June 21, 2025

Vokkuta News

kannada news portal

ದ.ಕ.ಅಹಿತಕರತೆ, ಕಾಂಗ್ರೆಸ್ ಮುಖಂಡರ ರಾಜಿನಾಮೆ ಪ್ರಕ್ರಿಯೆ,ಅಧ್ಯಯನ ಸಮಿತಿ ರಚನೆ, ಸದಸ್ಯರೊಂದಿಗೆ ಆನ್ ಲೈನ್ ಸಂವಾದ.

ರಾಜಿನಾಮೆ ಪರ್ವ ಪ್ರಾರಂಭ ಆಗಿ, ರಾಜಿನಾಮೆ ನೀಡುವ ಪ್ರಕ್ರಿಯೆ ಆಗಿದೆ, ನಾನು ಕೂಡಾ ರಾಜಿನಾಮೆ ಕೊಟ್ಟಿದ್ದೇನೆ, ಗೊಂದಲವನ್ನು ಪರಿಹಾರ ಗೊಳಿಸಬೇಕು ಎಂಬುದಾಗಿದೆ, ಕಾರ್ಯಕರ್ತರ ಭಾವನೆ ಏನಿದೆ, ಸಮುದಾಯದ ಅಧ್ಯಯನ ಮಾಡಿ ವರದಿ ನೀಡುವುದು ಆಗಿದೆ ಇದರ ಉದ್ದೇಶ

ವೆಬ್: ದ.ಕ.ಜಿಲ್ಲೆಯಲ್ಲಿ ಇತ್ತಿಚೆಗೆ ನಡೆದ ಗುಂಪು ಹತ್ಯೆ, ಕ್ರಿಮಿನಲ್ ಹಿನ್ನೆಲೆ ಆರೋಪಿಯ ಹತ್ಯೆ, ಕೊಳತ ಮಜಲು ಅಬ್ದುಲ್ ರಹಿಮಾನ್ ಹತ್ಯೆ, ಹಿಂದುತ್ವ ಸಂಘಟನೆ ಸದಸ್ಯರಿಂದ ದ್ವೇಷ ಭಾಷಣ ನಿಯಂತ್ರಿಸುವಲ್ಲಿ ಪೊಲೀಸು ವೈಫಲ್ಯ, ಸ್ವಯಂ ಪ್ರೇರಿತ ಬಂದ್, ನಿರಂತರ ಕೋಮು ವಿದ್ವೇಷತೆ ಇತ್ಯಾದಿ ಬೆಳವಣಿಗೆಯಿಂದಾಗಿ ದ.ಕbಕಾಂಗ್ರೇಸ್ ಅಲ್ಪ ಸಂಖ್ಯಾತ ವಿಭಾಗದ ಮುಸ್ಲಿಮ್ ಮುಖಂಡರು ಇತ್ತೀಚೆಗೆ ಸಾಮೂಹಿಕ ರಾಜಿನಾಮೆ ಪ್ರಕ್ರಿಯೆಗೆ ಮುಂದಾಗಿದ್ದು ಈ ಗೊಂದಲ ನಿವಾರಣೆಗಾಗಿ ಕೆಪಿಸಿಸಿ ರಾಜ್ಯದ ಎಂಟು ಪ್ರತಿನಿಧಿ ನಿಯೋಗ ರಚಿಸಿದ್ದು ಜಿಲ್ಲೆಯಿಂದ ಎಂಟು ಜನ ಸದಸ್ಯರನ್ನು ಅಧ್ಯಯನ ಸಮಿತಿಗೆ ಆಯ್ಕೆ ಮಾಡಿದ್ದು, ನಿನ್ನೆ 31 ಮೇ 2025ರಂದು ಭಾ. ಕಾ. ಘಂಟೆ 09.00 ಕ್ಕೆ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ  ಅಧ್ಯಯನ ಸಮಿತಿ ಸದಸ್ಯರಾದ ಪುತ್ತೂರು ಏಚ್ ಮೊಹಮ್ಮದ್ ಆಲಿ ಅಧ್ಯಕ್ಷರು ಪುತ್ತೂರು ನಗರ ಬ್ಲಾಕ್ ಕಾಂಗ್ರೆಸ್ ರವರೊಂದಿಗೆ ವಿಷಯದ ಬಗ್ಗೆ ಆನ್ ಲೈನ್ ಸಂವಾದ ಕಾರ್ಯಕ್ರಮ ಏರ್ಪಡಿಸಲಾಯಿತು. ಮೊಹಮ್ಮದ್ ಹನೀಫ್.ಯು ನಿರೂಪಣೆ ಮಾಡಿ, ಅಶ್ಫಾಕ್ ತೋಟಾಲ್ ಪರಿಚಯಿಸಿದರು. ಹಾರೂನ್ ರಶೀದ್ ಅಗ್ನಾಡಿ ವಂದಿಸಿದರು.

ಮೊಹಮದ್ ಹನೀಫ್ ಯು : ಏಚ್.ಮೊಹಮ್ಮದ್ ಆಲಿ ಸಾಬ್, ಹಾಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತವಾಗಿ ನಡೆಯುತ್ತಿರುವ ರಾಜಕೀಯ ವಿಧ್ಯಾಮಾನಗಳ ಬಗ್ಗೆ ಅಧ್ಯಯನ ನಡೆಸಲು ದ.ಕ.ಜಿಲ್ಲಾ ಕಾಂಗ್ರೆಸ್.ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಎಂಟು ಜನ ಸದಸ್ಯರ ಅಧ್ಯಯನ ಸಮಿತಿಯಲ್ಲಿ ಓರ್ವರಾಗಿ ನೇಮಕ ಮಾಡಿ, ಚೇರ್ ಮನ್ ಆಗಿ ಜಿ. ಏ.ಬಾವಾ,ರಾಜ್ಯ ಕೆಪಿಸಿಸಿ ಯಿಂದ ಎಂಟು ಜನ ಪ್ರಮುಖ ವ್ಯಕ್ತಿಗಳನ್ನು ನೇಮಿಸಲಾಗಿ ಅಧ್ಯಯನ ಸಮಿತಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ ಮತ್ತು ಈ ಬಗ್ಗೆ ನಿಮ್ಮ ಗಮನ ಏನು?.

ಮೊಹಮದ್ ಅಲಿ ಏಚ್: ಇಡೀ ಜಿಲ್ಲೆಯಲ್ಲಿ ಸಂಭವಸಿದಂತಹ ಅಹಿತಕರ ಘಟನೆ, ಎರಡು ವರ್ಷ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದೂ ಕೂಡಾ ಬಿಜೆಪಿಯ ಬಿಜೆಪಿಯ ಮತ್ತು ಸಂಘ ಪರಿವಾರದವರ ಅಟ್ಟ ಹಾಸ ನಿಲ್ಲಿಸಲು ವಿಫಲವಾಗಿದೆ ಎಂಬ ಒಂದು ಭಾವನೆ ಇಂದು ಎಲ್ಲಾ ಕಾರ್ಯಕರ್ತರಿಗೆ ಇದೆ, ಮುಸ್ಲಿಮ್ ಸಮುದಾಯಕ್ಕೆ ಇದೆ. ಈ ಗೊಂದಲವನ್ನು ನಿವಾರಣೆ ಮಾಡಲು ಬೇಕಾಗಿ ವರದಿ ನೀಡಲು ಬೇಕಾಗಿ ಎಂಟು ಜನರ ಒಂದು ಕಮಿಟಿ ನನ್ನನ್ನು ಸೇರ್ಪಡೆ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಸಭೆ ಕರೆಯಲಿಲ್ಲ, ಇನ್ನೂ ನೋಡಬೇಕಷ್ಟೇ….

ಮೊಹಮದ್ ಹನೀಫ್ ಯು: ಏಚ್.ಮೊಹಮ್ಮದ್ ಆಲಿ ಸಾಬ್, ಈ ಒಂದು ಅಧ್ಯಯನ ಸಮಿತಿ ಮೂಲ ಉದ್ದೇಶ ಏನು ಹೇಗೆ ಇದು ಕಾರ್ಯ ನಿರ್ವಹಣೆ ಮಾಡುತ್ತದೆ.

ಎಚ್ಚ್ ಮೊಹಮ್ಮದ್ ಆಲಿ ಸಾಬ್: ನಿಜವಾಗಿ ಇದು ಇತ್ತೀಚೆಗೆ ನಡೆದ ಗೊಂದಲದ ಬಗ್ಗೆ ಆಗಿದೆ,ರಾಜಿನಾಮೆ ಪರ್ವ ಪ್ರಾರಂಭ ಆಗಿ, ರಾಜಿನಾಮೆ ನೀಡುವ ಪ್ರಕ್ರಿಯೆ ಆಗಿದೆ, ನಾನು ಕೂಡಾ ರಾಜಿನಾಮೆ ಕೊಟ್ಟಿದ್ದೇನೆ, ಗೊಂದಲವನ್ನು ಪರಿಹಾರ ಗೊಳಿಸಬೇಕು ಎಂಬುದಾಗಿದೆ, ಕಾರ್ಯಕರ್ತರ ಭಾವನೆ ಏನಿದೆ, ಸಮುದಾಯದ ಅಧ್ಯಯನ ಮಾಡಿ ವರದಿ ನೀಡುವುದು ಆಗಿದೆ ಇದರ ಉದ್ದೇಶ,ಕೆಪಿಸಿಸಿ ಮಟ್ಟದಲ್ಲಿ ಒಂದು ಕಮಿಟಿ ಆದದ್ದು ಗಮನಕ್ಕೆ ಬಂದಿದೆ, ಅವರು ನಾಯಕ್ರನ್ನು ಭೇಟಿ ಮಾಡಿಯಾರು, ನಾವು ಕಾರ್ಯಕರ್ತರನ್ನು ಭೇಟಿ ಮಾಡಬೇಕಿದೆ,ಸಮುದಾಯದ ಮತ್ತು ಕಾರ್ಯಕರ್ತರ ನೋವು ನಮಗೆ ಗೊತ್ತಿದೆ, ಆದುದರಿಂದ ವರದಿ ನೀಡುವಲ್ಲಿ ಯಾವುದೇ ಮುಲಾಜು ಪ್ರದರ್ಶಿಸಲು ಆಗುವುದಿಲ್ಲ, ನಾವು ವಸ್ತು ನಿಷ್ಠ ವಾಗಿ ವರದಿ ನೀಡಬೇಕಾಗುತ್ತದೆ.ಪಕ್ಷದ ಹಿತ ದೃಷ್ಟಿಯಿಂದ ಕೂಡ ಇದು ಅಗತ್ಯ, ರಾಜ್ಯ ಸರಕಾರದ ಮುಖ್ಯ ಮಂತ್ರಿ ಅಥವಾ ಗೃಹ ಸಚಿವರಿಗೇ ಸಂಪೂರ್ಣ ಮಾಹಿತಿ ಇಲ್ಲ ಎಂಬುದು ನಮ್ಮ ಭಾವನೆ , ಈ ವಿಷಯವನ್ನು ಹೈ ಕಮಾಂಡ್ ಗೆ ತಲುಪಿಸಬೇಕು ಎಂಬ ಇಚ್ಛೆ ನಮ್ಮದು, ಆ ಸಾಧ್ಯತೆ ಇದ್ದರೆ ಮಾತ್ರ ನಾನು ಕಮಿಟಿಯಲ್ಲಿ ಇರುತ್ತೇನೆ.ಇಲ್ಲದಿದ್ದಲ್ಲಿ ನಾನು ನಿರ್ಗಮಿಸುತ್ತೇನೆ, ಯಾಕೆಂದರೆ ಯಾವುದೇ ಮುಲಾಜು ಇಲ್ಲದೆ ಸ್ಪಷ್ಟ ಮಾಹಿತಿ ನೀಡದಿದ್ದರೆ, ಮುಂದೆ, ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಆಗುತ್ತದೆ.ಎಲ್ಲರೂ ಇದೆ ನಿಲುವು ಹೊಂದಿದ್ದಾರೆ ಎಂದು ನಮ್ಮ ಭಾವನೆ , ಸಭೆಯಲ್ಲಿ ಏನು ನಡೆಯಲಿದೆ ಎಂದು ನೋಡುವ!.

ಮೊಹಮದ್ ಹನೀಫ್ ಯು: ನೀವೂ ಕೂಡ ರಾಜಿನಾಮೆ ನೀಡಿದ ಬಗ್ಗೆ ಹೇಳಿದ್ದೀರಿ! ಆ ಪ್ರಕ್ರಿಯೆಯಲ್ಲಿ ನಾನು ಕೂಡಾ ಇದ್ದೆ ಎಂದು ಹೇಳಿದ್ದೀರಿ,ದ.ಕ.ಜಿಲ್ಲೆಯಲ್ಲಿ ಇರುವ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯಕ್ಕೆ ನಿರಂತರವಾಗಿ ಇಲ್ಲಿ ದ್ವೇಷ ಭಾಷಣ, ಮುಜುಗರತೆ, ಹೀಯಾಳಿಸುವಿಕೆ, ಕಾನೂನು ಸುವ್ಯವಸ್ಥೆಗೆ ಇರುವ ಭಂಗ, ಇಂತಹ ಪರಿಸ್ಥಿತಿಯಲ್ಲಿ ಈ ಜಿಲ್ಲೆಯ ಒಂದು ಸ್ಪಷ್ಟ ನಿಲುವು ಆಡಳಿತ ಪಕ್ಷಕ್ಕೇನರಿವಿಲ್ಲವೇ? ಅಥವಾ ಈ ವಿಷಯವನ್ನು ಬೆಂಗಳೂರು ಮಟ್ಟಕ್ಕೆ ತಲುಪಿಸುವ ನಾಯಕರಿಲ್ಲವೇ? ತಲುಪಿಸದಿದ್ದರೋ ನಾವೇ ನಿಭಾಯಿಸುತ್ತೇವೆ ಎಂಬ ಜವಾಬ್ದಾರಿಯನ್ನು ಇಲ್ಲಿನ ಯರೇ ಜನಪ್ರತಿನಿಧಿ ವಹಿಸಿದ್ದರೂ, ಅಥವಾ ಇಂದಲ್ಲ ನಾಳೇ ಸರಿಹೋಗುತ್ತೆ ಎಂಬ ಅಡ್ಜೆಸ್ಟ್ ಮೆನ್ಟ್ ಸ್ಥಿತಿಗೆ ಇಲ್ಲಿನ ಸೆಟ್ ಆಗಿದಾ?.

ಎಚ್ಚ್ ಮೊಹಮದ್ ಅಲಿ: ದ್ವೇಷ ಭಾಷಣದ ಬಗ್ಗೆ ಎಲ್ಲರಿಗೂ ಅರಿವಿದೆ, ಈ ಬಗ್ಗೇ ಪ್ರಾರಂಭದಲ್ಲಿಯೇ ಕಾರ್ಯಕರ್ತರು ದ್ವನಿ ಎತ್ತಿದ್ದಾರೆ.ಕಳೆದ ಎರಡು ವರ್ಷದಲ್ಲಿ ಇವತ್ತು ನಾಳೆ ಕ್ರಮ ಜರುಗಬಹುದು ಎಂಬ ಭಾವನೆಯಲ್ಲಿ ಕಾರ್ಯಕರ್ತರು ಎರಡು ವರ್ಷ ಕಾಯ್ದರು, ಈ ಸ್ಥಿತಿ ನಂಗೆ ಅರ್ಥ ಆಗುತ್ತಾ ಇಲ್ಲ, ಜಿಲ್ಲೆಯ ನಾಯಕರು ಈ ವಿಷಯವನ್ನು ಸಮರ್ಪಕವಾಗಿ ತಿಳಿಸಲಿಲ್ಲವೇ? ಎಂಬುದು.
2013 ಕ್ಕೆ ಒಮ್ಮೆ ಸಿದ್ದರಾಮಯ್ಯ ಅವರನ್ನು ನಾವು ಜಿಲ್ಲೆಯ ಸರ್ವರೂ ನಿಯೋಗ ತೆರಳಿ ಚರ್ಚೆ ಮಾಡಿದ್ದೆವು. ಏನು ಮಾಡಬೇಕು ಎಂದು ಅದು ಅನುಷ್ಠಾನಕ್ಕೆ ಆಗಲಿಲ್ಲ, ಈ ಬಾರಿ, ಈ ಜಿಲ್ಲೆಯ ವಿಷಯವೇ, ಈ ಜಿಲ್ಲೆಯ ಸರಕಾರದ ಗಮನದಲ್ಲಿ ಇಲ್ಲದಂತೆ ಇತ್ತು, ಯಾಕೆಂದರೆ ಇಲ್ಲಿ ನಡೆಯುವುದು ಎಲ್ಲಾ ಬೀಜೆಪಿಯರದ್ದು ಎಂದು, ಹೇಳುವುದಾದರೆ, ಜೆರೋಸ ಶಾಲೆಯ ವಿಷಯದಲ್ಲಿ ಶಾಲೆಯ ಎದುರಿಗೆ ಪ್ರತಿಭಟನೆ ಮಾಡಿದರು ಆಗ ಕೂಡ ಅವರ ವಿರುದ್ಧ ಕ್ರಮ ಆಗಲಿಲ್ಲ, ನೈತಿಕ ಪೋಸೀಸುಗಿರಿ ಮಾಡಿದರು, ದ್ವೇಷ ಭಾಷಣ ನಿರಂತರ ಮಾಡಿದರು, ಪ್ರಭಾಕರ ಭಟ್ಟ ಮುಸ್ಲಿಮರನ್ನು ಕ್ರೈಸ್ತರನ್ನು ನಿರಂತರ ಧಾಳಿ ನಡೆಸಿದರು, ಇದಕ್ಕೆ ಕಡಿವಾಣ ಏನು ಅಂದರೆ,ಕಾರ್ಯಕರ್ತರಿಗೆ ಅದನ್ನು ಹೇಳ್ಬೇಕಿದೆ, ಕೇಂದ್ರ ಸರಕಾರ ಮೋದಿ ಸರ್ಕಾರ ದ್ವೇಷ ಭಾಷಣಕ್ಕೆ ರಿಯಾಯಿತಿ ನೀಡಿದಂತೆ ಇದೆ,, ಅವರ ಮೇಲೆ ಎಫ್ಫ್ ಐ ಆರ್ ಮಾಡಕೂಡದು ಎಂದು, ಅರೇಶ್ಟ್ ಮಾಡಬಾರದು, ಎಫ್ ಐ ಆರ್ ಆದರೂ ಆರೇಷ್ಟ್ ಮಾಡಬಾರದು ಎಂದು, ಅದಕ್ಕೆ ನಿಯಮ ರೋಪಿಸಾಗಿದೆ , ತಿದ್ದು ಪಡಿ ಆಗಿದೆ,ಕಾರ್ಯಕರ್ತರಿಗೆ ಈ ವಿಷಯ ಹೇಳಬೇಕಿತ್ತು ಅದು ಹೇಳಲಿಲ್ಲ, ಕಾರ್ಯಕರ್ತರಿಗೆ ಒಂದು ಕೊಂಡಿ ಇಲ್ಲದಂತಾಗಿದೆ, ಒಂದು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದಂತೆ ಆಗಿದೆ ಎಂದು ಸಮುದಾಯಕ್ಕೆ ಮತ್ತು ಕಾರ್ಯಕರ್ತರಿಗೆ ಇದೆ. 2023 ನೇ ಚುನಾವಣೆಯಲ್ಲೂ ಇಡೀ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂದು ನೋಡಲಿಲ್ಲ ನಮ್ಮ ಸಮುದಾಯ, ಸಿದ್ದ ರಾಮಯ್ಯ ಮುಖ್ಯ ಮಂತ್ರಿ ಆಗಬೇಕು, ಬಿಜೆಪಿ ಅಟ್ಟ ಹಾಸ ನಿಲ್ಲಬೇಕು ಎಂದು ಎಲ್ಲರೂ ಸೇರಿ ಮತ ಹಾಕಿದ್ದಾರೆ, ಎಸ್ಡಿಪಿಐ ಪಕ್ಷದ ಅನುಯಾಯಿಗಳು ಕೂಡ ಕಾಂಗ್ರೇಸ್ ಗೆ ಮತ ಹಾಕಿದ್ದಾರೆ.ಇಲ್ಲಿನ ಕಾರ್ಯಕರ್ತರ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕಾರ್ಯ ನಿರ್ವಹಣೆ ಮಾಡಲಿಲ್ಲ ಎಂಬ ಭಾವನೆ ಉಂಟು, ನಾಯಕತ್ವ ಕೂಡ ಪೂರಕವಾಗಿ ಸ್ಪಂದನೆ ಮಾಡಲಿಲ್ಲ ಎಂಬ ಭಾವನೆ ಇದೆ. ಅದೇ ಇಂದಿನ ಆಕ್ರೋಶಕ್ಕೆ ಕಾರಣ. ಈ ಬಗ್ಗೆ ಕಾಂಗ್ರೇಸ್ ಆಫೀಸ್ ನಲ್ಲಿ ಕೂಡ ಚರ್ಚೆ ಆಗಿದೆ, ಇಡೀ ಜಿಲ್ಲೆಯ ರಾಜಕೀಯ ಸುಲಭದಲ್ಲೇ ಅರ್ಥ ಆಗುವುದಿಲ್ಲ. ಜಿಲ್ಲೆಯ ನಾಯಕರು ಯಾಕೆ ಈ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಲಿಕ್ಕೂ ಆಗುವುದಲ್ಲ, ಪಕ್ಷದ ಚೌಕಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಿದೆ. ಯಾಕೆ ಇದು ಈ ರೀತಿ ಬಾಕಿ ಇದೆ, ಅಥವಾ ಬಿಜೆಪಿ ಕೈಯಲ್ಲಿಯೇ ಈ ಪೊಲೀಸು ಇಲಾಖೆ ಇದೆಯೇ, ಅಥವಾ ಕಾಂಗ್ರೆಸ್ ನ ನಿಯಂತ್ರಣ ಇಲ್ವೇ? ಅಥವಾ ಇದಕ್ಕೆ ಸಂಭಂದವೆ ಇಲ್ಲದಂತೆ ಇದೆಯಾ? ಇದು ಒಂದು ಅರ್ಥ ಆಗುತ್ತಾ ಇಲ್ಲ, ನಾವು ಅಷ್ಟೂ ಹಿರಿಯ ನಾಯಕರಾಗಿ ನಮಗೆ ಅರ್ಥ ಆಗುತ್ತಾ ಇಲ್ಲ, ಮತ್ತೆ ಕಾರ್ಯಕರ್ತರಿಗೆ ಅರ್ಥ ಆಗುತ್ತಾ?.

ಮೊಹಮದ್ ಹನೀಫ್ ಯು.: ಏಚ್.ಮೊಹಮದ್ ಅಲಿ ಸಾಬ್,ಕಳೆದ ಮೂವತ್ತು ವರ್ಷದಿಂದ ನಾವು ವೀಕ್ಷಿಸುತ್ತಿದ್ದೇವೆ,ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕರಾವಳಿ ಜಿಲ್ಲೆಗಳಲ್ಲಿ, ಪ್ರಮುಖ ಮೂರು ಸಮುದಾಯ, ಹಿಂದುಳಿದ ವರ್ಗದ ಬಿಲ್ಲವ ಸಮುದಾಯ, ಬ್ಯಾರಿ ಮತ್ತು ಭಂಟ್ ಸಮುದಾಯ, ಕಳೆದ ಹಲವು ವರ್ಷಗಳಿಂದ,ವಿವಿಧ ವಿಷಯಗಳಲ್ಲಿ, ಲವ್ ಜಿಹಾದ್, ನೈತಿಕ ಪೊಲೀಸ್ ಗಿರಿ,ಗೋ ಹತ್ಯೆ,ದೇಶ ಪ್ರೇಮ ವಿಷಯದಲ್ಲಿ ದೂರುವಿಕೆ, ಪರಸ್ಪರ ಎತ್ತಿ ಕಟ್ಟಿಸುವಿಕೆ ಇದ್ದದ್ದು,ಬ್ಯಾರಿ ಮತ್ತು ಬಿಲ್ಲವ ಸಮುದಾಯದ ಮದ್ಯೆ ಇರುತ್ತಿತ್ತು, ಕಳೆದ ಲೋಕಸಭಾ ಚುನಾವಣೆವರೆಗೆ, ಆನಂತರ ಬಿಲ್ಲವ ಸಮುದಾಯ ಸ್ವಲ್ಪ ಜಾಗೃತ ಸ್ಥಿತಿಗೆ ಬಂದಿತ್ತು , ನಾವು ಇಲ್ಲಿ ಬಳಕೆ ಆಗುತ್ತಾ ಇದ್ದೇವೆ ಎಂದು,ಅವರ ಎಲ್ಲ ನಾಯಕತ್ವ ಮುಗಿಯುತ್ತಾ ಬಂದಿತ್ತು, ಮೊನ್ನೆಯ ಬೆಳವಣಿಗೆಯ ನಂತರ ಇಲ್ಲಿ ಭಂಟ ಬ್ಯಾರಿ ವೈಶ್ಯಮ್ಮ ಸೃಷ್ಟಿಸುವ ಒಂದು ಹೊಸ ಅಧ್ಯಾಯ ಶುರು ಆಗಿದೆ ನಮಗೆ ಭಾವನೆ ಆಗುತ್ತದಾ?…

ಮೊಹಮದ್ ಅಲಿ ಏಚ್: ಆರ್.ಎಸ್.ಎಸ್.ಅಜೆಂಡಾ ಆರ್.ಎಸ್.ಎಸ್. ಸ್ಥಾಪನೆ ಆಗಿ 2025 ಕ್ಕೆ ನೂರು ವರ್ಷ ತುಂಬುತ್ತದೆ,ಅವರು ನೂ ಈ ಯಶಸ್ವಿಗೆ ಕಾದಿದ್ದಾರೆ, ಆ ರೀತಿಯಲ್ಲಿ ಅವರ ಪ್ರಯತ್ನ ಆಗಿದೆ, ಅವರು ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ, ಹಿಂದೂ ಮುಸ್ಲಿಂ ಬೇರ್ಪಡಿಸುವಿಕೆ ಮಾಡುವ ಕಾರ್ಯಕ್ರಮದಲ್ಲಿ ಅವರು ಐವತ್ತು ಶೇಕಡಾ ಯಶಸ್ವಿ ಕೂಡ ಆಗಿದ್ದಾರೆ. ಅದೇ ನಮಗೆ ಸಮಸ್ಯೆ ಆಗಿದೆ, ಎಲ್ಲಾ ಜಾತಿಯವರೂ, ಹೇಳುವುದಾದರೆ ನಮ್ಮ ಪುತ್ತೂರಿನಲ್ಲಿ ಬಂಟ ಸಮುದಾಯ ಕಾಂಗ್ರೇಸ್ ನಲ್ಲಿ ಎಲ್ಲಾ ನಾಯಕರು ಬಂಟ ಸಮುದಾಯದವರೆ ಇದ್ದದ್ದು, ಕಾಲ ಕ್ರಮೇಣ ಅವರೆಲ್ಲ ಬಿಜೆಪಿಗೆ ಸೇರಲು ಶುರು ಮಾಡಿದರು,ಈಗ ನಮ್ಮಲ್ಲಿ ಇದ್ದಾರೆ ಭಂಟ ಸಮುದಾಯ ಇಲ್ಲ ಅಂತ ಅಲ್ಲ, ಆದರೆ ಮತದಾರರು ಇಲ್ಲ, ಅದು ಕಾಂಗ್ರೆಸ್ ಗೆ ಸೇರುತ್ತ ಇದ್ದಾರೆ, ಹೇಳುವುದಾದರೆ ಅವರ ಪ್ರಯತ್ನ ಆ ರೀತಿ ಆಗುತ್ತಾ ಇದೆ, ಕೋಮು ಅಂದರೆ ಮುಸ್ಲಿಮ್ ರನ್ನು, ಆ ರೀತಿಯಲ್ಲಿ ಅವರನ್ನು ತಲೆ ತಿರುಗಿಸಿ, ಸೋಷಿಯಲ್ ಮೀಡಿಯಾ ಅವರನ್ನು ಆ ರೀತಿಯಲ್ಲಿ ಮುಸ್ಲಿಮ್ ರವರನ್ನು ಒಂದು ತರಾ ಅಲರ್ಜಿ ಆಗುವ ರೀತಿಯಲ್ಲಿ, ಅವರ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಇದೆ, ಅದಕ್ಕೆ ನಮ್ಮಲ್ಲಿ ಕೌಂಟರ್ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಅದಕ್ಕೆ ಕೌಂಟರ್ ವ್ಯವಸ್ಥೆ ಇಲ್ಲ, ಕೌಂಟರ್ ನೀಡುವುದೆಂದರೆ, ಈಗ ಅವರವರ ಖುಷಿ ಆದರಿಸಿ ಮಾಡುವುದಲ್ಲದೆ, ಕೆಲವು ಯುವಕರು ಸೋಷಿಯಲ್ ಮೀಡಿಯಾದಲ್ಲಿ ಮಾಡುವುದು ಹೊರತು, ಒಂದು ಪಾರ್ಟಿ ಎಂಬ ನೆಲೆಯಲ್ಲಿ ಪರಿಣಾಮ ಕಾರೀ ಎಂಬ ರೀತಿಯಲ್ಲಿ ಅದನ್ನು ಕೌಂಟರ್ ಮಾಡುವ ರೀತಿಯಲ್ಲಿ ಪಾರ್ಟಿ ಮಾಡುತ್ತಾ ಇಲ್ಲ, ದೇಶ ವ್ಯಾಪ್ತಿಯಲ್ಲಿ ನಾವು ನೋಡುವುದಾದದ್ರೆ ರಾಹುಲ್ ಗಾಂಧಿಯನ್ನು ಎನೇನೋ ಟೀಕೆ ಮಾಡಿದ್ದರು, ಸೋನಿಯಾ ಗಾಂಧಿಯವರನು ಏನೆಲ್ಲ ಇಲ್ಲದ ಸಲ್ಲದ ಟೀಕೆಗಳನ್ನು ಇನ್ನಿತರ ನಾಯಕರನ್ನು ಟೀಕೆ ಮಾಡಿದ್ದು, ನೆಹರೂ ಅವರನ್ನು ಕೂಡ ಏನೆಲ್ಲ ಅವಹೇಳನ ಮಾಡುವಗ ಕೂಡ ಒಂದು ಪಕ್ಷ ಎಂಬ ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವುದಾಗಲಿ ಅವರ ಮೇಲೆ ಕಾನೂನು ಹೋರಾಟ ಮಾಡುವುದಾಗಲಿ ಆಗದೆ ಇರುವುದು ನಮ್ಗೆ ಸಮಸ್ಯೆ ಆಗಿದೆ.

ಇಂದು ರಾಜ್ಯದಲ್ಲಿ ಲೀಗಲ್ ಸೆಲ್ ಉಂಟು, ಆದರೆ ಈಗ ಕೌಂಟರ್ ಮಾಡುವ ಶಕ್ತಿ ಇವರು ನೀಡುತ್ತಾ ಇಲ್ಲ ಎಂದು ಕಾಣುತ್ತದೆ,ಇದರ ಬಗ್ಗೆ ಹೋರಾಟ,ದ್ವೇಷ ಭಾಷಣ ಮಾಡುವವರ ವಿರುದ್ಧ ದೂರು ನೀಡಲು ಎಲ್ಲಾ ಮಾಡಲು ಯುವಕರು ರೆಡಿ ಇದ್ದಾರೆ, ಆದರೆ ಹಿನ್ನೆಲೆ ಬೆಂಬಲ ಬೇಕು, ಕೇವಲ ದೂರು ನೀಡಿದರೆ ಸಾಲದು ಅದನ್ನು ಹಿಂಬಾಲಿಸಲು, ಆರ್ಥಿಕ ಬೆಂಬಲ ಬೇಕು, ಇಂದು ನಮ್ಮ ಸಮುದಾಯದ ಸಮಸ್ಯೆ ಕೂಡ ಅದೇ ಯುವಕರಿಗೆ ಆಕ್ರೋಶ ಆಗುತ್ತದೆ , ಸಮುದಾಯದ ಜನರು ಎಲ್ಲರೂ ಇದಕ್ಕೆ , ಬೆಂಬಲ ನೀಡುವಂತಹ ಸ್ಥಿತಿ ಕಾಣುತ್ತಾ ಇಲ್ಲ,ನಾನು ನೋಡಿದೆ, ಪುತ್ತೂರಿನಲ್ಲಿ ಕೂಡ ನಾವು ಎಷ್ಟೋ ಚರ್ಚೆ ಮಾಡಿದ್ದೇನೆ, ಅವರು ದ್ವೇಷ ಭಾಷಣ ಮಾಡುವಾಗ ಅವರ ಮೇಲೆ ಕೇಸು ಮಾಡುವುದಿಲ್ಲ, ಎರಡು ಜನ ಹೋಗಿ ದೂರು ನೀಡುವುದು, ಅವರಿಗೇನೆ ನಿರುತ್ಸಾಹ ಆಗುತ್ತದೆ,ಯಾರು ಬೆಂಬಲ ಇಲ್ಲ ಎಂದು, ನಮ್ಮ ಕ್ಷೀನತೆ ಅವರೀಗ ಬಲ ಆಗಿದೆ, ನಮ್ಮ ದೌರ್ಬಲ್ಯವೇ ಅವರ ಯಶಸ್ವಿಗೆ ಕಾರಣ ಇಂದು ಇಡೀ ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯ ಒಗ್ಗಟ್ಟಿನಿಂದ ಪ್ರಯತ್ನ ಮಾಡಿದರೆ ಆಗುತ್ತದೆ, ನಾವು ಒಂದು ಸಭೆ ಸೇರುವಾಗ ಜನ ಜಮಾವಣೆ ಆಗುವುದಲ್ಲ,