June 14, 2024

Vokkuta News

kannada news portal

ಸೆ.5 ಯುಟಿಕೆ,ಸಚಿವ ಪ್ರಮುಖರಿಗೆ ವಕ್ಫ್,ಅಭಿನಂದನಾ ಸಮಿತಿಯಿಂದ ಸನ್ಮಾನ.

ಮಂಗಳೂರು: ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಸತಿ,ವಕ್ಫ್ ಮತ್ತು ಅಲ್ಪ ಸಂಖ್ಯಾತ ಸಚಿವರಾದ ಇ. ಝಡ್.ಜಮೀರ್ ಅಹಮ್ಮದ್ ಖಾನ್, ಪೌರಾಡಳಿತ ಮತ್ತು ಹಜ್ ಸಚಿವರಾದ ರಹಿಮಾನ್ ಖಾನ್ ಮತ್ತು ಮುಖ್ಯ ಮಂತ್ರಿ ರಾಜಕೀಯ ಕಾರ್ಯದರ್ಶಿ ಯಾದ ನಸೀರ್ ಅಹಮದ್ ರವರಿಗೆ ಸೆಪ್ಟೆಂಬರ್ 5 ರಂದು ಸಂಜೆ ಗಂಟೆ 04.00 ಕ್ಕೆ ಮಂಗಳೂರಿನ ಪುರಭವನದಲ್ಲೀ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಸನ್ಮಾನ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜರುಗಲಿದೆ ಎಂದು ಸಮಿತಿ ತಿಳಿಸಿದೆ.

ಕರ್ನಾಟಕ ಸರಕಾರದ ಪ್ರಮುಖ ಅಲ್ಪ ಸಂಖ್ಯಾತ ಪ್ರಮುಖ ಸಚಿವರಿಗೆ, ಜನ ಪ್ರತಿನಿಧಿಗಳಿಗೆ ಸರಕಾರ ರಚನೆಯಾದ ನಂತರ ಪ್ರಥಮವಾಗಿ ಜಿಲ್ಲೆಯಲ್ಲಿ ಸ್ವಾಗತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಇದಾಗಿದೆ.

ಜಿಲ್ಲೆಯ ಧಾರ್ಮಿಕ ಸಂಘಟನೆ ಸಂಸ್ಥೆ ಶೈಕ್ಷಣಿಕ ಸಂಸ್ಥೆಗಳು ಮದರಸ ಇತ್ಯಾದಿ ಪದಾಧಿಕಾರಿಗಳು ಈ ದಿವಸ ತಮ್ಮ ಕುಂದು ಕೊರತೆ ಗಳನ್ನೂ ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಕೂಡ ಅಂದು ಪ್ರಯತ್ನ ಕೈಗೊಳ್ಳ ಬಹುದು ಎಂದು ಅಭಿನಂದನಾ ಸಮಿತಿ ಸದಸ್ಯರಾದ ಕೆ.ಅಶ್ರಫ್ ಹೇಳಿದ್ದಾರೆ. ಸನ್ಮಾನ ಸಮಿತಿಯಲ್ಲಿ ಜಿಲ್ಲೆಯ ಪ್ರಮುಖರಾದ ವೈ ಅಬ್ದುಲ್ಲಾ ಕುಂಞ,ಸಿ.ಮೆಹಮೂದ್,ಇಬ್ರಾಹಿಮ್ ಕೊಡಿಚಾಲ್, ಕೆ.ಅಶ್ರಫ್ ಮತ್ತು ವಕ್ಫ್ ಸಲಹಾ ಮಂಡಳಿಯ ನಾಸೀರ್ ಲಕಿಸ್ಟಾರ್ ಇನ್ನಿತರರು ಇದ್ದಾರೆ.