November 20, 2024

Vokkuta News

kannada news portal

ಸೆ.21 ರಂದು ನಗರದಲ್ಲಿ ಮದರ್ ತೆರೆಸಾ ವೇದಿಕೆಯಿಂದ ಶಾಂತಿಯ ಸೆಲೆ ವಿಚಾರ ಸಂಕಿರಣ.

ಸಂತ ಮದರ್ ತೆರೆಸಾರವರು ಜಗತ್ತಿನ ಅಪರಿಮಿತ ಜನರ ಹೃದಯ ಸ್ಮೃತಿಯನ್ನು ಪಡೆದಿದ್ದಾರೆ.ಪ್ರೀತಿ ಎಲ್ಲೆಡೆ ಪಸರಿಸಲಿ ಎಂಬ ಅವರ ಬದುಕಿನ ದ್ಯೇಯ ಕಾರ್ಯಗಳು ಇಂದು ಸಾವಿರಾರು ಸಂಸ್ಥೆಗಳ ಮೂಲಕ ಪ್ರಪಂಚಾದ್ಯಂತ ನಡೆಯುತ್ತಿದೆ.

ಸೆಪ್ಟೆಂಬರ್ 21 ರಂದು ಮಂಗಳೂರು ನಗರದಲ್ಲಿ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ವತಿಯಿಂದ ವೈವಿಧ್ಯಮಯ ಭಾರತದಲ್ಲಿ ಶಾಂತಿಯ ಸೆಲೆ ಎಂಬ ವಿಷಯದಲ್ಲಿ ಬೆಂಗಳೂರಿನ ಖ್ಯಾತ ಲೇಖಕಿ ಶ್ರೀಮತಿ ಕೆ. ಶೇರೀಫ ರವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸುವಿಕೆಯಲ್ಲಿ ವಿಚಾರ ಸಂಕಿರಣ ಜರುಗಲಿದೆ.

ಮಂಗಳೂರು ನಗರದ ಕುದ್ಮುಲ್ ರಂಗರಾವ್( ಪುರ ಭವನ) ದಲ್ಲಿ ಬೆಳಿಗ್ಗೆ ಗಂಟೆ 10.00 ರಿಂದ ಆರಂಭವಾಗುವ ಕಾರ್ಯಕ್ರಮವು,ವೇದಿಕೆಯು, ಸಂತ ಮದರ್ ತೆರೆಸಾ ರವರ 26 ನೇ ವರ್ಷದ ಸಂಸ್ಕರಣಾ ದಿವಸ್ ಆಗಿ ಆಚರಿಸಲ್ಪಡುತ್ತಿದೆ.

ವಿಚಾರ ಸಂಕಿರಣವನ್ನು ಚಿಂತಕ ಮತ್ತು ಮಾಧ್ಯಮ ತಜ್ಞ ದಿನೇಶ್ ಅಮೀನ್ ಮಟ್ಟು ರವರು ಉದ್ಘಾಟಿಸಲಿದ್ದು, ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ ರವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.ವಿಷಯದ ಬಗ್ಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರು, ಮಾಜಿ ಮೇಯರ್ ಕೆ.ಅಶ್ರಫ್ ರವರು ಪ್ರತಿಕ್ರಿಯೆ ಮಾತು ಆಡಲಿದ್ದಾರೆ.

ವಿಚಾರ ಸಂಕಿರಣದ ಬಗ್ಗೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಿಲಿನೋ, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 130 ರಷ್ಟು ಪ್ರಮುಖ ಪ್ರತಿನಿಧಿಗಳು,ಚಿಂತಕರು,ಸಮಾಜ ಸೇವಕರು,ಅಲ್ಪ ಸಂಖ್ಯಾತ,ದಲಿತ,ಆದಿವಾಸಿ ಸಂಘಟನೆಗಳು,ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಂತ ಮದರ್ ತೆರೆಸಾರವರು ಜಗತ್ತಿನ ಅಪರಿಮಿತ ಜನರ ಹೃದಯ ಸ್ಮೃತಿಯನ್ನು ಪಡೆದಿದ್ದಾರೆ.ಪ್ರೀತಿ ಎಲ್ಲೆಡೆ ಪಸರಿಸಲಿ ಎಂಬ ಅವರ ಬದುಕಿನ ದ್ಯೇಯ ಕಾರ್ಯಗಳು ಇಂದು ಸಾವಿರಾರು ಸಂಸ್ಥೆಗಳ ಮೂಲಕ ಪ್ರಪಂಚಾದ್ಯಂತ ನಡೆಯುತ್ತಿದೆ. ವೈವಿಧ್ಯತೆಯ ಭಾರತದಲ್ಲಿ ಅವರ ಪ್ರೀತಿಯ ಸೆಲೆಗಳು ಮಾನವೀಯ ಬಂದವನ್ನು ಹೆಚ್ಚಿಸಲಿದೆ ಎಂಬ ನಿಟ್ಟಿನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಏಕತಾಲಿ ಹಾಡುಗಾರರಾದ ಮಣಿನಾಲ್ಕೂರು ಬಳಗ ಮತ್ತು ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಸೌಹಾರ್ಧ ಗಾಯನ ಸಂಗೀತ ನಡೆಯಲಿದೆ.

ಪತ್ರಿಕಾ ಬಿಡುಗಡೆಯಲ್ಲಿ ಮಂಜುಳಾ ನಾಯಕ್, ಡಾಲ್ಫಿ ಡಿ ಸೋಝಾ, ಆಲ್ವಿನ್ ಡಿ ಸೋಝಾ, ಮುನೀರ್ ಕಾಟಿಪಳ್ಳ ಮತ್ತು ಸ್ಟಾನಿ ಡಿ ಕುನಾ ಉಪಸ್ಥಿತರಿದ್ದರು.