July 27, 2024

Vokkuta News

kannada news portal

ಯುನಿವೆಫ್ ಕರ್ಣಾಟಕ ಸಂಸ್ಥೆಯಿಂದ ಶೇಕ್ ಅಹಮದ್ ಸರ್ ಹಿಂದಿ ಪ್ರಶಸ್ತಿ 23 ಕ್ಕೆ ಹೆಸರು ಆಹ್ವಾನ.

ಮಂಗಳೂರು: ನಾಡು, ನುಡಿ, ಭಾಷೆ, ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ, ಯಾವುದೇ ರೀತಿಯ ಪ್ರತಿಫ಼ಲಾಪೇಕ್ಷೆಯಿಲ್ಲದೆ, ಪ್ರಶಸ್ತಿ, ಪುರಸ್ಕಾರಗಳ ಆಗ್ರಹವಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಯುನಿವೆಫ಼್ ಕರ್ನಾಟಕ ಸಂಸ್ಥೆ ಪ್ರತಿ ವರ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಯನ್ನು ನೀಡಿ ಗೌರವಿಸುತ್ತಿದೆ.

ಪ್ರತೀ ವರ್ಷದಂತೆ ಈ ವರ್ಷ 2023 ನೇ ಸಾಲಿನ ಪ್ರಶಸ್ತಿಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯ ನಗದು ಮೊತ್ತ ರೂಪಾಯಿ ಹತ್ತು ಸಾವಿರ ಎಂದು ಮೀಸಲಿರಿಸಿದೆ.

ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು.

ಆಕಾಂಕ್ಷಿ ವ್ಯಕ್ತಿ ಸ್ವತಃ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಮ್ ಸಮುದಾಯದ ಅರ್ಹ ವ್ಯಕ್ತಿಗಳ ಪರಿಚಯ ಹೊಂದಿದ ಯಾವುದೇ ವ್ಯಕ್ತಿಗಳು ಅಂತಹ ಹೆಸರು ಮತ್ತು ಅವರ ಸಾಧನೆಯ ಕಿರುಪರಿಚಯ ಮಾಹಿತಿಯನ್ನು ಯುನಿವೆಫ್ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ರವರಿಗೆ
ಅಕ್ಟೋಬರ್ 3 ನೇ ತಾರೀಕು ವಿನ ಅವಧಿಯ ಮುಂಚಿತವಾಗಿ ಅರ್ಹ ಅಭ್ಯರ್ಥಿಗಳ ವಿವರಗಳನ್ನು ವಿಳಾಸ , ಸಂಚಾಲಕರು, ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ವಿಭಾಗ, ಯುನಿವೆಫ಼್ ಕರ್ನಾಟಕ, ದಾರುಲ್ ಇಲ್ಮ್, ಒಂದನೇ ಮಹಡಿ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫ಼ಳ್ನೀರ್, ಮಂಗಳೂರು – 575001 ಅಥವಾ +919945913824 ವಾಟ್ಸ್ ಆ್ಯಪ್ ಗೆ ಕಳುಹಿಸಿ ಕೊಡಬೇಕೆಂದು ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.