November 9, 2024

Vokkuta News

kannada news portal

ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ರೈತ ಪರ ರ್ಯಾಲಿ

ದೆಹಲಿಯಲ್ಲಿ ನಡೆಯುತ್ತಿರುವ ರೈತ ಟ್ರಾಕ್ಟರ್ ರ್ಯಾಲಿ ಬೆಂಬಲಿಸಿ ಇಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಆಯೋಜನೆಯಲ್ಲಿ ರೈತ ಪರ ಪ್ರತಿಭಟನೆ ಮತ್ತು ರ್ಯಾಲಿ ನಡೆಯಿತು.ದ.ಕ.ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ವಿವಿಧ ಪ್ರಜಾ ಪ್ರಭುತ್ವ ವಾದಿ ಸಂಘಟನೆಗಳ ಸದಸ್ಯರು,ಸಾರ್ವಜನಿಕರು,ಮಹಿಳೆಯರು,ಕಾರ್ಯಕರ್ತರು ಇಂದು ಅಪರಾಹ್ನ ರೈತ ಪರ ಘೋಷಣೆಗಳನ್ನು ಕೂಗಿ ರೈತ ಪರ ತಮ್ಮ ಬೆಂಬಲ ಸೂಚಿಸಿದರು.ರೈತ ವಿರೋಧಿ ಮೂರು ಕರಾಳ ಶಾಸನಗಳ ಮಾರಕ ಪರಿಣಾಮ ಬಗ್ಗೆ ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಕಿರು ಪ್ರಾಥಮಿಕ ಭಾಷಣದ ನಂತರ,ರ್ಯಾಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ,ರಾವ್ ಅಂಡ್ ರಾವ್ ವೃತ್ತದ ಮೂಲಕ ಸಾಗಿ ಮಿನಿ ವಿಧಾನ ಸೌಧ ಬಳಿ,ವಿಸ್ತೃತ ಪ್ರತಿಭಟನೆಗೆ ಸಾಗಿದೆ. ರ್ಯಾಲಿಯಲ್ಲಿ ಭಾರತದ ದ್ವಜಗಳು,ರೈತ ಪರ ಭಿತ್ತಿ ಪತ್ರ ಗಳು, ಡಾ ಬೀ.ಆರ್.ಅಂಬೇಡ್ಕರ್ ರವರ ಫೋಟೋ ಪ್ರದರ್ಶಿಸಲಾಯಿತು.