December 8, 2024

Vokkuta News

kannada news portal

ಉಜಿರೆ ಸುಳ್ಳು ಪ್ರಕರಣ, ಎಸ್ ಡಿ ಪಿ ಐ ವತಿಯಿಂದ ಮಂಗಳೂರಿನಲ್ಲಿ ಎಸ್.ಪಿ‌ ಕಚೇರಿ ಛಲೋ,ಬೃಹತ್ ಪ್ರತಿಭಟನೆ

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಇಂದು ಅಪರಾಹ್ನ,ಮಂಗಳೂರು ಪುರ ಭವನ ಪಕ್ಕದ ಕ್ಲಾಕ್ ಟವರ್ ರಸ್ತೆಯಾದ್ಯಂತ ದ.ಕ ಜಿಲ್ಲೆ ಪೊಲೀಸ್ ತಾರ ತಮ್ಯ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು. ಇತ್ತೀಚೆಗೆ ಗ್ರಾಮ ಪಂಚಾಯತ್ ಫಲಿತಾಂಶ ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಉಜಿರೆಯಲ್ಲಿ ಎಸ್. ಡಿ. ಪೀ.ಐ ಪಕ್ಷದ ಕಾರ್ಯಕರ್ತರು ದೇಶದ್ರೋಹಿ ಘೋಷಣೆ ಕೂಗಿದ ಆರೋಪದಲ್ಲಿ,ದ.ಕ.ಪೊಲೀಸರು ಎಸ್. ಡಿ. ಪೀ.ಐ. ಕಾರ್ಯಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಹಾಕಿದ ವಿಷಯದಲ್ಲಿ, ದ.ಕ.ಜಿಲ್ಲೆ ಪೊಲೀಸರು ಎಸ್. ಡಿ.ಪೀ.ಐ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ,ಪೊಲೀಸರ ತಾರತಮ್ಯ ನೀತಿ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಯಿತು.

ಮುಂದುವರಿದು, ಉಜಿರೆಯಲ್ಲಿ ನೈಜವಾಗಿ ದೇಶ ದ್ರೋಹಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತ ನೆಂದು ಹೇಳಲಾದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ನೈಜ ಆರೋಪಿ ಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು, ಅಮಾಯಕ ಎಸ್. ಡಿ. ಪೀ.ಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು,ಎಂಬಿತ್ಯಾದಿಯಾಗಿ ಇಂದು ಎಸ್.ಡಿ. ಪೀ.ಐ ಪಕ್ಷದ ವತಿಯಿಂದ ವಿವಿಧ ನಾಯಕರು ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದರು.

ಎಸ್.ಪೀ. ಆಪೀಸು ಛಲೋ ಎಂಬ ಕಾರ್ಯಕ್ರಮದಲ್ಲಿ ಎಸ್.ಡಿ.ಪೀ.ಐ ಆಯೋಜಿಸಿದ ಪ್ರತಿಭಟನೆಯಲ್ಲಿ, ಪೊಲೀಸರು ಬಿಜೆಪಿ,ಸಂಘ ಪರಿವಾರ ಮತ್ತು ಆರ್.ಎಸ್.ಎಸ್. ನ ತಾಳಕ್ಕೆ ಮತ್ತು ಒತ್ತಡಕ್ಕೆ ಮಣಿದು ಅಮಾಯಕ ಕಾರ್ಯ ಕರ್ತರ ವಿರುದ್ಧ ದೇಶದ್ರೋಹದ ಸುಳ್ಳು ಪ್ರಕರಣ ದಾಖಲಿಸಲಾಗಿದೆ, ಈ ಪ್ರಕರಣ ದಾಖಲಿಸಿದ ಪೊಲೀಸು ಅಧಿಕಾರಿಯಾದ ನಂದಕುಮಾರ್ ರವರನ್ನೂ ತಕ್ಷಣ ಅಮಾನತು ಗಿಸಬೇಕು ಎಂಬ ಬೇಡಿಕೆ ಘೋಷಣೆ ಮಾಡಲಾಗಿತ್ತು.

ಪೊಲೀಸರು ವ್ ಗು ಬಂದೋ ಬಸ್ತ್ ಏರ್ಪಡಿಸಿದ್ದರು,ನಗರಕ್ಕೆ ಆಗಮಿಸುವ ಸಂಚಾರಿ ವಾಹನದ ಮಾರ್ಗಗಳನ್ನು ಬದಲಿಸ ಲಾಗಿತ್ತು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷ ಅತಾವು ಲ್ಲಾ ಜೋಕಟ್ಟೆ,ಅಲ್ಪಾನ್ಸೋ ಫ್ರಾಂಕ್,ಶಾಫಿ ಬೆಳ್ಳಾರೆ,ಇಕ್ಬಾಲ್ ಬೆಳ್ಳಾರೆ,ಆಶ್ರಫ್ ಮಾಚಾರ್ ಮಾತನಾಡಿದರು. ಕೊನೆಯಲ್ಲಿ ನಿವೇದನ ದೂರು ಮನವಿಯನ್ನು ನಗರ ಪೊಲೀಸ್ ಆಯುಕ್ತರು, ಐ.ಜಿ.ಪೀ.ಯ ಪ್ರಭಾರ ಪ್ರತಿನಿಧಿಯಾಗಿ ಬಂದು ಸ್ವೀಕರಿಸಿದರು.