January 9, 2025

Vokkuta News

kannada news portal

ಜಿಲ್ಲಾ ಕಾಂಗ್ರೆಸ್ ನಿಂದ ನಗರದಲ್ಲಿ ನಾಳೆ ಭಾರತ್ ಜೋಡೂ ಸ್ಮರಣಾ ಪಾದಯಾತ್ರೆ.

ಮಂಗಳೂರು: ಭಾರತೀಯ ಕಾಂಗ್ರೆಸ್ ಪಕ್ಷದ ಬಹು ಪ್ರಚಾರಿತ ಕಳೆದ ವರ್ಷದ ತಮಿಳುನಾಡು ಕನ್ಯಾ ಕುಮಾರಿಯಿಂದ ಆರಂಭ ಗೊಂಡು ಕಾಶ್ಮೀರದಲ್ಲಿ ಸಮಾರೋಪ ಗೊಂಡ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿ ಒಂದು ವರ್ಷ ಅವಧಿಯ, ಸ್ಮರಣ ಕಾರ್ಯಕ್ರಮವಾಗಿ ನಾಳೆ ತಾರೀಕು 07 ಸೆಪ್ಟೆಂಬರ್ ರಂದು ಸಂಜೆ ಗಂಟೆ 04.00 ಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತ್ ಜೋಡೂ ವಾರ್ಷಿಕ ಸ್ಮರಣಾ ಪಾದಯಾತ್ರೆ ನಡೆಸಲಿದೆ.

ಮಂಗಳೂರು ಮಿಲಾಗ್ರಿಸ್ ಚರ್ಚು ಮುಂಬಾಗದಿಂದ ಆರಂಭಗೊಂಡು ಪಾದಯಾತ್ರೆ ಮಂಗಳೂರು ಕುದ್ಮುಲ್ ರಂಗರಾವ್,ಪುರಭವನದ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂಬಾಗದಲ್ಲಿ ಸಮಾರೋಪ ಗೊಳ್ಳಲಿದೆ.
ಈ ಪಾದಯಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರು,ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ದ ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಕರೆ ನೀಡಿದ್ದಾರೆ.