June 29, 2025

Vokkuta News

kannada news portal

ಡಾ.ಕಯ್ಯಾರ ಕಿಞ್ಞಣ್ಣ ರೈ ಜಯಂತಿಯಲ್ಲಿ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೊರು ಕೃತಿ ಹಂಚಿಕೆ.

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ,ಕರ್ನಾಟಕ ಸರಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಆಕಾಡೆಮಿ ಕಾಸರಗೋಡು,ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಯಾಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು ಮತ್ತು 16 ನೇ ವಾರ್ಡ್ ಕಯ್ಯಾರು ಕುಟುಂಬ ಶ್ರೀ ಘಟಕಗಳು ಇಂದು ಕಾಸರಗೋಡು ಕಯ್ಯಾರ ವಿನಲ್ಲಿ ಆಯೋಜಿಸಿದ್ದ ಗಡಿನಾಡ ಕವಿ,ಸಾಹಿತಿ,ಸ್ವಾತಂತ್ರ್ಯ ಹೋರಾಟಗಾರ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮಂಗಳೂರಿನ ಹಿರಿಯ ಸಾಹಿತಿ ಅಬ್ದುಲ್ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೋರು ಎಂಬ ಕೃತಿಯನ್ನು ವಿತರಣೆ ಗೊಳಿಸಲಾಯಿತು.ಪ್ರಮುಖರು ಭಾಗವಹಿಸಿದ್ದ ಸಭೆಯಲ್ಲಿ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಅಬ್ದುಲ್ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೂರು ಕೃತಿ ಬ್ಯಾರಿ ಪದಪುಂಜ ಆಗಿದ್ದು, ಸುಲಲಿತವಾಗಿ ದಿನವಹಿ ಪದಗಳನ್ನು ಕಲಿತುಕೊಳ್ಳುವ ಉದ್ದೇಶದಿಂದ ರಚಿಸಲಾಗಿದ್ದು, ಪ್ರಮುಖವಾಗಿ ಸರಕಾರಿ ಇಲಾಖೆಯ ಅಧಿಕಾರಿಗಳು ಬ್ಯಾರಿಯೆತರ ಭಾಷಿಕರ ಕಲಿಕೆಗೆ ಉಪಯುಕ್ತವಾಗಿದೆ, ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿ ಆಘಾದ ಪ್ರಮಾಣದ ಬ್ಯಾರಿ ಜನಾಂಗದ ಜನರು ಇದ್ದು ಅವರ ಪ್ರಮುಖ ಮಾತೃ ಭಾಷೆ ಬ್ಯಾರಿ ಆಗಿದೆ. ಗಡಿನಾಡು ಪ್ರದೇಶದಲ್ಲಿ ಬ್ಯಾರಿ ಸಾಹಿತ್ಯ ಅಭಿವೃದ್ಧಿ ಉದ್ದೇಶಿತ ಈ ಕೃತಿಯನ್ನು ಬಿಡುಗಡೆ ಗೊಳಿಸಲಾಗಿದೆ ಎಂದು ಸಭೆಯಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ವಿಧಾನ ಸಭಾ ಶಾಸಕರಾದ ಕೆ. ಎಂ.ಅಶ್ರಫ್,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನ ಮರದ, ಕಾರ್ಯದರ್ಶಿ ಆದ ಪ್ರಕಾಶ್ ಮತ್ತೀಹಳ್ಳಿ, ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಆಕಾಡೆಮಿ ಕಾಸರಗೋಡು ಅಧ್ಯಕ್ಷರಾದ ಚನಿಯಪ್ಪ ನಾಯ್ಕ, ಪ್ರಾಧ್ಯಾಪಕ ಮತ್ತು ಜನಪದ ಕಲಾವಿದ ಪ್ರೊ ಶ್ರೀನಾಥ್, ದ.ಕ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕಲ್ಕೂರ, ಜೋಸೆಫ್ ಮಥಾಯಿಸ್, ಕೊಂಕಣಿ ಕಲಾವಿದ, ಸಾಹಿತ್ಯ ಸಂಘಟಕ ದುಬೈ, ಹಿರಿಯ ಬಹುಬಾಷಾ ಸಾಹಿತಿ ಮೊಹಮ್ಮದ್ ಬಡ್ಡೂರು ಪೈಯೊಳಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ,ಮಂಗಳೂರು ಕಲಾವಿದ ಹುಸೈನ್ ಕಾಟಿಪಳ್ಳ, ಗಡಿನಾಡು ಪ್ರಾಧಿಕಾರದ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.