March 19, 2025

Vokkuta News

kannada news portal

ಝೀನತ್ ಭಕ್ಷ್ ಕೇಂದ್ರ ಸಂಸ್ಥೆಯಲ್ಲಿ ನೂರೇ ಮದೀನಾ ಮೀಲಾದ್ ಫೆಸ್ಟ್

ಮಂಗಳೂರು: ಅಶೈಕ್ ಅಸಯ್ಯದ್ ಬಿಲಾಲ್ ಮಸ್ತಾನ್ ಮಹಮ್ಮದ್ ಮೌಲಾ ಖ.ಸಿ ಇಫ್ಲುಲ್ ಖುರ್ ಆನ್ ಮತ್ತು ಅರೇಬಿಕ್ ಕಾಲೇಜು ಇದರ ಆಶ್ರಯದಲ್ಲಿ ಇಂದು ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿ ಬಂದರ್ ಆವರಣದಲ್ಲಿ ಮೀಲಾದುನ್ನಬೀ ಪ್ರಯುಕ್ತ ನೂರೇ ಮದೀನಾ ಮೀಲಾದ್ ಫೆಸ್ಟ್ ಮತ್ತು ಬೂರ್ದಾ ಮಜ್ಲಿಸ್ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವೈ ಅಬ್ದುಲ್ಲಾ ಕುಂಞ ವಹಿಸಿದ್ದರು ,ಕಾರ್ಯಕ್ರಮದ ಉದ್ಘಾಟನೆ ಮತ್ತು ದುವಾವನ್ನು ತ್ವಾಕ ಅಹಮದ್ ಮುಸ್ಲಿಯಾರ್ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಅಶ್ರಫ್ ಪ್ರಮುಖ ಭಾಷಣ ಮಾಡಿದರು.ಇತರ ಪದಾಧಿಕಾರಿಗಳಾದ ಎಸ್.ಎಂ.ಆರ್. ರಶೀದ್ ಹಾಜಿ, ಸಮದ್ ಹಾಜಿ, ಅದ್ದು ಹಾಜಿ, ಐ. ಮೊಯಿದಿನಬ್ಬ ಹಾಜಿ,ಅಶ್ರಫ್ ಬಯ್ಯ,ಕೋಶಾಧಿಕಾರಿ ಬಾಷಾ ತಂಗಲ್, ಮಸೀದಿಯ ಖತೀಬ್ ಅಕ್ರಮ್ ಭಾಕವಿ ಮುಸ್ಲಿಯಾರ್ ಮತ್ತು ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು.