೆ. ಎಸ್.ಮೊಹಮ್ಮದ್ ಮಸೂದ್ ರವರಿಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಇಂದು ಸನ್ಮಾನ ಸಲ್ಲಿಸಲಾಯಿತು.
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ನೇತೃತ್ವದಲ್ಲಿ ಇಂದು ಹಾಜಿ. ಕೆ. ಎಸ್.ಮೊಹಮ್ಮದ್ ಮಸೂದ್ ರವರಿಗೆ, ಅವರು ದೀ ಮುಸ್ಲಿಮ್ ಸೆಂಟ್ರಲ್ ಕಮಿಟಿ ಇದರ ಸತತ ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆ ಆದುದನ್ನು ಪರಿಗಣಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಅವಿಭಜಿತ ದ.ಕ.ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಕೈಕ ಮಾತೃ ಸಂಘಟನೆಯಾದ ದೀ ಮುಸ್ಲಿಮ್ ಸೆಂಟ್ರಲ್ ಕಮಿಟಿ ಜಿಲ್ಲೆಯ ಮುಸ್ಲಿಮರನ್ನು ಸಾಮೂಹಿಕವಾಗಿ ಪ್ರತಿನಿಧಿಸುತ್ತಿದ್ದು,ಹಾಜಿ. ಕೆ.ಎಸ್.ಎಂ.ಮಸೂದ್ ರವರ ಅಹನಿರ್ಶಿ ಸೇವೆಯನ್ನು ಪರಿಗಣಿಸಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅವರನ್ನು ಸನ್ಮಾನಿಸಿದೆ.
ಕೆ.ಅಶ್ರಫ್ ನೇತೃತ್ವದ ನಿಯೋಗದಲ್ಲಿ ಸಿ.ಎಂ.ಮುಸ್ತಾಫಾ,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ,ಮೊಯ್ದಿನ್ ಮೋನು,ಅಶ್ರಫ್ ಬದ್ರಿಯಾ, ಅಹ್ಮದ್ ಬಾವಾ ಬಜಾಲ್,ಅಬ್ದುಲ್ ಅಝೀಝ್ ಕುದ್ರೋಳಿ, ಷರೀಫ್ ನಾಟಿಕಲ್, ಹಿದಾಯತ್ ಮಾರಿಪಲ್ಲ ಮತ್ತು ಯಾಸೀನ್ ರವರು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ದ.ಕ.ಕಾಂಗ್ರೆಸ್ ರಾಜಿನಾಮೆ ಪ್ರಕ್ರಿಯೆಯಿಂದ ಘಾಡ ಪರಿಣಾಮ ಆಗಿದೆ: ಆನ್ ಲೈನ್ ಸಂವಾದದಲ್ಲಿ ಸಿರಾಜ್ ಬಜ್ಪೆ.
ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.
ಅ – ಜನಿವಾರಿಕೆ ಘಟನೆ, ಖಂಡಿಸಿ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಮಂಗಳೂರಿನಲ್ಲಿ ಪ್ರತಿಭಟನೆ.