June 13, 2024

Vokkuta News

kannada news portal

ಉಳ್ಳಾಲ ನಗರೋತ್ಥಾನ ಯೋಜನೆಯ ಅಲೇಕಲ ಕಾಂಕ್ರೀಟೀಕೃತ ಮುಖ್ಯ ರಸ್ತೆ: ಯು.ಟಿ.ಖಾದರ್ ಉದ್ಘಾಟನೆ.

ಉಳ್ಳಾಲ: ಕರ್ನಾಟಕ ಸರ್ಕಾರದ ನಗರಾಭಿವೃದ್ದಿ ಯೋಜನೆಯಡಿ ಮಂಜೂರಾದ ನಗರೋತ್ಥಾನ ನಿಧಿಯ ಅಡಿಯಲ್ಲಿ ಮಂಜೂರಾದ ಉಳ್ಳಾಲ ನಗರದ ಅಲೇಕಳ ಮುಖ್ಯರಸ್ತೆಯ ನ್ನು ಕಾಂಕ್ರೀಟ್ ಗೊಳಿಸಲು ಈ ಹಿಂದೆ ಸ್ಥಳೀಯ ಶಾಸಕರಾದ ಶ್ರೀ ಯು. ಟಿ. ಖಾದರ್ ರವರ ಶಿಫಾರಸು ಆಧರಿಸಿ ಕಾಮಗಾರಿ ಅನುಷ್ಟಾನಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡು ಅಳೇಕಲ ಮುಖ್ಯರಸ್ತೆ ಯು ಸಾರ್ವಜನಿಕ ಉಪಯೋಗಕ್ಕೆ ಸಿದ್ಧವಾಗಿದ್ದು ಪೂರ್ಣಗೊಂಡ ರಸ್ತೆಯನ್ನು ಇಂದು ಮಂಗಳೂರು ವಿಧಾನ ಸಭಾ ಶಾಸಕರಾದ ಶ್ರೀ ಯು.ಟಿ. ಖಾದರ್ ರವರು ಉದ್ಘಾಟಿಸಿದರು.

ರಸ್ತೆ ಉದ್ಘಾಟಿಸಿ ಸಾರ್ವಜನಿಕ ಸಮಾರಂಭ ವೊಂದರಲ್ಲಿ ಮಾತನಾಡಿ ಉಲ್ಲಾಲವು ನಗರ ಸಭೆ ದರ್ಜೆಗೆ ಏರಿದ ನಂತರದ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ಈ ಆಲೇಕಲ ಮುಖ್ಯ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿ ಕೂಡ ಒಂದು ಮುಖ್ಯ ಅಭಿವೃದ್ದಿ ಕಾರ್ಯ ಎಂದು ಹೇಳಿದರು.

ರಸ್ತೆಯನ್ನು ಲೋಕಾರ್ಪಣೆ ಗೊಳಿಸಿ ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಚಿತ್ರಕಲಾ ಚಂದ್ರಕಾಂತ್ ಮತ್ತು ಉಪಾಧ್ಯಕ್ಷ ಅಯೂಬ್ ಮಂಚೀಲ ರವರು ಮಾತನಾಡಿ ಕಾಮಗಾರಿ ಯ ಭಗ್ಗೆ ವಿವರಣೆ ನೀಡಿದರು.

ಸಾರ್ವಜನಿಕ ಸಮಾರಂಭವನ್ನು ಸ್ಥಳೀಯ ಸಮಾಜ ಸೇವಾ ಸಂಸ್ಥೆ ಮತ್ತು ಸಾಮಾಜಿಕ ಜಾಲ ತಾಣ ತಂಡವಾದ ನಮ್ಮೂರ ದ್ವನಿ ಗ್ರೂಪ್ ನವರು ಆಯೋಜಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಯು. ಟೀ.ಖಾದರ್ ರವರನ್ನು ಸನ್ಮಾನಿಸಲಾಯಿತು.ಶ್ರೀಮತಿ ಚಿತ್ರಕಲಾ ಚಂದ್ರಕಾಂತ್ ಮತ್ತು ಅಯೂಬ್ ಮಂಚಿಲ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಮೊಹಮ್ಮದ್ ಸಮೀರ್ ಆರ್.ಕೆ ನಿರೂಪಿಸಿದರು.ನಮ್ಮೂರ ದ್ವನಿ ಮುಖ್ಯಸ್ಥರು ಸ್ವಾಗತಿಸಿ,ನಮ್ಮೂರ ದ್ವನಿ ಅಧ್ಯಕ್ಷರಾದ ಉಮರ್ ಫಾರೂಕ್ ಯು. ಎ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.ಅಬ್ದುಲ್ ಫಾತಾಕ್ ವಂದಿಸಿದರು.ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು.