January 25, 2025

Vokkuta News

kannada news portal

ವಿ.ಪ.ಸದಸ್ಯ ಐವನ್ ಮನೆ ಮೇಲೆ ಕಲ್ಲು ಎಸೆತ ಪ್ರತಿಭಟಿಸಿ ದ.ಕ ಕಾಂಗ್ರೆಸ್ ನಿಂದ ಕಾಲ್ನಡಿಗೆ ಜಾಥಾ.

ಮಂಗಳೂರು: ಮಂಗಳೂರು ವೆಲೆನ್ಸಿಯಾ ದಲ್ಲಿರುವ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ಮನೆಯ ಮೇಲೆ ಇತ್ತೀಚೆಗೆ ರಾತ್ರಿ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಯನ್ನು ವಿರೋಧಿಸಿ ಇಂದು ಬೆಳಿಗ್ಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಐವನ್ ಡಿಸೋಜಾ ಮನೆಯಿಂದ ಕಂಕನಾಡಿ ಕರಾವಳಿ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

ಕಲ್ಲು ತೂರಾಟ ಬಿಜೆಪಿ ಕೃತ್ಯ ಎಂದು ಆರೋಪಿಸಿ ಜಾಥಾದಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗಲಾಯಿತು. ಘಟನೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಕಲ್ಲು ತೂರಾಟ ನಡೆಸುವುದು ಬಿಜೆಪಿ ಸಂಸ್ಕೃತಿ ಎಂದರು.
ಐವನ್ ಡಿಸೋಜ ಮಾತನಾಡಿ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ನನ್ನೊಂದಿಗೆ ನಿಂತದ್ದು ನನಗೆ ಶಕ್ತಿ ತಂದಿದೆ ಎಂದರು. ಪ್ರತಿಭಟನಾ ಸಭೆಯಲ್ಲಿ ಪಿ.ಮೋಹನ್, ಜೇ.ಆರ್. ಲೋಬೊ,ದೇವಿ ಪ್ರಸಾದ್ ಶೆಟ್ಟಿ,ಮಮತಾ ಗಟ್ಟಿ, ವಿನಯ ರಾಜ್,ಕೆ.ಅಶ್ರಫ್, ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಸ್ಥಳೀಯ ಮನಪಾ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.