ಉಳ್ಳಾಲ: ಉಳ್ಳಾಲ ನಗರ ಪೇಂಟೆ ರಹ್ಮಾನಿಯ ಜುಮ್ಮಾ ಮಸೀದಿ ಸಂಸ್ಥೆ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಎಸೋಸಿಯೇಶನ್ ಜಂಟಿ ಆಯೋಜನೆಯಲ್ಲಿ ಇಂದು ಸಂಜೆ 4.30 ಗಂಟೆಗೆ ಪೇಂಟೆ ಮಸೀದಿ ವಟಾರದಿಂದ ಮಾದಕ ವ್ಯಸನ ವಿರೋಧಿ ಅಭಿಯಾನ ಜಾಥಾ ಆರಂಭಗೊಂಡು ನಗರಸಭೆ ಕಾರ್ಯಾಲಯವರೆಗೆ ಸಾಗಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಜಾಥಾದಲ್ಲಿ ಮಾದಕ ವ್ಯಸನ ವಿರೋಧಿ ಅರಿವು ಬಿತ್ತಿಪತ್ರ ಪ್ರದರ್ಶನ ನಡೆಯಲಿದೆ.ಮತ್ತು ಮಾದಕ ವ್ಯಸನ ವಿರೋಧಿ ಜಾಗೃತಿ ಸಭೆಯಲ್ಲಿ ಸಾಮಾಜಿಕ ಪ್ರಮುಖರು,ಸಂಪನ್ಮೂಲ ವ್ಯಕ್ತಿಗಳು,ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ.
ಈ ಪ್ರಯುಕ್ತ ನಿನ್ನೆ ಮಸೀದಿಯಲ್ಲಿ ಜುಮಾ ನಮಾಝ್ ನಂತರ ಜಾಗೃತಿ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.ಕರಪತ್ರ ಬಿಡುಗಡೆಯಲ್ಲಿ ಉಲ್ಲಾಲ ದರ್ಗಾ ಸಮಿತಿ ಮಾಜಿ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿಯವರು ಮಸೀದಿ ಇಮಾಮ್ ಇಬ್ರಾಹಿಮ್ ಮದನಿ ಅವರಿಗೆ ಕರಪತ್ರ ಹಸ್ತಾಂತರಿಸಿದರು. ಪೇಂಟೆ ಮಸೀದಿ ಅಧ್ಯಕ್ಷರಾದ ಹಾಜಿ ಮೊಯಿದಿನ್ ಹಸನ್, ಕಾರ್ಯದರ್ಶಿ ಮುಸ್ತಾಫಾ ಅಹ್ಮದ್,ಸದಸ್ಯರಾದ ಇಲ್ಲಿಯಾಸ್ ಬಸ್ತಿಪಡ್ಪು,ಅಝೀಝ್, ಶರಾಫತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಉಳ್ಳಾಲದಲ್ಲಿ ನೂತನ ಡಯಾಲಿಸಿಸ್ ಕೇಂದ್ರ: ಸ್ಥಳೀಯ ರೋಗಿಗಳಿಗೆ ಆದ್ಯತೆಯ ನೋಂದಣಿ
ತಲಪಾಡಿ ಗ್ರಾಮಾಭಿವೃದ್ಧಿ: ಅಧ್ಯಕ್ಷ ಟಿ.ಇಸ್ಮಾಯಿಲ್ ನೇತೃತ್ವದಲ್ಲಿ ಸಮಗ್ರ ನಿಧಿ ಅನುಷ್ಟಾನತೆ.
ಉಳ್ಳಾಲ ನಿವಾಸಿ ಯು.ಕೆ.ಅಬ್ದುಲ್ಲಾ ಕೊಟ್ಟಾರ ನಿಧನ: ಬಸ್ತಾನುಲ್ ಉಲೂಮ್ ಸಂಸ್ಥೆ ಸಂತಾಪ.