November 21, 2024

Vokkuta News

kannada news portal

ಜಿಲ್ಲೆಗೆ ಉಳ್ಳಾಲ ಕೈಲಾಸ ವಿದ್ದಂತೆ :ಕೆ.ಅಶ್ರಫ್*

ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ರವರು ಮಾಡಿದಂತಹ ಭಾಷಣದ ವಿಡಿಯೋದಲ್ಲಿ ಅವರು,ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂಬಿತ್ಯಾದಿಯಾಗಿ ಉಲ್ಲೇಖಿಸಿ,ಮುಗ್ದ ಜನರ ಮತೀಯ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.ಉಳ್ಳಾಲ, ಜಿಲ್ಲೆಗೆ ಕೈಲಾಸವಿದ್ದಂತೆ ಎಂಬುದು ಕಲ್ಲಡ್ಕ ಭಟ್ ರಿಗೆ ಅರಿವಿಲ್ಲ. ಉಳ್ಳಾಲದ ಜನತೆ ನೇತ್ರಾವತಿ ನದಿ ನೀರನ್ನು ಉಪಯೋಗಿಸಿ ಜೀವಿಸಿದ ಜನತೆ . ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಶರಣಾದ ವರ್ಗದ ವಂಶ ಸ್ತ್ರಲ್ಲ ಉಲ್ಲಾಲದವರು, ಬದಲಾಗಿ ಪೋರ್ಚುಗೀಸರಿಗೆ ಸಿಂಹ ಸ್ವಪ್ನ ವಾದ ಸ್ವಾತಂತ್ರ್ಯ ಹೋರಾಟಗಾರ್ತಿ ಜೈನ ರಾಣಿ ಅಬ್ಬಕ್ಕ ಳ ವಂಶ ಸ್ತರು ಬದುಕುವ ನಾಡು ಉಳ್ಳಾಲ. ಮುಸ್ಲಿಮ್ ಮದನಿ ಧಾರ್ಮಿಕ ಕೇಂದ್ರ, ಸಂತ ಸಬೇಷ್ಟಿಯನ್ ಚರ್ಚ್, ಚೀರುಂಭ ಭಗವತಿ ಕ್ಷೇತ್ರ, ವೈದ್ಯನಾಥ ಕ್ಷೇತ್ರ, ಶ್ರೀ ಉಳ್ಳಾಲ್ತಿ ಕ್ಷೇತ್ರ, ಪಾಂಡ್ಯ ರಾಜ್ ಬಲ್ಲಾಳ್ ಸಂಸ್ಥೆ, ಮೊಗವೀರ ಶಿಕ್ಷಣ ಸಂಸ್ಥೆ,ಗಳಂತಹ ಸೌಹಾರ್ಧ ಸ್ಥಳಗಳ ಸಂಗಮ ಬೀಡು ಆಗಿದೆ ಉಳ್ಳಾಲ. ನಿಸರ್ಗ ರಮಣೀಯ ಸಮುದ್ರ ನೋಟದ ಪ್ರವಾಸಿ ತಾಣ ವಾಗಿದೆ ಉಳ್ಳಾಲ. ಮತ್ಸ್ಯ ಗಾರಿಕೆಯ ವೃತ್ತಿ ತಾಣ, ವಾಣಿಜ್ಯ ವೃದ್ದಿ ಕೇಂದ್ರವಾಗಿದೆ ಉಳ್ಳಾಲ ಉಪನಗರ. ಮುಂದುವರಿದು,ಈ ದೇಶದ ಉಕ್ಕಿನ ಮಹಿಳೆ ದಿವಂಗತ ಇಂದಿರಾ ಗಾಂಧಿ ರವರ ಆ ಕಾಲದ ಆಪ್ತ ಸಹಾಯಕರಾಗಿ ದ್ದ,ನವ ಮಂಗಳೂರು ನಿರ್ಮಾತೃ,ಮಂಗಳೂರು ಬಂದರು,ವಿಮಾನ ನಿಲ್ದಾಣ,ಎಂ.ಸಿ.ಎಫ್ ಕೈಗಾರಿಕೆ ಮತ್ತು ನೇತ್ರಾವತಿ ಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಶ್ರೀನಿವಾಸ ಮಲ್ಯ ರವರು ಹುಟ್ಟಿದ ನಾಡು ಉಳ್ಳಾಲ. ಇಂತಹ ಸಂಪದ್ಬರಿತ ಕೈಲಾಸವನ್ನು ಕಲ್ಲಡ್ಕ ರು ಪಾಕಿಸ್ತಾನ ಎನ್ನುತ್ತಿರುವುದು ಅವರ ವಯಸ್ಸಿನ ದೋಷವಾಗಿದೆ ಹೊರತು ಇನ್ನೇನಲ್ಲ. ಕಲ್ಲಡ್ಕರು ಸಾರ್ವಜನಿಕ ಜೀವನದಿಂದ ನಿವೃತ್ತಿ ಗೊಳ್ಳುವುದು ಒಳಿತು.