November 21, 2024

Vokkuta News

kannada news portal

ಉಳ್ಳಾಲ ಅಂಗಡಿ ಸುಡುವಿಕೆ; ಮತೀಯ ಉದ್ವಿಗ್ನತೆ ಸ್ರಷ್ಟಿಸುವ ಪ್ರಯತ್ನದ ಮುಂದುವರಿದ ಭಾಗ: ಮುಸ್ಲಿಮ್ ಒಕ್ಕೂಟ : ಕೆ.ಅಶ್ರಫ್

ಉಳ್ಳಾಲ ತೊಕ್ಕೊಟ್ಟು ಒಳ ಪೇಟೆಯಲ್ಲಿ ನಿನ್ನೆ ದುಷ್ಕರ್ಮಿಗಳು ಮಾಂಸಾಹಾರದ ಅಂಗಡಿ ಮುಂಗಟ್ಟುವಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದರ ಹಿಂದೆ ಮತೀಯ ಉದ್ವಿಗ್ನತೆ ಸೃಷ್ಟಿಸುವ ಸ್ಪಷ್ಟ ಉದ್ದೇಶ ಎದ್ದು ಕಾಣುತ್ತಿದೆ. ಮುಸ್ಲಿಮ್ ಅಲ್ಪ ಸಂಖ್ಯಾತ ಬಾಹುಳ್ಯ ವಾದ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದಲೇ,ಮತೀಯ ಉದ್ವಿಗ್ನತೆಗೆ ನಾಂದಿ ಹಾಡುವ ಪ್ರಯತ್ನ ಇದಾಗಿದೆ. ಇತ್ತೀಚೆಗಿನ ಕಲ್ಲಡ್ಕ ಭಟ್ಟರ ಪದ ಬಳಕೆ
‘ಉಳ್ಳಾಲ ಪಾಕಿಸ್ತಾನ’ದ ಮುಂದುವರಿಕೆಯ ಭಾಗವಾಗಿ ನಿನ್ನೆಯ ಅಂಗಡಿ ಸುಡುವಿಕೆ ಘಟನೆ ನಡೆದಿದೆ. ಈ ದುಷ್ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ. ಕೋಮು ಗಲಭೆ ಸ್ರಷ್ಟಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಮಾಂಸ ವ್ಯಾಪಾರಿಗಳಿಗೆ ನಷ್ಟ ಪರಿಹಾರ ನೀಡಿ ಅಲ್ಲಿ ನಿರ್ಭೀತಿಯಿಂದ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ದೇಶದ ಪ್ರಜ್ಞಾವಂತ ಭಾರತೀಯರು, ದುಷ್ಕರ್ಮಿಗಳ ಇಂತಹ ಸರ್ವ ಷಡ್ಯಂತ್ರದ ಬಗ್ಗೆ ಬಲ್ಲವರಾಗಿದ್ದಾರೆ. ಮಾಂಸಾಹಾರದ ಬಗ್ಗೆ ಮುಸ್ಲಿಮರಗಿಂತ ಮುಸ್ಲಿಮೇತರ ಜನ ಪ್ರತಿನಿಧಿಗಳು ಹೇಳಿಕೆ, ಪ್ರತಿ ಹೇಳಿಕೆ ನೀಡುತ್ತಿದ್ದು , ಮುಸ್ಲಿಮೇತರ ಮುಗ್ದ ಜನರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಕಾಲ ಎಂದೋ ಕಳೆದು ಹೋಗಿದೆ ಎಂದು ಕೆ.ಅಶ್ರಫ್ ಹೇಳಿದ್ದಾರೆ.