November 21, 2024

Vokkuta News

kannada news portal

ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟದ ಅಗತ್ಯವಿದೆ: ಆನ್ ಲೈನ್ ಸಂವಾದದಲ್ಲಿ ನವೀನ್ ಸೂರಿಂಜೆ.

ವೆಬ್: ನಿನ್ನೆ ಸಾಮಾಜಿಕ ಜಾಲ ಪಬ್ಲಿಕ್ ವಾಯ್ಸ್ ಮೆಸೆಂಜರ್ ಹ್ಯಾಂಡಲ್ ನಲ್ಲಿ ನಡೆದ ದ.ಕ.ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಮೆಡಿಕಲ್ ಕಾಲೇಜು ಬಗ್ಗೆಗಿನ ಸಂವಾದದಲ್ಲಿ ನವೀನ್ ಸೂರಿಂಜೆ ಜಿಲ್ಲೆಯಲ್ಲಿ ಈ ಬಗ್ಗೆ ಜನ ಹೋರಾಟದ ಅಗತ್ಯತೆಯನ್ನು ಒತ್ತಿ ಹೇಳಿದರು. ಭಾರತೀಯ ಕಾಲಮಾನ ರಾತ್ರಿ ಗಂಟೆ 09.00 ಕ್ಕೆ ನಡೆದ ಸಂವಾದಡಲ್ಲಿ ರಫೀಕ್ ಪರ್ಲಿಯ ನಿರೂಪಣೆಯ ಈ ಕೆಳಗಿನಂತೆ ನಡೆಯಿತು.

ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ವಿನ ಕೂಗು ಕೇಳಿಸುತ್ತಿದ್ದು,ಜನಾಂದೋಲನ,ಹೋರಾಟಗಳು ನಡೆಯುತ್ತಿದ್ದು,ದ.ಕ.ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಯಾವ ಕಾರಣಕ್ಕೆ ಅಗತ್ಯವಿದೆ?.

ಇವತ್ತು ಕರಾವಳಿ ಜಿಲ್ಲೆಯಲ್ಲಿ ಯಾಕೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಬೇಕು ಅಂದರೆ,ಕರಾವಳಿಯ ಮೆಡಿಕಲ್ ಮಾಫೀಯ ದಿಂದ ಮುಕ್ತ ಆಗಬೇಕಿದೆ, ಮೆಡಿಕಲ್ ಮಾಫಿಯಾ ಇದೆ ಅನ್ನುವುದು ನಮಗೆ 2017 ರಲ್ಲಿ ಪಕ್ಕ ಆಗಿತ್ತು, ಅಂದು ಸಿದ್ದರಾಮಯ್ಯ ಸರಕಾರದಲ್ಲಿ ,ರಮೇಶ್ ಕುಮಾರ್ ರವರು ಆರೋಗ್ಯ ಸಚಿವರಾಗಿದ್ದಾಗ,ಸರಕಾರ ವೈದ್ಯಕೀಯ ನಿಯಂತ್ರಣ ಕಾಯ್ದೆ ಜಾರಿಗೆ ತಂದಾಗ ಇಡೀ ಖಾಸಗಿ ವೈದ್ಯಕೀಯ ಸಮೂಹ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಸರಕಾರ ಮಣಿಯದೆ ಇದ್ದ ಸಂಧರ್ಭದಲ್ಲಿ ವೈದ್ಯಕೀಯ ಕಾಲೇಜುಗಳು ಒಪಿಡಿ ಯನ್ನು ಮುಚ್ಚಿ ಪ್ರತಿಭಟನೆ ಮಾಡಿದ್ದೂ ಅಲ್ಲದೆ ಐಸಿಯು ಅನ್ನು ಮುಚ್ಚಿ ಪ್ರತಿಭಟನೆ ಮಾಡುವಂತಹ ಒಂದು ನಿರ್ಧಾರಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಬಂದಿದೆ ಅಂದರೆ ಅವರು ಎಷ್ಟು ಅಮಾನವೀಯ ವಾಗಿದ್ದಾರೆ ಎಂಬುದಕ್ಕೆ ಬೇರೆ ಖಾತರಿ ಅಥವಾ ಉದಾಹರಣೆ ಬೇಕಿಲ್ಲ. ಇಂತಹ ಉದಾಹರಣೆ ನಮ್ಮ ಮುಂದೆ ಇರುವಾಗ ಪ್ರತೀ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆ ಅಗತ್ಯ ಇದೆ. ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ವೈದ್ಯಕೀಯ ಕಾಲೇಜುಗಳು ತೀವ್ರ ಅಗತ್ಯ ಇದೆ. ಹಾಲಿ ಇರುವ ವೈದ್ಯಕೀಯ ಕಾಲೇಜುಗಳು ಬೇರೆ ಬೇರೆ ಸರ್ಕಾರಿ ಅನುದಾನದ ಅಡಿಯಲ್ಲಿ ನಡೆಯುತ್ತಾ ಇದೆ. ಭಾಷಾ ಅಥವಾ ಧಾರ್ಮಿಕ ಅಲ್ಪ ಸಂಖ್ಯಾತ ಕೋಟಾದಲ್ಲಿ ಇದು ನಡೆಯುತ್ತಿದ್ದು, ತುಳು,ಮುಸ್ಲಿಮ್,ಜೈನ, ಕ್ರಿಶ್ಚಿಯನ್ ಎಂಬ ನೆಲೆಯಲ್ಲಿ ಈ ಸಂಸ್ಥೆಗಳು ಲಾಭ ಅಥವಾ ರಿಯಾಯಿತಿಯನ್ನು ಪಡೆದುಕೊಂಡು ನಡೆಯುತ್ತಾ ಇದೆ. ಈ ಸಂಸ್ಥೆಗಳಿಂದ ತುಳುವರಿಗೆ ಏನು ಪ್ರಯೋಜನ ಆಗಿದೆ, ಅಥವಾ ಆಯಾ ಧಾರ್ಮಿಕ ಸಂಸ್ಥೆಗಳಿಂದ ಮುಸ್ಲಿಮರಿಗೆ,ಜೈನರಿಗೆ, ಕ್ರಿಶ್ಚಿಯನ್ ರಿಗೇ ಏನು ಲಾಭ ಆಗಿದೆ. ಈ ಪ್ರಶ್ನೆಯ ಮುಂದುವರಿದ ಭಾಗವಾಗಿ ದ.ಕ.ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜಿನ ಅಗತ್ಯ ಇದೆ ಎಂಬುದಾಗಿದೆ.

ಮಂಗಳೂರಿನಲ್ಲಿರುವ ಸರ್ಕಾರಿ ವೆನ್ಲಾಕ್ ಆಸ್ಪತ್ರೆ,ಲೇಡಿ ಗೋಶನ್, ವಿವಿಧ ಸಮುದಾಯ ಆರೋಗ್ಯ ಕೇಂದ್ರ ಗಳ ಕಾರ್ಯ ವೈಖರಿಯ ಬಗ್ಗೆ ನಿಮ್ಮ ಅನಿಸಿಕೆ?

ನವೀನ್ ಸೂರಿಂಜೆ:
ವೆನ್ಲಾಕ್ ಆಸ್ಪತ್ರೆಯನ್ನ ನಾವು ಈಗಾಗಲೇ ಕಳೆದು ಕೊಂಡಿದ್ದೇವೆ.ಅದನ್ನು ನಾವು ಖಾಸಗಿ ಸಹಭಾಗಿತ್ವ ಎಂಬ ನೆಲೆಯಲ್ಲಿ ಅದನ್ನು ಕೆಎಂಸಿ ಗೆ ಮಾರಾಟ ಮಾಡಿ ಆಗಿದೆ. ಮೇಲ್ನೋಟಕ್ಕೆ ಅದು ನಮಗೆ ಸರಕಾರಿ ಆಸ್ಪತ್ರೆ ಎಂದು ಕಂಡರೂ ಕೂಡಾ,ಅಲ್ಲಿ ಪೂರ್ತಿ ಖಾಸಗಿ ದರ್ಬಾರು ನಡೆಯುತ್ತಾ ಇದೆ. ಇವತ್ತು ವೆನ್ಲಾಕ್ ಆಸ್ಪತ್ರೆಯನ್ನ ಒಂದು ಮೆಡಿಕಲ್ ಕಾಲೇಜು ಆಗಿ ಪರಿವರ್ತನೆ ಮಾಡುವಂತಹ ಅವಕಾಶ ಸರಕಾರಕ್ಕೆ ಇಲ್ವಾ ಅಂತ ಅಂದ್ರೆ, ಸ್ಪಷ್ಟವಾಗಿ ಸರಕಾರ ಮನಸ್ಸು ಮಾಡಿದರೆ, ವೆನ್ಲಾಕ್ ಆಸ್ಪತ್ರೆಯನ್ನು ಇನ್ನಷ್ಟು ವಿಸ್ತರಣೆ ಮಾಡಿ ಅದನ್ನು ಮೆಡಿಕಲ್ ಕಾಲೇಜು ಆಗಿ ಪರಿವರ್ತನೆ ಮಾಡಿ ಕೊಂಡು ಇನ್ನಷ್ಟು ವೈದ್ಯಕೀಯ ಸೇವೆಯ ಜೊತೆ ಜೊತೆಗೆ ನಮ್ಮ ತುಳುನಾಡಿನ ಅಥವಾ ಕರಾವಳಿಯ ಜನರಿಗೆ ಹೆಚ್ಚು ವೈದ್ಯಕೀಯ ಅವಕಾಶ ಗಳನ್ನೂ ಕೊಡುವಂತಹ ಒಂದು ಅವಕಾಶ ಸರಕಾರಕ್ಕೆ ಇತ್ತು, ಆದರೆ ಅದನ್ನು ಮಾಡದೆ, ವೆನ್ಲಾಕ್ ಆಸ್ಪತ್ರೆಯ ಒಂದು ಭಾಗವನ್ನು ಖಾಸಗಿಗೆ ಮತ್ತೊಂದು ಭಾಗವನ್ನು ಕೆಎಂಸಿಗೆ ಕೊಡುವ ಮೂಲಕ ಸಂಪೂರ್ಣವಾಗಿ ಖಾಸಗಿಯವರಿಗೆ ಕೊಡಲಾಗಿದೆ. ವೆನ್ಲಾಕ್ ಆಸ್ಪತ್ರೆ ಈ ಹಿಂದೆ ಯಾವ ರೀತಿ ಇತ್ತು ಅಂದರೆ ಇಡೀ ಜಿಲ್ಲೆಯ ಆಪರೇಶನ್ ಕಾರ್ಯದ ಒಂದು ಪ್ರಸಂಗ ಇದ್ದರೆ, ಹಳ್ಳಿ ಗಳಿಂದ ವೆನ್ಲಾಕ್ ಆಸ್ಪತ್ರೆಗೆ ಬರುತ್ತಾ ಇದ್ದರು. ಈಗ ಅಂತಹ ಜನರನ್ನು ಅಲ್ಲಿನ ಕೆಎಂಸಿಯ ಮಕ್ಕಳಿಗೆ ಅವರು ಪ್ರಯೋಗದ ವಸ್ತುಗಳು ಎಂಬ ರೀತಿಯಲ್ಲಿ ಅವರ ಕಾರ್ಯ ನಿರ್ವಹಣೆ ಇದೆ, ಜೊತೆಗೆ ನೇರವಾಗಿ ಅವರನ್ನು ಖಾಸಗಿಆಸ್ಪತ್ರೆಗೆ ಶಿಫ್ಟ್ ಮಾಡುವ ವ್ಯವಸ್ಥೆಗಳು, ಅವರ ಇನ್ಸೂರೆನ್ಸ್ ವ್ಯವಸ್ತೆಯನ್ನು ನೋಡಿಕೊಂಡು, ಆ ನಂತರ ಸರಕಾರದಿಂದ ರೋಗಿಗೆ ಸಿಗುವಂತಹ ಸವಲತ್ತನ್ನು ನೋಡಿಕೊಂಡು ಶಿಫ್ಟ್ ಮಾಡುವ ಬಹಳ ವ್ಯವಸ್ಥಿತವಾಗಿ ಈ ವೈದ್ಯಕೀಯ ಮಾಫಿಯಾ ಮಾಡುತ್ತಾ ಇದೆ. ವೆನ್ಲಾಕ್ ಆಸ್ಪತ್ರೆಯನ್ನು ಉಳಿಸಿ ಕೊಳ್ಳಲು ನಮ್ಮಿಂದ ಸಾಧ್ಯ ಆಗಿಲ್ಲ, ವೆನ್ಲಾಕ್ ಆಸ್ಪತ್ರೆಯನ್ನು ಉಳಿಸಿ ಕೊಳ್ಳಲು 2020 ರಲ್ಲಿ ದೊಡ್ಡ ಪ್ರತಿಭಟನೆಯನ್ನು ಡಿವೈಎಫ್ಐ ನಡೆಸಿತ್ತು. ಆದರೆ ಅದು ಸಫಲ ಆಗಿರಲಿಲ್ಲ, ದೊಡ್ಡ ಮಟ್ಟದ ಜನ ಬೆಂಬಲ ಇರಲಿಲ್ಲ. ಪ್ರಸ್ತುತ ಸರಕಾರಿ ಮೆಡಿಕಲ್ ಕಾಲೇಜು ಬಗ್ಗೆ ಇಡೀ ಜಿಲ್ಲೆಯಲ್ಲಿ ಜನಾಂದೋಲನ ಆಗಬೇಕಿದೆ.

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕಿದ್ದರೆ ರಾಜ್ಯ ಸರಕಾರ ಮೇಲೆ ಬೇಡಿಕೆ ಇಟ್ಟರೆ ಸಾಕಾಗಬಹುದೇ, ಕೇಂದ್ರ ಸರಕಾರದ ಮೇಲೂ ಬೇಡಿಕೆ ಬೇಕೆ?

ಕರಾವಳಿಗೆ ವೈದ್ಯಕೀಯ ಕಾಲೇಜು ಬೇಡಿಕೆ ವಿಶಯದಲ್ಲಿ ಹೋರಾಟ ಏನಿದೆ, ರಾಜ್ಯ ಸರಕಾರಕ್ಕೆ ಒತ್ತಡ ಹಾಕುವ ಭಗವಾಗಿ ಯೇ ಮಾಡಬೇಕಿದೆ. ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವುದು ರಾಷ್ಟ್ರೀಯ ವೈಧ್ಯಕೀಯ ಆಯೋಗ, ಇದು ಕೇಂದ್ರ ಸರ್ಕಾರದ ಅಧೀನದಲ್ಲಿ ಇರುತ್ತದೆ. ಈ ಆಯೋಗ ರಾಜ್ಯದಿಂದ ಬಂದ ಶಿಫಾರಸ್ಸುಗಳನ್ನು ಆಧರಿಸಿ ಈ ರೀತಿಯ ಅನುಮತಿಯನ್ನು ಕೊಡುತ್ತದೆ. ಅದಕ್ಕೆ ಪೂರಕವಾದ ಮಾನದಂಡಗಳನ್ನು ರಾಜ್ಯ ಸರಕಾರ ತೋರಿಸಬೇಕಾಗುತ್ತದೆ, ಉದಾಹರಣೆ ಗೆ,ಹಾಸಿಗೆ ಸೌಲಭ್ಯ ವಿಸ್ತೀರ್ಣ ಇತ್ಯಾದಿ ಆಧರಿಸಿ ಅನುಮತಿ ನೀಡಲಾಗುತ್ತದೆ, ರಾಜ್ಯ ಸರಕಾರ ಸರಿಯಾದ ಮಾನದಂಡಗಳನ್ನು ಭರ್ತಿ ಮಾಡಿದರೆ,ಅದೂ ವೆನ್ಲಾಕ್ ಆಸ್ಪತ್ರೆ ಅಥವಾ ಇನ್ನಿತರ ಕಡೆ ರಾಜ್ಯ ಸರಕಾರ ತೋರಿಸಿದರೆ , ಖಂಡಿತವಾಗಿ ರಾಷ್ಟ್ರೀಯ ಆಯೋಗ ,ಮಾನದಂಡಗಳು ಸರಿಯಾಗಿ ಇದ್ದರೆ ಅನುಮತಿ ಕೊಡಬೇಕಾಗುತ್ತದೆ. ಆದುದರಿಂದ ಕೇಂದ್ರಕ್ಕೆ ಒತ್ತಡದ ಬದಲಿಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಬೇಕಿದೆ.

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕಿದ್ದರೆ ನಾವು ಸಾಮಾಜಿಕ ಜಾಲ ತಾಣದ ಚರ್ಚ್ಛೇಮಾಡಿದರೆ ಸಾಕಾಗಬಹುದೆ? ಅಥವಾ ಇತರ ವಿಧದ ಹೋರಾಟದ ಮೂಲಕ ಫಲಿತಾಂಶ ಲಭ್ಯವಾಗಬಹುದೇ?.

ನವೀನ್ ಸೂರಿಂಜೆ:
ಸರಕಾರಿ ವೈದ್ಯಕೀಯ ಕಾಲೇಜು ವಿಗೆ ನಡೆಯುತ್ತಿರುವ ಈ ಹೋರಾಟ ಏನಿದೆ,ಇದು ಕೇವಲ ಫೇಸ್ ಬುಕ್, ವಾಟ್ಸ್ ಆಫ್ ಕೂಡಾ ಒಂದು ಭಾಗ ಮತ್ತು ಅದನ್ನು ಹೊರತು ಪಡಿಸಿ ಒಂದು ಜನ ಚಳುವಳಿ ಆಗ ಬೇಕಿದೆ, ಇಲ್ಲಿ.ಎಲ್ಲ ಸಮುದಾಯಗಳು ಎಲ್ಲ,ಜಾತಿ,ಧರ್ಮ, ಎಲ್ಲರನ್ನೂ ಒಟ್ಟು ಸೇರಿಸಿ ಮಾಡಬೇಕಾಗಿದೆ. ಈ ಹೋರಾಟ ರಾಜ್ಯ ಸರ್ಕಾರ ವನ್ನು ಎಚ್ಚೆತ್ತು ಕೊಳ್ಳುವ ಅಥವಾ ಬಡಿದೆಬ್ಬಿಸುವ ರೀತಿಯಲ್ಲಿ ನಡೆಯ ಬೇಕು.

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಎಂಟು ಶಾಸಕರು ಮತ್ತು ಒಬ್ಬ ಸಂಸದರು ಇರುವ ಸುದೃಢ ರಾಜಕೀಯ ನೆಲೆ ಇರುವ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಗದೆ ಇರಲು ಕಾರಣ ಏನು?

ನವೀನ್ ಸೂರಿಂಜೆ:
ಕರಾವಳಿ ಜಿಲ್ಲೆಯ ಜನಪ್ರತಿನಿದಿಗಳಿಗೆ ಒಂದು ಹಿರಿಮೆ ಇದೆ. ಬೆಂಗಳೂರು ಬಾಗದಲ್ಲಿ ಕರಾವಳಿಯ ಜನ ಪ್ರತಿನಿಧಿಗಳನ್ನು ಕಂಡಾಗ ಶಾಸಕರು ಅಥವಾ ಸಂಸದರನ್ನು ಕಂಡಾಗ ಬೇರೆ ಭಾಗದ ಜನ ಪ್ರತಿನಿಧಿಗಳಗೆ ಹೋಲಿಸಿದರೆ, ಕರಾವಳಿಯ ಶಾಸಕರು ಲಂಚ ಪಡೆದು ಕೊಳ್ಳುವುದು ಕಡಿಮೆ ಅವರು ಟ್ರಾನ್ಸ್ಫರ್ ನಿಂದ ಮಾಡುವ ದಂಧೆ ಬಹಳ ಕಡಿಮೆ,ಅವರು ಟ್ರಾನ್ಸ್ಫರ್ ನಿಂದ ದುಡ್ಡು ಮಾಡುವುದಿಲ್ಲ, ಅವರಿಗೆ ದೊಡ್ಡ ದೊಡ್ಡ ಇಂಡಸ್ಟ್ರಿ ಅಥವಾ ಮೆಡಿಕಲ್ ಮಾಫಿಯಾದಿಂದ ಅವರಿಗೆ ಎಲೆಕ್ಷನ್ ಫನ್ಡ್ ಬರುತ್ತದೆ ಎನ್ನಲಾಗುತ್ತದೆ ಆದುದರಿಂದ ಅವರು ಅದರ ಭಾಗವಾಗಿ ಇರುತ್ತಾರೆ. ಇವರು ಒಂದೇ ಒಂದು ಬಾರಿ ಸಂಸತ್ ನಲ್ಲಿ ನಮಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಪ್ರಶ್ನೆ ಕೇಳಲಿಲ್ಲ. ವಿಧಾನ ಸಭೆ,ಪರಿಷತ್ ನಲ್ಲಿ ಒಂದೇ ಒಂದು ಬಾರಿ ಕಾಲೇಜು ಮಂಜೂರು ಆಗಲಿಲ್ಲ ಎಂದು ಕೇಳಲಿಲ್ಲ.

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ಹೇಗೆ ನಡೆಯಬಹುದು?.

ಸೀಟು ಹಂಚಿಕೆ ಪ್ರಶ್ನೆ ಬಂದರೆ, ಈ ಹಿಂದೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂಧರ್ಭದಲ್ಲಿ ನಾವು ಒಂದು ಆತಂಕ ಪಟ್ಟಿದ್ದೆವು,ಕರ್ನಾಟಕ ಅನೇಕ ಮಂದಿ ವಿದ್ಯಾರ್ಥಿಗಳು ರಶ್ಯ ಮತ್ತು ಉಕ್ರೇನ್ ಗೆ ಹೋಗಿದ್ದರು.ಅಲ್ಲಿ ಸಮಸ್ಯೆ ಯಲ್ಲಿ ಇದ್ದಾರೆ ಎಂಬ ಆತಂಕ ಸೃಷ್ಟಿ ಆಗಿತ್ತು. ಅಲ್ಲಿ ಅವರಿಗೆ ಮಿತ ಶುಲ್ಕದಲ್ಲಿ ಅತ್ಯಂತ ಗುಣ ಮಟ್ಟದ ವೈದ್ಯಕೀಯ ಶಿಕ್ಷಣ ಸಿಗುತ್ತಿತ್ತು. ಇಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ಇಂತಹ ಅವಕಾಶ ಸೃಷ್ಟಿ ಆಗುತ್ತದೆ.ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿಧ್ಯಾರ್ಥಿ ಆಕಾಂಕ್ಷಿಗಳು ಆದ್ಯತೆ ಮೇಲೆ ಸೀಟು ಲಭ್ಯವಾಗಿಸಿ ಕೊಳ್ಳುವ ಅವಕಾಶ ಇದೆ.

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ವಿದ್ಯಾರ್ಥಿಗಳಿಗೆ ಹಂಚಲ್ಪಡುವ ಸೀಟುಗಳು ಕೇವಲ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರವೇ, ಅಥವಾ ಹೊರ ಜಿಲ್ಲೆಯ ವಿದ್ಯಾರ್ಥಿಗಳೂ ಲಭ್ಯವೇ?

ನವೀನ್ ಸೂರಿಂಜೆ:
ಹಾಗಾದಲ್ಲಿ ದ.ಕ.ಜಿಲ್ಲೆಗೆ ಅತ್ಯಂತ ಹೆಚ್ಚಿನ ಆದ್ಯತೆ ಸಿಗುತ್ತದೆ. ದ.ಕ.ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲೇ ಬೇಕಾಗುತ್ತದೆ. ಅದು ಕೇವಲ ಮಂಗಳೂರಿಗೆ ಮಾತ್ರ ಲಾಭ ಅಲ್ಲ, ಮಂಗಳೂರಿನ ಅಕ್ಕ ಪಕ್ಕದ ಜಿಲ್ಲೆ,ಉಡುಪಿ ಕಾಸರ ಗೋಡು, ಹಾಸನದ ವಿದ್ಯಾರ್ಥಿಗಳಿಗೂ.ಲಾಭ ಆಗುತ್ತದೆ. ದ.ಕ.ಜಿಲ್ಲೆಯ ಅಧಿಕ ವಿದ್ಯಾರ್ಥಿಗಳು ಇದರಪ್ರಯೋಜನ ಪಡೆಯಬಹುದು.. ಆ ಕಾರಣಕ್ಕಾಗಿ ನಮಗೆ ಸರಕಾರಿ ಕಾಲೇಜು ನಮಗೆ ಬೇಕಾಗುತ್ತದೆ. ಖಾಸಗಿಯ ಪ್ರಾಬಲ್ಯ ಮುರಿಯಬೇಕು, ಅಥವಾ ಗುಣ ಮಟ್ಟದ ವೈದ್ಯಕೀಯ ಸೇವೆಯ ಮಾನವೀಯತೆಯನ್ನು ಸ್ಥಾಪಿಸಬೇಕಾದರೆ, ಅದಕ್ಕೆ ಮೂಗುದಾರದ ರೀತಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಬೇಕಾಗುತ್ತದೆ.( 1ನಿ 49 ಸೆ)

ದ.ಕ.ಜಿಲ್ಲೆಯಲ್ಲಿ ಶಾಸಕರು ಜನಪ್ರತಿನಿಧಿಗಳು ಸಂಸದರು ರಾಜ ಕಾರಣಿಗಳು ಈ ಒಂದು ದೊಡ್ಡ ಮೆಡಿಕಲ್ ಮಾಫಿಯಾದಲ್ಲಿ ಸಕ್ರಿಯವಾಗಿ ತೊಡಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಾ ಇದೆ ಈ ಕಾರಣದಿಂದಾಗಿ ಮೆಡಿಕಲ್ ಕಾಲೇಜು ಮಂಜೂರು ಆಗ್ದೆ ಇರುವ ಕಾರಣ ಎನ್ನಲಾಗುತ್ತದೆ?

ನವೀನ್ ಸೂರಿಂಜೆ
ಸಂಸದರನ್ನು ಬದಿಗೆ ಇಟ್ಟರೆ, ಕರಾವಳಿ ಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಅವರು ವಿಧಾನ ಸಭೆ ಮತ್ತು ಪರಿಷತ್ ನಲ್ಲಿ ಮಾತನಾಡಲೇ ಬೇಕಾದ ಅನಿವಾರ್ಯ ತೆಯನ್ನು ಸೃಷ್ಟಿಸಬೇಕಾಗುತ್ತದೆ. ಅದನ್ನು ಬಿಟ್ಟರೆ ಬೇರೆ ದಾರಿ ಇಲ್ಲ, ವಿಧಾನ ಸಭೆ ಮತ್ತು ಪರಿಷತ್ತಿನಲ್ಲಿ ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಯಬೇಕಾಗಿದೆ. ಅವರು ಬಾವಿಗೆ ಇಳಿಯುವ ಪ್ರಶ್ನೆ ಇಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಬಾವಿಗೆ ಇಳಿದು ಪ್ರತಿಭಟನೆ ಮಾದ ಬೇಕಾದ ವಾತಾವರಣ ಆಗಬೇಕಾದುದು ಮತ್ತು ಎರಡು ಪಕ್ಷದ ಜನಪ್ರತಿನಿಧಿಗಳು ಈ ವಿಷಯ ಕೈಗೆತ್ತಿ ಪ್ರಸ್ತಾಪ ಮಾಡಬೇಕಾದುದು ಮತ್ತು ಮಂಗಳೂರಿಗೆ ಸರಕಾರಿ ಕಾಲೇಜು ಬೇಕು ಎಂಬ ವಿಷಯದ ಮೇಲೆ ಅವರು ಮಾತನಾಡಬೇಕಾಗಿದೆ.( 1 ನಿ 38 ಸೆ)

ರಫೀಕ್ ಪರ್ಲಿಯ

ದ.ಕ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಆದರೆ, ಬಡ ವರ್ಗದ ವಿಧ್ಯಾರ್ಥಿಗಳಿಗೆ ಸೀಟು ಸುಲಬ ಸಾಧ್ಯವೇ , ಸಿಗದಿದ್ದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಇದೆಯೇ, ಅವರು ವೈದ್ಯರಾಗುವ ವಾದ ಎಷ್ಟು ಮಟ್ಟಿಗೆ ಸರಿ?

ನವೀನ್ ಸೂರಿಂಜೆ:
ಬಡವರ ಮಕ್ಕಳು ವೈದ್ಯರಾಗಬೇಕು ಎಂದಾದರೆ ಅವರಿಗೆ ಮಿತ ಶುಲ್ಕದಲ್ಲಿ ಸೀಟು ಲಭ್ಯವಾಗ ಬೇಕಾಗುತ್ತದೆ. ಸರಕಾರಿ ವೈದ್ಯಕೀಯ ಕಾಲೇಜು ಗಳು ಇದ್ದರೆ ಸುಲಬ ಆಗುತ್ತದೆ.ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಖಾಸಗಿ ಕಾಲೇಜು ಮಾಫಿಯಾ ದ ಕಾರಣಕ್ಕೆ ಅದು ಕಷ್ಟ ಆಗುತ್ತಿದೆ. ಆದುದರಿಂದ ಅವರು ಬೇರೆ ವೃತ್ತಿ ಪರ ಶಿಕ್ಷಣಕ್ಕೆ ಆಯ್ಕೆ ಆಗುತ್ತಿದ್ದಾರೆ. ಆದುದರಿಂದ ಅವರಿಗೆ ವೈದ್ಯಕೀಯ ಶಿಕ್ಷಣ ಕೈಗೆ ಎಟಕುವ ಶಿಕ್ಷಣ ಆಗಬೇಕಿದೆ. ಆದುದರಿಂದ ಸರಕಾರಿ ಕಾಲೇಜು ಬೇಕಾಗಿದೆ. ಈಗಾಗಲೇ ವೈದ್ಯರಾದ ಅದೆಷ್ಟೋ ವೈದ್ಯ ಪದವಿ ಪಡೆದವರು ದೊಡ್ಡ ಕಾರ್ಪೊರೇಟ್ ಆಸ್ಪತ್ರೆ ಅಥವಾ ಐಶಾರಾಮಿ ಆಸ್ಪತ್ರೆಯನ್ನು ಸೆರೆ ಸೇವೆ ಸಲ್ಲಿಸಲು ಆಸಕ್ತಿ ವಹಿಸುತ್ತಾರೆ. ಅವರು ಎಲ್ಲೋ ಕೊಡ ಗ್ರಾಮಾಂತರ ಭಾಗಕ್ಕೆ ವೈದ್ಯರಾಗಿ ಹೋಗಲು ಆಸಕ್ತಿ ತೋರುವುದಿಲ್ಲ ಇದು ಕೂಡ ಬಹು ಮುಖ್ಯ. ವಿಧಾನ ಸಭೆಯಲ್ಲಿ ಇದು ಚರ್ಚೆ ಆಗಿತ್ತು. ಸರಕಾರಿ ಕೋಟಾದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತ ಪಡಿಸುವುದಿಲ್ಲ. ಜೊತೆಗೆ ಗ್ರಾಮಾಂತರ ಭಾಗಕ್ಕೆ ಹೋಗಲು ಕೂಡಾ ಇಚ್ಛೆ ವ್ಯಕ್ತ ಪಡಿಸುವುದಿಲ್ಲ. ಇದು ವಿಧಾನ ಮಂಡಲದಲ್ಲಿ ಎರಡು ಮೂರು ದಿವಸ ಚರ್ಚೆ ನಡೆದಿತ್ತು. ಸರಕಾರ ಒಂದು ನಿರ್ಣಯ ಕೈಗೊಂಡು ವೈದ್ಯರು ಖಡ್ಡಾಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ಎಂದು ಆನಂತರ ಅದನ್ನು ಸಡಿಲ ಗೊಳಿಸಲಾಯಿತು. ಬಹಳಷ್ಟು ವೈದ್ಯರು ಸರಕಾರಿ ಸೇವೆಗೆ ಸೇರಲು ಹಿಂಜರಿಯಲು ಆರಂಭಿಸಿದ ಕಾರಣಕ್ಕೆ, ಗ್ರಾಮಾಂತರ ಸೇವೆ ತುಂಬಾ ವೈದ್ಯರಿಗೆ ಒಂದು ರೀತಿಯ ಅಸಡ್ಡೆ ಇದೆ. ಯಾಕೆ ಎಂದರೆ, ನಗರದ ವಿದ್ಯಾರ್ಥಿಗಳು ವೈದ್ಯರಾದರೆ ಗ್ರಾಮಾಂತರ ಭಾಗಕ್ಕೆ ಹೋಗಲು ಆಸಕ್ತಿ ತೋರುವುದಿಲ್ಲ. ಆದುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯರದ್ರೆ ಹೆಚ್ಚು ಗ್ರಾಮೀಣ ಭಾಗಗಳಿಗೆ ಸೇವೆ ಸಲ್ಲಿಸಲು ಉತ್ಸುಲರಾಗಿರುತ್ತಾರೆ.( 3 ನಿ 17 ಸೆ)

ರಫೀಕ್ ಪರ್ಲಿಯ:
ದ.ಕ.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಆದರೆ ಅದರಲ್ಲೂ ರಾಜಕೀಯ ಲಾಬಿ ನಡೆಸುವ ಸಾಧ್ಯತೆ ಇದೆಯಾ? ಅದನ್ನು ತಡೆಯಲು ಇರುವ ಕ್ರಮ ಏನು?.

ನವೀನ್ ಸೂರಿಂಜೆ:

ಎಲ್ಲಾ ವ್ಯವಸ್ತೆಯಲ್ಲಿ ಬರುವಂತ ಸರಕಾರಿ ವೈದ್ಯಕೀಯ ಕಾಲೇಜು ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಇದ್ದೇ ಇದೆ. ಅದೆಲ್ಲವೂ ಖಾಸಗಿ ಮೆಡಿಕಲ್ ಮಾಫಿಯಾ ದಷ್ಟು ಭೀಕರ ವಾಗಿರುವುದಿಲ್ಲ. ಖಾಸಗಿ ಮೆಡಿಕಲ್ ಮಾಫಿಯಾ ಎಂಬುದು ತೀರ ಅಮಾನವೀಯ ಆಗಿರುತ್ತದೆ ಮತ್ತು ತೀರ ಗೌರದಿಂದ ಕೂಡಿದ್ದು, ಯಾವ ರೀತಿ ನಾವು ಡೆಡ್ ಬಾಡಿ ಅನ್ನು ದುಡ್ಡು ಕೊಡದೆ ಕೊಡುವುದಿಲ್ಲ, ಜೊತೆಗೆ ಯಾಕ್ಸಿಡೆಂಟ್ ಆದ ರೋಗಿಯನ್ನು ನಾವು ಅಡ್ಮಿಟ್ ಮಾಡಲಿಕ್ಕೆ ನೀವು ಅರ್ಧ ಫೀಸ್ ಪಾವತಿಸಬೇಕು, ಈ ರೀತಿ ಕ್ರೌರ್ಯ ತೋರಿಸಿದ ಮೆಡಿಕಲ್ ಕಾಲೇಜು ಅನ್ನು ನಾವು ನೋಡಿದ್ದೇವೆ, ಇದೆಲ್ಲದರ ಮಧ್ಯೆ ನಮಗೆ ಸರಕಾರಿ ಕಾಲೇಜು ಬೇಕು ಎಂದರೆ, ಎಲ್ಲ ರಾಜಕೀಯ ಅಥವಾ ಲಾಬಿ ಯನ್ನೂ ಮೀರಿ ಜಿಲ್ಲೆಗೆ ಅತ್ಯುತ್ತಮ ಮಟ್ಟದ ವೈದ್ಯಕೀಯ ಸೇವೆ ಬೇಕು ಎನ್ನುವುದಾಗಿದೆ. (2 ನಿ 06 ಸೆ).