June 14, 2024

Vokkuta News

kannada news portal

ಸಾಮಾಜಿಕ ಸಂಘಟನೆ ಕಾರ್ಯಕರ್ತ ಎಂ.ಜಿ.ಮೊಹಮ್ಮದ್ ನಿಧನ.

ಮಂಗಳೂರು : ನಗರದ ಬೋಳಾರ ಮೂಲದ ಹಾಲಿ ಕಂಕನಾಡಿಯಲ್ಲಿ ನಿವಾಸಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ದಾವಾ ವಿಂಗ್ ಮುಖ್ಯಸ್ಥರಾಗಿದ್ದ ಎಂ.ಜಿ. ಮುಹಮ್ಮದ್ (64) ರವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ , ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
2021ರ ಡಿಸೆಂಬರ್‌ನಲ್ಲಿ ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಮಸೀದಿ ಖುತುಬಾ ನಿರ್ವಹಿಸಲು ತೆರಳುವಾಗ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ವ್ಯತ್ಯಯ ಗೊಂಡು ಉರುಳಿ ಬಿದ್ದ ಪರಿಣಾಮ ಅವರ ಶಿರಕ್ಕೆ ಗಂಭೀರ ಗಾಯಗೊಂಡು. ನಿರ್ಧಿಷ್ಟ ಅವಧಿವರೆಗೆ
ಮತಿ ಹೀನರಾಗಿದ್ದು,ನಂತರ ಚೇತರಿಸಿಕೊಂಡಿದ್ದರು. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಇವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ನಗರದ ಸ್ಟೇಟ್‌ಬ್ಯಾಂಕ್ ಬಳಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಇವರು ಎಸ್‌ಕೆಎಸ್‌ಎಂ ದಅವಾ ಕಾರ್ಯದರ್ಶಿಯಾಗಿ ಸಂಘಟನೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರೋಗಿಗಳಿಗೆ ವೈದ್ಯಕೀಯ ನಿಧಿ ಸೇವೆ, ಶೈಕ್ಷಣಿಕ ನೆರವು, ಮಯ್ಯತ್ ಪರಿಪಾಲನೆ, ರಕ್ತದಾನ ಶಿಬಿರ,ಪತ್ರಿಕಾ ಸೇವೆ ಇತ್ಯಾದಿ ಕಾರ್ಯದಲ್ಲೂ ಅಹನಿರ್ಶಿ ದುಡಿದಿದ್ದರು.
ಮಂಗಳವಾರ ಬೆಳಗ್ಗೆ 10.30ಕ್ಕೆ ಮಂಗಳೂರು ನಗರದ ಕಂಕನಾಡಿಯ ಸಲಫಿ ಸೆಂಟರ್‌ಗೆ ಮೃತದೇಹವು ತಲುಪಲಿದ್ದು,ನಗರದ ಹೊರ ವಲಯದ ಪರ್ಮನ್ನುರು ಪಟ್ಲದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.