June 22, 2024

Vokkuta News

kannada news portal

ಮಂಗಳೂರಿನಲ್ಲಿ ಭಾರತ್ ಜೋಡೂ ಸ್ಮರಣಾರ್ಥ ಪಾದಯಾತ್ರೆ

ಮಂಗಳೂರು: ಭಾರತೀಯ ಕಾಂಗ್ರೆಸ್ ಪಕ್ಷದ ಬಹು ಪ್ರಚಾರಿತ ಕಳೆದ ವರ್ಷದ ತಮಿಳುನಾಡು ಕನ್ಯಾ ಕುಮಾರಿಯಿಂದ ಆರಂಭ ಗೊಂಡು ಕಾಶ್ಮೀರದಲ್ಲಿ ಸಮಾರೋಪ ಗೊಂಡ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿ ಒಂದು ವರ್ಷ ಅವಧಿಯ, ಸ್ಮರಣ ಕಾರ್ಯಕ್ರಮವಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷ, ಮಂಗಳೂರಿನಲ್ಲಿ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿತ್ತು.

ಮಂಗಳೂರಿನ ಮಿಲಾಗ್ರಿಸ್ ಚರ್ಚು ಮುಂಬಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜಮಾಯಿಸಿ ಪಾದಯಾತ್ರೆ ಮೊದಲ್ಗೊಂಡು ಮುಖ್ಯ ಬೀದಿಯಲ್ಲಿ ಚಲಿಸಿ ಮಂಗಳೂರಿನ ಕುದ್ಮುಲ್ ರಂಗರಾವ್ ( ಪುರಭವನದ ) ಎದುರಿನ ಮಹಾತ್ಮ ಗಾಂಧಿ ಪಾರ್ಕ್ ನಲ್ಲಿ ಸಮಾರೋಪ ಸಮಾರಂಭ ಗೊಂಡಿತು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಪಾದಯಾತ್ರೆ ಮಾಜಿ ಸಚಿವರಾದ ಬೀ. ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು ಯಾತ್ರೆಯಲ್ಲಿ ಐವನ್ ಡಿಸೋಜಾ,ಇನಾಯತ್ ಆಲಿ ಮಿತುನ್ ರೈ, ಜೇ.ಆರ್.ಲೋಬೋ, ಕನಚೂರು ಮೋನು ಹಾಜಿ, ಇಬ್ರಾಹಿಮ್ ಕೋಡಿಚಾಲ್,ಮೊಹಮ್ಮದ್ ಮೋನು, ಕೆ.ಅಶ್ರಫ್, ಬೀ.ಇಬ್ರಾಹಿಮ್,ಎಂ ಎಸ್.ಮೊಹಮ್ಮದ್, ಶಾಹುಲ್ ಹಮೀದ್,ಯು.ಬೀ.ಸಲೀಮ್,ಸುಹೈಲ್ ಕಂದಕ್ ಮತ್ತು ಇನ್ನಿತರ ತಾಲೂಕು,ನಗರ.ಗ್ರಾಮ ಮಟ್ಟದ ನಾಯಕರು ಭಾಗ ವಹಿಸಿದರು. ಯಾತ್ರೆಯಲ್ಲಿ ಜೋ ಡೋ… ಜೋಡೊ.. ಭಾರತ್ ಜೋಡೊ…. ಎಂಬ ಘೋಷಣೆ ಕೂಗಲಾಯಿತು.

ಕೊನೆಯಲ್ಲಿ ರಾಮನಾಥ ರೈ ಸಭೆಯನ್ನು ಉದ್ದೇಶಿಸಿ ಭಾರತ್ ಜೋಡೊ ಯಾತ್ರೆಯ ಸ್ಮರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು ಹರೀಶ್ ಕುಮಾರ್ ರೈ ಸ್ವಾಗತಿಸಿದರು.