September 17, 2024

Vokkuta News

kannada news portal

ಐವನ್ ಡಿಸೋಜಾ ಮನೆಗೆ ಕಲ್ಲು ಎಸೆತ: ಕೆ.ಅಶ್ರಫ್ ಖಂಡನೆ.ನಾಳೆ ಪ್ರತಿಭಟಿಸಿ ಸ್ವಪಕ್ಷೀಯರಿಂದ ಜಾಥಾ.

ಮಂಗಳೂರು: ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ಸೊಝಾ ರವರ ಮಂಗಳೂರಿನ ವೆಲೆನ್ಸೀಯ ದಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಖಂಡನೀಯ ಎಂದು ದ.ಕ. ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

ಈ ಮಧ್ಯೆ ದ.ಕ.ಜಿಲ್ಲಾ ಕಾಂಗ್ರೆಸ್ ಕೃತ್ಯವನ್ನು ವಿರೋಧಿಸಿ ಮಂಗಳೂರಿನ ವೆಲೆನ್ಸಿಯ ಐವನ್ ಡಿಸೋಜಾ ಮನೆಯಿಂದ ನಾಳೆ ತಾರೀಕು 23 ರಂದು ಬೆಳಿಗ್ಗೆ ಜಾಥಾ ಹೊರಡಲಿದೆ ಎಂದು ಪ್ರಕಟಿಸಿದ್ದಾರೆ.

ಪೊಲೀಸರು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ.ಸಂಘ ಪರಿವಾರ ತನ್ನ ಕುಕೃತ್ಯವನ್ನು ಈ ರೀತಿಯಲ್ಲಿ ಪ್ರದರ್ಶಿಸಿದೆ. ಓರ್ವ ಜನಪ್ರತಿನಿಧಿ ಯನ್ನೇ
ಗುರಿಯಾಗಿಸಿ ಇಂತಹ ಕೃತ್ಯ ನಡೆಸುವುದರಲ್ಲಿ ಸಂಘಿ ಕೈವಾಡವಿದ್ದು ಇಂತಹ ಕೃತ್ಯ ಪ್ರಜಾ ಪ್ರಭುತ್ವದ ಅಡಿಪಾಯಕ್ಕೆ ಅಪಾಯ. ನೇರ ಎದುರಿಸಲು ತಯಾರಿಲ್ಲದ ಕೃತ್ಯದಾರರ್ರು ಇರುಳಲ್ಲಿ ಬಂದು ಹೇಡಿತನ ಮೆರೆದಿದ್ದಾರೆ. ಪ್ರಜಾ ಸತ್ತಾತ್ಮಕ ವಿಧದ ಮೂಲಕ ಪ್ರತಿಕ್ರಿಯಿಸುವ ಮನಸ್ಸಿಲ್ಲದ ದುಷ್ಕರ್ಮಿಗಳು ಈ ರೀತಿಯ ಮಾರ್ಗ ಅನುಸರಿಸಿರುವುದು ಖಂಡನೀಯ ಎಂದು.ಕೆ.ಅಶ್ರಫ್( ಮಾಜಿ ಮೇಯರ್)
ಮಂಗಳೂರು ಇವರು ಹೇಳಿಕೆ ನೀಡಿದ್ದಾರೆ.