March 19, 2025

Vokkuta News

kannada news portal

ರಮಾನಾಥ ರೈ ಅಧ್ಯಕ್ಷ ಮಂಡಳಿ ನೇತೃತ್ವದಲ್ಲಿ ಮಂಗಳೂರು ಇಂಡಿಯಾ ಒಕ್ಕೂಟ ಸಭೆ.

ಮಂಗಳೂರು: ದ.ಕ.ಲೋಕ ಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿರವರನ್ನು ಚುನಾವಣೆಯಲ್ಲಿ ವಿಜಯಗೊಳಿಸಲು ಇಂಡಿಯಾ ಒಕ್ಕೂಟದ ಸರ್ವ ಮಿತ್ರ ಪಕ್ಷಗಳು ಶ್ರಮಿಸಲಿದೆ ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮಂಗಳೂರು ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸಭೆಯ ಅಧ್ಯಕ್ಷತೆಯನ್ನು ರಮಾನಾಥ ರೈ ವಹಿಸಿದ್ದರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್,ವಿನಯ ಕುಮಾರ್ ಸೊರಕೆ, ಉಪಾಧ್ಯಕ್ಷ ಕೆ.ಅಶ್ರಫ್( ಮಾಜಿ ಮೇಯರ್), ಶಶಿಧರ್ ಹೆಗ್ಡೆ, ಎಡ ಪಕ್ಷಗಳ ಮುಖ್ಯಸ್ಥರಾದ ಯಾದವ ಶೆಟ್ಟಿ, ಡಿ ವೈಎಫ್ಐ ಮುಖ್ಯಸ್ಥ ಮುನೀರ್ ಕಾಟಿಪಳ್ಳ ,ಸುನಿಲ್ ಕುಮಾರ್ ಬಜಾಲ್, ಆಫ್ ಪಕ್ಷದ ವಿಶು ಕುಮಾರ್ ದಲಿತ ಸಂಘಟನೆಗಳ ಮುಖಂಡರು, ಮುಂತಾದವರು ಉಪಸ್ಥಿತರಿದ್ದರು.