February 19, 2025

Vokkuta News

kannada news portal

ಕಂಡತ್ ಪಳ್ಳಿ ಜುಮಾ ಮಸೀದಿ ಅಧ್ಯಕ್ಷರಾಗಿ ಮಾಜಿ ಮೇಯರ್ ಕೆ.ಅಶ್ರಫ್ ಆಯ್ಕೆ

ಮಂಗಳೂರು : ಮಂಗಳೂರು ಕಂಡತ್ ಪಳ್ಳಿ ಜಮಾಅತ್ ಮಹಾಸಭೆಯು ನವೆಂಬರ್ 05 ಆದಿತ್ಯವಾರ, ನಿಕಟ ಪೂರ್ವ ನಿರ್ಗಮಿತ ಅಧ್ಯಕ್ಷರಾದ ಶಮೀಮ್ ರವರ ನೇತೃತ್ವದಲ್ಲಿ ನಡೆದು ಲೆಕ್ಕ ಪತ್ರ ಪರಿಶೋಧನೆ ಗೊಂಡು, ಹಾಲಿ ಕಮಿಟಿಯನ್ನು ವಿಸರ್ಜಿಸಿ ಮುಂದಿನ ಸಾಲಿನ ಅಧ್ಯಕ್ಷರಾಗಿ ಮಾಜಿ ಮೇಯರ್ ಕೆ ಅಶ್ರಫ್ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಸ್.ಎಂ. ಜಾಫರ್, ಪ್ರಧಾನ ಕಾರ್ಯದರ್ಶಿ ಯಾಗಿ ನಾಸಿರ್ ಕೊಪ್ಪಳ ಕಂಪೌಂಡ್, ಕೋಶಾಧಿಕಾರಿಯಾಗಿ ಕೆ ಶಮೀಮ್ ಅಹ್ಮದ್, ಜೊತೆ ಕಾರ್ಯದರ್ಶಿ ಯಾಗಿ ಇಮ್ರಾನ್,ಮುತವಲ್ಲಿಯಾಗಿ ಟೈಗರ್ ಪಾರೂಕ್ ಹಾಗೂ ಸದಸ್ಯರು ಗಳಾಗಿ ,ರಿಜ್ವಾನ್, ರಫೀಕ್,ಮಹ್ಮೂದ್ ರವರನ್ನು ಆಯ್ಕೆ ಮಾಡಲಾಯಿತು. ಮಸೀದಿಯ ಖತೀಬ್ ಪಿ. ಎ.ಮೊಹಮ್ಮದ್ ರಫೀಕ್ ಮದನಿರವರು ದುವಾ ನೆರವೇರಿಸಿದರು ಎಂದುಕಂಡತ್ ಪಳ್ಳಿ ಜಮಾಅತ್ ಮಂಗಳೂರು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.