July 27, 2024

Vokkuta News

kannada news portal

ಜೆಪ್ಪು ರೈಲ್ವೆ ದ್ವಿಪಥ ಅಂಡರ್ ಪಾಸ್ ಬ್ರಿಡ್ಜ್ ಕಾಮಗಾರಿ ತ್ವರಿತಗೊಳಿಸಲು ಉಳ್ಳಾಲ.ನಾ.ವೇದಿಕೆ ಸಂಸದರ ಭೇಟಿ.

ಮಂಗಳೂರು: ಕಳೆದ ಎರಡು ವರ್ಷಗಳಿಂದ ನೆನಗುದ್ದಿಗೆ ಬಿದ್ದಿರುವ ಜೆಪ್ಪು ಮಹಾಕಾಳಿಪಡ್ಪು ,ರೈಲ್ವೆ ದ್ವಿಪಥ ಅಂಡರ್ ಬ್ರಿಡ್ಜ್ ನ ಹಾಲಿ ಕಾಮಗಾರಿ ವಿಳಂಬದಿಂದ,
ದಿನ ನಿತ್ಯ ಈ ಭಾಗದಲ್ಲಿ ಸಂಚರಿಸುವ, ದಿನಗೂಲಿ ನೌಕರರಿಗೆ, ಕಾರ್ಮಿಕರಿಗೆ, ಮೀನುಗಾರರಿಗೆ, ಹಾಗೂ ಉಳ್ಳಾಲ ಕಡೆಯಿಂದ ಮಂಗಳೂರು ಕಡೆ ಪ್ರಯಾಣ ಬೆಳೆಸುವ ರೋಗಿಗಳಿಗೂ, ಸಾರ್ವಜನಿಕರಿಗೂ, ವಾಹನಗಳಿಗೆ,ಬಗಳಷ್ಟು ತೊಂದರೆ ಅನುಭವಿಸುತ್ತಿದ್ದು ಕೂಡಲೇ ಜನ ಸಾಮಾನ್ಯರ ಈ ಕಷ್ಟವನ್ನು ಅರಿತು ಪರಿಹರಿಸಲು.ಮತ್ತು ಕಾಮಗಾರಿಯನ್ನು ತ್ವರಿತ ಹೋಲಿಸಲು ಉಳ್ಳಾಲ ನಾಗರೀಕ ವೇದಿಕೆಯ ನೇತೃತ್ವದಲ್ಲಿ ದ.ಕ. ಸಂಸತ್ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ರವರನ್ನು ಸಂಸದರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ನೀಡಿ ಒತ್ತಾಯಿಸಲಾಯಿತು, ಹಾಗೆಯೇ ಅಪರ ಜಿಲ್ಲಾಧಿಕಾರಿ ಶ್ರೀಯುತ ಸಂತೋಷ್ ಕುಮಾರ್ ರವರಿಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು,ನಿಯೋಗದಲ್ಲಿ, ಉಳ್ಳಾಲ ನಾಗರೀಕ ವೇದಿಕೆಯ ಅಧ್ಯಕ್ಷರಾದ ಖಾಲಿದ್ ಉಳ್ಳಾಲ್, ಸುಸ್ತಿರ ಉಳ್ಳಾಲದ ಕನಸುಗಾರರ ಬಳಗ ಕಿಶೋರ್ ಅತ್ತಾವಾರ, ಸಂಚಾಲಕರಾದ ಝಕೀರ್ ಇಕ್ಲಾಸ್, ಉಪ ಸಂಚಾಲಕರಾದ ನವೀನ್ ನಾಯಕ್, ನಿವೃತ್ತ ಶಿಕ್ಷಕಿ ಜಾನಕೀ ಪುತ್ರನ್, (ಎನ್.ಐ.ಟಿ.ಕೆ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಸುರತ್ಕಲ್ ಪ್ರಾಂಶುಪಾಲೆ ಶ್ರೀಮತಿ ಪ್ರಮೀಳ ಮೇಡಂ,ವ್ಯಾಘ್ರ ಚಾಮುಂಡೇಶ್ವರಿ ವಿದ್ಯಾಲಯದ ಶಾಲಾ ಸಂಚಾಲಕರಾದ ರೋಹಿದಾಸ್ ಬಂಗೇರ, ನಗರ ಸಭಾ ಸದಸ್ಯರಾದ ಅಬ್ದುಲ್ ಜಬ್ಬಾರ್, ಮಾಜಿ ನಗರ ಸಭಾ ಸದಸ್ಯೆ, ರಝಿಯಾ ಇಬ್ರಾಹಿಂ, ನಮ್ಮೂರ ಧ್ವನಿ ಸದಸ್ಯರಾದ ಉಮ್ಮರ್ ಫಾರೂಕ್, ಉಳ್ಳಾಲ ತಾಲೂಕು, ಕರ್ನಾಟಕ ವೇದಿಕೆ ಯ ಅಧ್ಯಕ್ಷರಾದ ಫೈರೋಝ್ ಡಿ. ಎಂ, ಸಿಹಾನ ಬಿ ಎಂ , ಜಮಾಹತ್ ಇಸ್ಲಾಮಿ ಹಿಂದ್ ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ, ಹಾಗೂ ಸಾಮಾಜಿಕ ಕಾರ್ಯಕರ್ತ ಸೋಶಿಯಲ್ ಫಾರೂಕ್ ಉಪಸ್ಥಿತರಿದ್ದರು.(ವರದಿ: ಸೋಶಿಯಲ್ ಫಾರೂಕ್)