July 20, 2025

Vokkuta News

kannada news portal

ದ.ಕ.ಜಿಲ್ಲೆಯ ಪ್ರಮುಖ ನಾಯಕರನ್ನು ಎ.ಐ.ಸಿ.ಸಿ ಗೆ ಸದಸ್ಯರಾಗಿ ನೇಮಕ.

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ 6 ಮಂದಿ ಪ್ರಮುಖ ನಾಯಕರನ್ನು ಎಐಸಿಸಿ ನೂತನ ಸದಸ್ಯರಾಗಿ ನೇಮಕ ಮಾಡಿ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿದ್ದಾರೆ

ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ ಮತ್ತು ಮುಂದಿನ ಲೋಕ ಸಭಾ ಚುನಾವಣೆಯನ್ನು ಗಮನ ದಲ್ಲಿ ಇಟ್ಟುಕೊಂಡು ಭಾರತೀಯ ಕಾಂಗ್ರೆಸ್ ಪಕ್ಷ ಈ ನೇಮಕ ಮಾಡಿದೆ.