ಮಂಗಳೂರು ಪುರಭವನ ದ ಸಮೀಪ ಇಂದು ವಿವಿಧ ಸಂಘಟನೆಗಳು ಮತ್ತು ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನಾ ಸಭೆ ನಡೆಯಿತು.
ಜನರ ಆಹಾರದ ಹಕ್ಕುಗಳನ್ನು ಸಂರಕ್ಷಿಸುವ ವಿಷಯದಲ್ಲಿ ವಿವಿಧ ಮುಖಂಡರು ಮತ್ತು ಜನಪ್ರತಿನಿಧಿಗಳು ವಿಷಯ ಮಂಡಿಸಿ ,ರಾಜ್ಯ ಸರ್ಕಾರ ಪ್ರಸ್ತುತ ಜಾರಿಗೆ ತರಲಿರುವ ಗೋ ಹತ್ಯೆ ನಿಷೇಧ ಕ್ರಮಗಳನ್ನು ವಿರೋಧಿಸಿದರು.ಸಭೆಯಲ್ಲಿ ಆಡು,ಕುರಿ,ಕೋಳಿ,ಜಾನುವಾರು ಮತ್ತು ಮತ್ಸ್ಯ ಮಾಂಸಗಳನ್ನು ಭಕ್ಷಿಸುವ ತಮ್ಮ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಬಗ್ಗೆ ಮಾತನಾಡಿದರು. ಆಹಾರದ ಹಕ್ಕುಗಳನ್ನು ಸಂರಕ್ಷಿಸುವ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ಘೋಷಿಸಲಾಯಿತು.ರಾಜ್ಯದಲ್ಲಿ ಗೋಹತ್ಯೆ ನಿಷೇಧ ಹೆಸರಲ್ಲಿ,ಪ್ರಸ್ತುತ ಸಕ್ರಮ ಜಾನುವಾರು ಸಾಗಾಟಕ್ಕೆ ಸಂಘ ಪರಿವಾರ ಕೃಪಾ ಪೋಷಿತ ದುಷ್ಕರ್ಮಿ ದಳದ ಪುಂಡರು ತಡೆಯೊಡ್ಡಿ ಜನರ ನೈಸರ್ಗಿಕ ಆಹಾರದ ಹಕ್ಕುಗಳನ್ನು ತಡೆಯುವ ಕಾರ್ಯದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೇ,ಜಾಣ ಮೌನ ಪಾಲಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರ ಭೀಫ್ ಮಾಂಸ ರಫ್ತಿಗೆ ಅನುಮತಿ ನೀಡಿ,ದೇಶೀಯ ಜನತೆಯ ಆಹಾರದ ಹಕ್ಕನ್ನು ಕಸಿಯುತ್ತಿದೆ ಎಂಬಿತ್ಯಾದಿ ಯಾಗಿ ಮಾತುಗಳು ಪ್ರತಿಭಟನೆಯಲ್ಲಿ ಮೊಳಗಿದವು. ಪ್ರತಿಭಟನೆಯ ಲ್ಲಿ ಐವನ್ ಡಿ ಸೋಜಾ,ಮೊಯಿದಿನ್ ಬಾವ, ಸುನಿಲ್ ಬಜಾಲ್, ಯಾದವ ಶೆಟ್ಟಿ,ಕೆ.ಅಶ್ರಫ್(ಮಾಜಿ ಮೇಯರ್) , ಆಲಿ ಹಸನ್,ಸದಾಶಿವ ಸುಳ್ಯ ರವರು ಸಭೆಯಲ್ಲಿ ಮಾತನಾಡಿದರು. ಎಚ್. ಬೀ ಟೀ.ಶಂಶುದೀನ್,ಕಬೀರ್ ಉಳ್ಳಾಲ್,ಮೊಹಮ್ಮದ್ ಹನೀಫ್.ಯು,ಸಮೀರ್ ಆರ್.ಕೆ,ಮೊಯಿದಿನ್ ಮೋನು,ಯಾಸೀನ್ ಕುದ್ರೋಳಿ,ಹನೀಫ್ ಉಳ್ಳಾಲ್,ಖಾದರ್,ಸತ್ತಾರ್, ರವರನ್ನೊಳ ಗೊಂಡು ಹಲವಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಜಿಲ್ಲೆಯ ನಗರ ಮತ್ತು ತಾಲೂಕು ಕೇಂದ್ರಗಳಿಂದ ವರ್ತಕರು ಮತ್ತು ಜನರು ಆಗಮಿಸಿದ್ದರು.
kannada news portal
ಇನ್ನಷ್ಟು ವರದಿಗಳು
ಉಳ್ಳಾಲದಲ್ಲಿ ನೂತನ ಡಯಾಲಿಸಿಸ್ ಕೇಂದ್ರ: ಸ್ಥಳೀಯ ರೋಗಿಗಳಿಗೆ ಆದ್ಯತೆಯ ನೋಂದಣಿ
ತಲಪಾಡಿ ಗ್ರಾಮಾಭಿವೃದ್ಧಿ: ಅಧ್ಯಕ್ಷ ಟಿ.ಇಸ್ಮಾಯಿಲ್ ನೇತೃತ್ವದಲ್ಲಿ ಸಮಗ್ರ ನಿಧಿ ಅನುಷ್ಟಾನತೆ.
ಉಳ್ಳಾಲ ನಿವಾಸಿ ಯು.ಕೆ.ಅಬ್ದುಲ್ಲಾ ಕೊಟ್ಟಾರ ನಿಧನ: ಬಸ್ತಾನುಲ್ ಉಲೂಮ್ ಸಂಸ್ಥೆ ಸಂತಾಪ.