July 27, 2024

Vokkuta News

kannada news portal

ತೆರೆಸಾ ನೆನಪಲ್ಲಿ ಮೈತ್ರಿ ಮೂಡಲಿ:ವಿಚಾರ ಸಂಕಿರಣದಲ್ಲಿ ಕೆ. ಫಣಿರಾಜ್.

ಮದರ್ ತೆರೆಸಾ ಯಾವುದೇ ಒಂದು ಧರ್ಮದ ಆಸ್ತಿಯಲ್ಲ ಅವರು ಮಾನವೀಯತೆಯ ಮತ್ತು ಸರ್ವರ ಆಸ್ತಿ ಅವರ ಸೇವೆ ಮಾನವೀಯ ಮೌಲ್ಯಗಳನ್ನು ಶಾಶ್ವತ ವಾಗಿಸುವ ಸೇವೆ- ವಸಂತ್, ನಿವೃತ್ತ ಪ್ರಾಂಶುಪಾಲರು.

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ವತಿಯಿಂದ ಮದರ್ ತೆರೆಸಾ ರವರ 26 ನೇ ಸಂಸ್ಕರಣಾ ದಿವಸದ ಅಂಗವಾಗಿ ವೈವಿಧ್ಯಮಯ ಭಾರತದಲ್ಲಿ ಶಾಂತಿಯ ಸೆಲೆ ಎಂಬ ವಿಷಯದಲ್ಲಿ ಖ್ಯಾತ ಚಿಂತಕರು ಉಪನ್ಯಾಸಕರು ಆದ ಕೆ. ಫಣಿ ರಾಜ್ ರವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂತ ಮದರ್ ತೆರೆಸಾ ಸವಿನೆನಪಿನ ಜನ ಮೈತ್ರಿ ಮೂಡಲಿ ಎಂದು ಕರೆ ನೀಡಿದರು.

ಫ್ರೆಂಚ್ ಕ್ರಾಂತಿ ಮೂಲದಿಂದ ಹುಟ್ಟಿದ ಪ್ರಜಾ ಪ್ರಭುತ್ವ ಮತ್ತು ಬುದ್ಧನ ಧಮ್ಮದ ಮೈತ್ರಿ ಆಧಾರದಲ್ಲಿ ಡಾ. ಬೀ.ಆರ್.ಅಂಬೇಡ್ಕರ್ ರವರು ದೇಶಕ್ಕೆ ಸಂವಿಧಾನವನ್ನು ರೂಪಿಸಿ ಅರ್ಪಿಸಿದ್ದಾರೆ. ಈ ದೇಶ ವೈವಿಧ್ಯ ಬಹುಜನರ ಸರ್ವ ಧರ್ಮೀಯರ ದೇಶ ಈ ದೇಶದ ವೈವಿದ್ಯತೆಯನ್ನು ಸಂರಕ್ಷಿಸಲು ರಾಜಕೀಯ ಪ್ರಜಾ ಪ್ರಭುತ್ವ ಮಾತ್ರ ಸಾಲದು ಮತ್ತು ಅದರೊಂದಿಗೆ ಸಾಮಾಜಿಕ ಪ್ರಜಾಪ್ರಭುತ್ವ ವೆಂಬ ಸಾಮಾಜಿಕ ನ್ಯಾಯದ ಸಮಾನತೆಯ ಅಗತ್ಯವಿದೆ.ಜನರಲ್ಲಿ ಬುದ್ಧನು ಪ್ರತಿಪಾದಿಸಿದ ಮೈತ್ರಿ ನೆಲೆಗೊಳ್ಳಬೇಕಿದೆ ಎಂದರು. ಮದರ್ ತೆರೆಸಾ ತನ್ನ ಸೇವೆಯ ಮೂಲಕ ಮೈತ್ರಿಯನ್ನು ಪ್ರತಿಪಾದಿಸಿದರು ಮತ್ತು ಮದರ್ ತೆರೆಸಾ ರವರ ಸ್ಮರಣೆ ಈ ಸಂಧರ್ಬದಲ್ಲಿ ಅತೀ ಅಗತ್ಯವಾಗಿದೆ ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಿಲಿನೋ ವಹಿಸಿದ್ದರು. ಪ್ರಾಸ್ತಾವಿಕ ಭಾಷಣ ಮಾಡಿದ ಅವರು ಸಂತ ಮದರ್ ತೆರೆಸಾ ರವರ ಸೇವೆಯ ಹಲವು ಹಂತಗಳನ್ನು ವಿವರಿಸಿದರು.

ಮುಖ್ಯ ಭಾಷಣಕಾರರಾಗಿ ಪ್ರೊ. ಗಣನಾಥ ಎಕ್ಕಾರು ರವರು,ಮಾತನಾಡಿ ಮದರ್ ತೆರೆಸಾ ವಿಚಾರ ಸಂಕಿರಣದ ಸಂಘಟಕರನ್ನು ಈ ಕಾರ್ಯಕ್ರಮ ಆಯೋಜಿಸಿದ ಕಾರಣಕ್ಕೆ ಶ್ಲಾಘಿಸಿದರು.

ಪ್ರಸಕ್ತ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಅನಿವಾರ್ಯ ಎಂದು, ಸಾಮಾನ್ಯರು ಅಸಾಮಾನ್ಯರಾಗುವುದು ವ್ಯಕ್ತಿಗಳು ಶಕ್ತಿಗಳಾಗುವುದು ಇದನ್ನು ನಾವು ಹಲವಾರು ವರ್ಷದಿಂದ ನೋಡಿಕೊಂಡು ಬಂದಿದ್ದೇವೆ.ಕಳೆದ ಮೂರು ಸಾವಿರ ವರ್ಷಗಳಿಂದ ಇವುಗಳೊಂದಿಗೆ ಸಂಘರ್ಷ ನಡೆಯುತ್ತಾ ಬಂದಿದೆ.ಮದರ್ ತೆರೆಸಾ ಅವರು ತಮ್ಮ ಚಾರಿಟಿ ಸಂಸ್ಥೆಯ ಮೂಲಕ ನಿರ್ಗತಿಕ,ರೋಗಿಗಳ, ಬಡ ಜನರ ಸೇವೆ ಮಾನವೀಯತೆಯ ಸೇವೆ ಬದಲಾಗಿ ಅದು ಯಾವುದೇ ಧಾರ್ಮಿಕ ಸೇವೆ ಅಲ್ಲ.

ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರು ಮತ್ತು ಮಾಜಿ ಮೇಯರ್, ವೇದಿಕೆಯ ಗೌರವ ಸಲಹೆಗಾರರಾದ ಕೆ. ಅಶ್ರಫ್ ರವರು ಪ್ರತಿಕ್ರಿಯೆ ಮಾತನಾಡಿ ಮದರ್ ತೆರೆಸಾ ಸಂಸ್ಕರಣಾ ದಿವಸದ ಅತಿಥಿಗಳು ಹೇಳಿದಂತೆ ಶಾಲಾ ವಿಧ್ಯಾರ್ಥಿಗಳು ಪರಸ್ಪರ ಕೈ ಹಿಡಿದು ಕೊಂಡು ಹೋಗುವ ಸೌಹಾರ್ದತೆ ಯನ್ನು ಹಿಜಾಬ್ ಹೆಸರಲ್ಲಿ ಮಾಡಲು ನಮ್ಮ ಜಿಲ್ಲೆಯಲ್ಲಿ ಹೆಚ್ಚು ಅವಧಿಗೆ ನಡೆಯಲಿಲ್ಲ, ಪ್ರವಾದಿ ಮೊಹಮ್ಮದ್ ಸ . ಅ. ರವರು ತನ್ನ ಕಾಲದಲ್ಲಿ ದಾರಿಯಲ್ಲಿ ನಡೆಯುತ್ತಿರುವಾಗ ತನ್ನ ಮೇಲೆ ಮಹಿಳೆ ಯೋರ್ವಳು ಹೊಲಸು ಎರಚುವ ಕೃತ್ಯವನ್ನು ಕ್ಷಮಿಸಿದ ರೀತಿಯಲ್ಲಿನ ಸೇವೆಯನ್ನು ಮದರ್ ತೆರೆಸಾ ರವರು ಪ್ರೀತಿ ಹಂಚುವ ಮೂಲಕ ಮಾಡಿ ತೋರಿಸಿದ್ದಾರೆ, ನಾವೆಲ್ಲರೂ ವೇದಿಕೆಯ ಗುರಿಯಂತೆ ಸೌಹಾರ್ದಯುತ ಜೀವನ ಈ ಜಿಲ್ಲೆ,ರಾಜ್ಯ ದೇಶದಲ್ಲಿ ನೆಲೆಗೊಳ್ಳಲೀ ಎಂದು ಹಾರೈಸಿದರು.

ಮುಂದೆ ನಿವೃತ್ತ ಪ್ರಾಂಶುಪಾಲರಾದ ವಸಂತ್ ಮಾತನಾಡಿ ಪುರಾಣ ಕಾಲದಲ್ಲಿ ದೇವ ನಾಮಾಂಕಿತರು ಅವರ ವಾಹನಗಳ ವೈವಿಧ್ಯತೆಯ ಮತ್ತು ಸೌಹಾರ್ದತೆಯ ಸಂಕೇತಗಳನ್ನು ವಿವರಿಸಿದರು ಮತ್ತು ಕೊನೆಯಲ್ಲಿ ಮದರ್ ತೆರೆಸಾ ಯಾವುದೇ ಒಂದು ಧರ್ಮದ ಆಸ್ತಿಯಲ್ಲ ಅವರು ಮಾನವೀಯತೆಯ ಮತ್ತು ಸರ್ವರ ಆಸ್ತಿ ಅವರ ಸೇವೆ ಮಾನವೀಯ ಮೌಲ್ಯಗಳನ್ನು ಶಾಶ್ವತ ವಾಗಿಸುವ ಸೇವೆ ಎಂದರು.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಶ್ರೀ. ಬೀ. ರಮನಾಥ ರೈ ಆಗಮಿಸಿದ್ದರು.

ಮದರ್ ತೆರೆಸಾ ವೇದಿಕೆಯ ಕಾರ್ಯಕ್ರಮಕ್ಕೆ ವಿವಿದ ರೀತಿಯಲ್ಲಿ ಸಹಕಾರ ನೀಡಿದ ವಿವಿಧ ಸಂಘಟನೆ ಗಳಾದ, ಕೆಥೋಲಿಕ್ ಸಭಾ, ಡಿ.ವೈ. ಎಫ್.ಐ.,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ, ಸೈಂಟ್ ಮದರ್ ತೆರೆಸಾ ಕಾನ್ವೆಂಟ್ ಸಂಸ್ಥೆಗಳಿಗೆ ವೇದಿಕೆ ಅಧ್ಯಕ್ಷರಾದ ರಾಯ್ ಕ್ಯಾಸ್ಟಿಲಿನೂ ಸ್ಮರಣಿಕೆ ನೀಡಿ ಗೌರವಿಸಿದರು.

ಸಭೆಯ ಆರಂಭದಲ್ಲಿ ಏಕತಾರಿ ಗಾಯನ ಗಾರರಾದ ಮಣಿ ನಾಲ್ಕೂರು ಬಳಗ ಮತ್ತು ಜನಪ್ರೀತಿ ಬಳಗ ದವರಿಂದ ಸೌಹಾರ್ದ ಗಾನ ನಡೆಯಿತು. ವಿಚಾರ ಸಂಕಿರಣವನ್ನು ಜನಪ್ರೀತೀ ಬಳಗದ ಹಾಡುಗಾರರ ಭಾರತ ವೆಂದರೆ ತ್ರಿವರ್ಣ ದ್ವಜಾ…. ಎಂಬ ಗೀತೆಯಿಂದ ಆರಂಭಿಸಲಾಯಿತು. ಸಭೆಯಲ್ಲಿ ವಿಚಾರ ವೇದಿಕೆಯ ಪದಾಧಿಕಾರಿ ಮತ್ತು ಸಹಬಾಳ್ವೆ ಸಂಸ್ಥೆಯ ಮಂಜುಳಾ ನಾಯಕ್, ಜೇ.ಸಿ. ಸಲ್ದಾನ, ಫಾ.ಸುದೀಪ್ ಪೌಲ್, ಆಲ್ವಿನ್ ಡಿ ಸೋಜ, ಅನಿಲ್ ಲೋಬೋ,ಮಾರ್ಟಿನ್ ರೇಗೊ, ಪ್ಲೇವಿ ಕ್ರಾಸ್ತಾ, ಅನಿಲ್ ಐವನ್, ಜಾನ್ ಡಿ ಸಿಲ್ವಾ,ಮದರ್ ತೆರೆಸಾ ಕಾನ್ವೆಂಟ್ ನ ಸಿಸ್ಟರ್ ಸಿ.ಶಾಂತಿ, ಸಿ. ರೋನ, ಫಾ.ರೂಪೇಶ್ ಮಾಡ್ತಾ, ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್.ಇಸ್ಮಾಯಿಲ್, ಹಿರಿಯ ಪತ್ರಕರ್ತ ತಾರನಾಥ ಗಟ್ಟಿ, ಡಿ.ವೈ. ಎಫ್ ಐ.ನ ಬೀ.ಕೆ. ಇಮ್ತಿಯಾಜ್, ಶಿಕ್ಷಣ ತಜ್ಞ ಎರಿಕ್ ಲೋಬೋ, ನವೀನ್ ಕೊಂಚಾಡಿ, ಸ್ತಾನಿ ಅಲ್ವರೀಸ್, ಭಾರತಿ ಶಕ್ತಿನಗರ, ಸಿಸ್ಟರ್ ಅನಿತಾ, ಸಂತೋಷ್ ಬಜಾಲ್, ಅನಿಲ್ ದೇಸಾ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್. ಕೆ., ಸಿ.ಐ.ಟಿ.ಯು. ನ ಬಾಲಕೃಷ್ಣ ಶೆಟ್ಟಿ, ಜಯಂತಿ . ಬೀ.ಶೆಟ್ಟಿ,ಮಹಾಬಲ ದೆಪ್ಪಲಿಮಾರ್, ಆದಿವಾಸಿ ಸಂಘಟನೆಗಳ ಕರಿಯ,ಈಶ್ವರ್.ರಶ್ಮಿ, ಮೆಲ್ವಿನ್ ಪಾಯಸ್, ಎಂ.ದೇವದಾಸ್, ತಾಯ್ಯಿಬ್,ನೌಶಾದ್ ಬೆಂಗ್ರೆ, ರವೀಂದ್ರ ಕೊಂಚಾಡಿ, ಮುಸ್ಲಿಮ್ ಒಕ್ಕೂಟದ ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಸಾಲಿಹ್ ಬಜ್ಪೆ, ಮೊಹಮ್ಮದ್ ಹನೀಫ್ ಯು, ಅಶ್ರಫ್ ಬದ್ರಿಯಾ, ಯಾಸೀನ್ ಕುದ್ರೋಳಿ,ಸಂತೋಷ್ ಬಜಾಲ್, ಮಹೆಂತ್ ನಾಯಕ, ಮುಸ್ತಾಫಾ, ರಮೇಶ್ ಸುವರ್ಣ, ಬೀ.ಎಂ.ದೇವಾಡಿಗ, ಹಮೀದ್ ಹರೇಕಳ,ವಿಧ್ಯಾ ಶೆಣೈ,ಹುಸೈನ್ ಕಾಟಿಪಳ್ಳ ಮುಂತಾದ ಪ್ರಮುಖರು ಭಾಗಿಯಾಗಿದ್ದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.