December 8, 2024

Vokkuta News

kannada news portal

ವಕ್ಫ್ ಮತ್ತು ಸಮುದಾಯದ ಬಗ್ಗೆ ಚಿಂತನೆ ನಡೆಯಬೇಕಿದೆ: ಆನ್ಲೈನ್ ಸಂವಾದದಲ್ಲಿ ಮೌಲಾನ ಶಾಫಿ ಸಹದಿ.

ವೆಬ್: ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ಸಮುದಾಯದ ಜವಾಬ್ದಾರಿಗಳು ಎಂಬ ವಿಷಯದ ಬಗ್ಗೆ ಆನ್ಲೈನ್ ವಾಟ್ಸ್ ಆಫ್ ಹ್ಯಾಂಡಲ್ ಪಬ್ಲಿಕ್ ವಾಯ್ಸ್ ನಲ್ಲಿ ನಿನ್ನೆ . ತಾರೀಕು.07 ನವಂಬರ್ 2024 ರಂದು ಭಾರತೀಯ ಕಾಲ ಮಾನ ಘಂಟೆ ರಾತ್ರಿ 09.00 ಕ್ಕೆ ನಡೆದ ಸಂವಾದದಲ್ಲಿ ಕರ್ನಾಟಕ ಮುಸ್ಲಿಮ್ ಜಮಾತ್ ಮುಖ್ಯಸ್ಥ ಮತ್ತು ಎಸ್.ಎಸ್.ಎಫ್ ರಾಷ್ಟ್ರೀಯ ಮುಖ್ಯಸ್ಥರೂ ಆದ ಜ.ಮೌಲಾನ ಶಾಫಿ ಸಅದಿ ಅವರು ವಕ್ಫ್ ಆಸ್ತಿ ಮತ್ತು ಸಮುದಾಯ ಸಂರಕ್ಷಣೆ ಬಗ್ಗೆ ಚಿಂತನೆ ನಡೆಯಬೇಕಿದೆ ಇಂದು ಹೇಳಿದ್ದಾರೆ. ಸಂವಾದದಲ್ಲಿ ನಿರೂಪಕ ರಫೀಕ್ ಪರ್ಲಿಯಾ ಕೆಲವು ಮಹತ್ವದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಶಾಫಿ ಸಹದಿ ಅವರು ವಕ್ಫ್ ಆಸ್ತಿ, ಹಗರಣ, ಕಬಳಿಕೆ, ಸರಕಾರದ ಪಾತ್ರ, ವಕ್ಫ್ ಬೋರ್ಡ್ ಜವಾಬ್ದಾರಿ, ಜನರ ಮತ್ತು ರಾಜಕೀಯ ಪ್ರತಿನಿಧಿಗಳ ಪಾತ್ರ, ಸಮಾಜಿಕ ಚಿಂತಕರ ಪಾತ್ರ, ಜಿಲ್ಲೆ ರಾಜ್ಯ ದೇಶದಲ್ಲಿನ ಪ್ರಮುಖ ಕಬಳಿಕೆ, ಅನ್ವರ್ ಮಾಣಿಪ್ಪಾಡಿ ವಕ್ಫ್ ಸ್ಥಿರಾಸ್ತಿ ಹಗರಣ ವರದಿಯ ವಾಸ್ತವ ಸ್ಥಿತಿ ಮಾನ್ಯತೆ ಮತ್ತು ಅಪೂರ್ಣತೆ, ಬೆಂಗಳೂರು ನಗರದ ವಕ್ಫ್ ಕಬಳಿಕೆ ಚಿತ್ರಣ, ತಾನು ಪ್ರತಿನಿಧಿಸುತ್ತಿರುವ ಸಂಸ್ಥೆಯ ಬಗೆ ಬಗೆ ತನ್ನ ವಿರುದ್ಧವೇ ಸುಳ್ಳು ಆರೋಪ ಮಾಡಿದ ಬಗೆ ವಿವರಣೆ, ತಮ್ಮ ವಕ್ಫ್ ಬೋರ್ಡು ಅಧಿಕಾರ ಅವಧಿಯಲ್ಲಿ ನ ತನ್ನ ಸೇವೆ,ಇತ್ಯಾದಿ ಬಗ್ಗೆ ಹಲವು ದ್ವನಿ ಸಂದೇಶ ಕ್ಲಿಪ್ ಮೂಲಕ ಈ ಸಂವಾದದಲ್ಲಿ ಮಾಹಿತಿ ನೀಡಿದ್ದಾರೆ.

1.ರಫೀಕ್ ಪರ್ಲಿಯಾ : ಭಾರತಾದ್ಯಂತ ಇರುವ ವಕ್ಫ್ ಆಸ್ತಿ ಮತ್ತು ನಡೆದಂತಹ ಹಗರಣದ ಮಾಹಿತಿ ನೀಡುತ್ತೀರಾ?

1. ಜ.ಶಾಫಿ ಸಅದಿ : ಪಬ್ಲಿಕ್ ವಾಯ್ಸ್ ಡಿಬೇಟ್ ಸ್ವಾಗತಾರ್ಹ.ಭಾರತದಲ್ಲಿ ಈಗಾಗಲೇ ಲೋಕಸಭೆಯಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ರಿಜು ಜೋರು ಮಂಡನೆ ಮಾಡಿದ್ದು ಒಂಬತ್ತು ಲಕ್ಷ ಎಕರೆ ಜಮೀನು ಕಬಳಿಕೆ ಆಗಿದೆ ಎಂದು, ಬೇರೆ ಹುಡುಕಿದರೂ ಎರಡು ಲಕ್ಷ ಎಕರೆ ಜಮೀನು ಮತ್ತೂ ಸಿಗಬಹುದು, ಅದರೊಂದಿಗೆ ಇನ್ನೂ ಸಾವಿರಾರು ಎಕರೆ ಕಬಳಿಕೆ ಆದದ್ದು ಪತ್ತೆ ಆಗಲಿಲ್ಲ. ಕರ್ನಾಟಕದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಬೇಕಾಗಿದೆ ಆದರೆ ಹಾಲಿ ಇರುವುದು ಇಪ್ಪತ್ತೆರಡು ಸಾವಿರ ಎಕರೆ ಮಾತ್ರಾ, ಮಿಕ್ಕಿದ್ದು ಕಬಳಿಕೆ ಆಗಿದೆ, ಕಬಳಿಕೆ ಮಾಡಿದವರು ಅಧಿಕವಾಗಿ ಸರಕಾರ, 1977 ರ ಭೂ ಮಸೂದೆ ಮತ್ತು ಇನಾಮ್ ರದ್ದತಿ ಕಾಯ್ದೆ ಬಂದಾಗ ಯಾರೆಲ್ಲ ಉಳುಮೆ ಮಾಡಿದ್ದು ಮತ್ತು ಲೀಸ್ ಗೆ ಇರುವುದನ್ನು ಸರಕಾರ ಮಂಜೂರು ಮಾಡಿದೆ, ಸರಕಾರ ಹೇಳುವುದು ಮಂಜೂರು ಆಗಿದೆ ಎಂದು ಮಾನ್ಯ ಸುಪ್ರೀಮ್ ಕೋರ್ಟು ಹೇಳುತ್ತದೆ ಒಮ್ಮೆ ವಕ್ಫ್ ಆದ ಜಮೀನು ಎಂದೆಂದಿಗೂ ವಕ್ಫ್ ಯಾರಿಗೂ ಅದನ್ನು ಕಬಳಿಕೆ ಮಾಡಲು ಸಾದ್ಯವಿಲ್ಲ ಎಂದು.

2. ರಫೀಕ್ ಪರ್ಲಿಯಾ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ ಯನ್ನು ತಡೆಯಲು ಧಾರ್ಮಿಕ ನೇತಾರರು,ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು,ಜನ ಸಾಮಾನ್ಯರು ಮಾಡಬೇಕಾದ ಕಾರ್ಯ, ಹೋರಾಟ ಯಾವ ರೀತಿ ಇರಬೇಕಾಗಿದೆ?
2. ಶಾಫಿ ಸಅದಿ: ಕೇಂದ್ರ ಸರಕಾರ ಮುಸ್ಲಿಮರ ವಿರುದ್ಧ ಸಿ ಎ ಎ, ಎನ್ ಆರ್ ಸಿ, ಯಾವುದೆಲ್ಲಾ ಜಾರಿಗೆ ತರಬೇಕೆಂದು ಇದ್ದರೆ ಅದನ್ನು ತರುತ್ತದೆ ಅದನ್ನು ತಡೆಯಲು ನಮ್ಮಿಂದ ಆಗುವುದಿಲ್ಲ. ಆದರೆ ನಾವು ವಿರೋಧ ವ್ಯಕ್ತಪಡಿಸಬಹುದು. ಅತಿ ಹೆಚ್ಚು ವಿರೋಧ ಜೆಪಿಸಿ ಗೆ ಮೇಲ್ ಮೂಲಕ ಹೋಗಿರುದು ಕರ್ನಾಟಕದಿಂದ, ಅದರಲ್ಲಿ ನಾನೆ ಪ್ರಮುಖ ಪಾತ್ರ ವಹಿಸಿದ್ದೇನೆ. ನಿಮ್ಮಂತಹ ಹಲವಾರು ಸಂಘಟನೆ ಮಾಡಿದೆ ಒಂದು ಕೋಟಿಗಿಂತ ಹೆಚ್ಚು ಮೇಲ್ ಹೋಗಿದೆ. ಇನ್ನು ನಮಗೆ ಸುಪ್ರೀಮ್ ಕೋರ್ಟ್ ನಲ್ಲಿ ದಾವೆ ಹೊಡುವುದು, ಕೇಂದ್ರ ಸರಕಾರ ಹಟಕ್ಕೆ ಬಿದ್ದಿದೆ. ಅದನ್ನು ವಿರೋಧ ಮಾಡುವ ಪ್ರಾಮಾಣಿಕ ಕೆಲಸ ವಿರೋಧ ಪಕ್ಷ ಮಾಡಬೇಕಿದೆ. ನಾವು ಬಿಹಾರಕ್ಕೆ ಹೋಗಿ ನಿತೀಶ್ ಕುಮಾರ್ ಅನ್ನು ಭೇಟಿಯಾಗಿ ಹೇಳಿದ್ದೇವೆ. ಮಸೂದೆಯನ್ನು ಹಿಂಪಡೆಯುವ ಕೆಲಸ ಏನಿದೆ ಅದನ್ನು ಮಾಡಬೇಕೆಂದು. ಅದೇ ರೀತಿಯಲ್ಲಿ ಆಂಧ್ರದ ಚಂದ್ರ ಬಾಬು ನಾಯ್ದು ಅನ್ನು ಭೇಟಿ, ಯಾಕಂದ್ರೆ ಎನ್.ಡಿ. ಏ ಅಂಗ ಪಕ್ಷ ಆದಕಾರಣ ಈ ಮಸೂದೆ ಹಿನ್ಪಡೆಯ ಬಹುದಾಗಿದೆ. ಪವನ್ ಕಲ್ಯಾಣ್ ಅವರಿಗೆ ಜಮೀರ್ ಅಹ್ಮದ್ ಅವರು ಮಾತನಾಡಿದ್ದಾರೆ. ಕೇಂದ್ರಸರ್ಕಾರ ವಕ್ಫ್ ಆಸ್ತಿ ಕಬಳಿಕೆ ದಾರರಿಗೆ ಅನುಕೂಲ ಮಾಡಲು ಹೊರಟು ಅದರ ಭಾಗವಾಗಿ ಜಾರಿಗೆ ತರುವ ಉದ್ದೇಶ ಇದರಲ್ಲಿ ಇದೆ.

3. ರಫೀಕ್ ಪರ್ಲಿಯ: ಶಾಫಿ ಸಹದಿಯವರು,ಉಲೇಮಾ ನೇತಾರ,ಧಾರ್ಮಿಕ ನಾಯಕರಾಗಿ,ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವಾಗ, ವಕ್ಫ್ ಮಂಡಳಿ ಯ ರಾಜ್ಯದಕ್ಷರಾಗಿ, ಈ ವಕ್ಫ್ ವಿಚಾರದಲ್ಲಿ ,ವಕ್ಫ್ ತಿದ್ದುಪಡಿ ಕಾಯ್ದೆ ಅನ್ನು ವಿರೋಧಿಸುವ ವಿಚಾರದಲ್ಲಿ,ನೀವು ಪ್ರತಿನಿಧಿಸುವ ಧಾರ್ಮಿಕ ಸಂಘಟನೆಗಳು ಒಂದು ದೊಡ್ಡ ಮಟ್ಟದ ಸಂಘಟಿತ ಹೋರಾಟ ಎಲ್ಲೂ ನಡೆಸಿಲ್ಲ ಅನ್ನುವ ಆರೋಪ ಇದೆ? ಈ ಬಗ್ಗೆ ಏನು.
3. ನೋಡಿ ಹೋರಾಟ ಮುಸ್ಲಿಮ್ ಸಮುದಾಯಕ್ಕೆ ಹೊಸದೇನೂ ಅಲ್ಲ,ನಮ್ಮ ಅವಿರ್ಭಾವ ಕಾಲವೇ ಹೋರಾಟ,ನಮ್ಮ ಆತ್ಮ ರಕ್ಷಣೆಗಾಗಿ,ಅಸ್ತಿತ್ವಕ್ಕಾಗಿ ಹೋರಾಟಗಳು 1400 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ, ಅದು ಉಲೇಮಾ ಗಳಿಂದಲೂ ಬಂದಿದೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉಲಮಾಗಳ ಪಾತ್ರ ಅಲ್ಲಿ ಇತ್ತು. ಮುಸ್ಲಿಮ್ ಸಮುದಾಯದ ಬಂದ ಈ ಆಪತ್ತು ಅನ್ನು ಹೇಗೆ ನಿಭಾಯಿಸಬೇಕು ಹೋರಾಟ ಮಾಡಬೇಕು ಎಂದು ಉಲೇಮಾ ಗಳು ಚರ್ಚೆ ಮಾಡುತ್ತಾ ಇದ್ದೇವೆ ನಾನು ಆ ಸಂಘಟನೆಯ ಲ್ಲಿ ಇರುವುದರಿಂದ ನಿನ್ನೆ ಮೊನ್ನೆ ಕೂಡಾ ಈ ಚರ್ಚೆ ಆಗಿದೆ. ಪ್ರತಿಭಟನೆ ಆಂದೋಲನ ಎಂದು ಹೇಳುವಾಗ ನಮ್ಮಲ್ಲಿ ಕೆಲವು ಯುವಕರು ಇದ್ದಾರೆ, ಯುವಕರು ಆವೇಶಕ್ಕೆ ಒಳಗ್ಗಾಗಿ, ಕಲ್ಲು ಬಿಸಾಡುವುದು, ಒಂದು ಕಲ್ಲು ಸಾಕು ಇಡೀ ಸಮು ದಾಯ ಜೈಲು ಪಾಲಾಗುವ ಸಾದ್ಯತೆ ಹೆಚ್ಚು. ಡಿಜಿ ಹುಬ್ಬಳ್ಳಿ ಹಲವು ಸಂಧರ್ಬದಲ್ಲಿ ಇದೆ ಆದದ್ದು. ಈ ಘಟನೆಯಲ್ಲಿ ನಾನು ಇದ್ದೆ, ಕಾನೂನು ಪ್ರಕಾರ ಅದನ್ನು ನಿಭಾಯಿಸುವ ಪ್ರಯತ್ನ ಕೂಡ ಅಲ್ಲಿನಡೆಸಲಾಗಿದೆ, ಆದರೆ ಕೆಲವು ಯುವಕರು ಪೋಲೀಸು ಸ್ಟೇಶನ್ ಗೆ ಕಲ್ಲು ಎಸೆದು ಬಾಟಲಿ ಹಾಕಿದ್ದಾರೆ, ಈ ರೀತಿಯ ಉದ್ವೇಗ ನಮ್ಮ ಹೋರಾಟದ ದಿಕ್ಕನ್ನು ತಪ್ಪಿಸುತ್ತದೆ. ಆಗ ಇಲ್ಲಿನ ಕೆಲವು ಪೋಲೀಸು ಅಧಿಕಾರಿಗಳಿಗೆ ನಮ್ಮ ಅಮಾಯಕ ಯುವಕರನ್ನು ಜೈಲಿಗೆ.ತಳ್ಳೋಕೆ ಅವಕಾಶ ಆಗುತ್ತದೆ. ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಯಾರೂ ಇಲ್ಲ, ಮನೆಯವಿರಿಗೆ ಸಾಂತ್ವಾನ ಹೇಳಲು ಯಾರು ಇಲ್ಲ. ಇದನ್ನೆಲ್ಲಾ ಆಲೋಚನೆ ಮಾಡಿ ಹೆಜ್ಜೆ ಇಡಬೇಕಾಗಿದೆ. ಪ್ರತಿಭಟನೆ, ಆಂದೋಲನ ಮಾಡುವುದು ದೊಡ್ಡ ವಿಚಾರ ಅಲ್ಲ, ಹೋರಾಟ ಮಾಡಬೇಕು ಆದರೆ ಯಾವ ರೀತಿ ಎಂದು ಚರ್ಚೆ ಮಾಡಬೇಕಿದೆ. ನಮ್ಮ ಜನರನ್ನು ಜೈಲಿಗೆ ಕಳುಹಿಸುವ ಒಂದು ಷಡ್ಯಂತ್ರ ಕಾಯುತ್ತಾ ಇದೆ, ಇದು ಜಾಗತಿಕ ಮಟ್ಟದ ಸಮಸ್ಯೆ, ಹೋರಾಟ ಮಾಡಬೇಕಿದೆ ಮುಂದಿನ ದಿನಗಳಲ್ಲಿ ಉಲೇಮಾ ನಾಯಕರು ಇದನ್ನು ತೀರ್ಮಾನಿಸಲಿದ್ದಾರೆ.

4. ರಫೀಕ್ ಪರ್ಲಿಯಾ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಡೆಯಲು ಮತ್ತು ವಿರೋಧಿಸಲು ಮುಸ್ಲಿಮ್ ಸಮುದಾಯದ ಜವಬ್ದಾರಿ? ನೀವು ರಾಜ್ಯಾಧ್ಯಕ್ಷರು ಆಗಿದ್ದ ಸಂದರ್ಭದಲ್ಲಿ,ಬಿಜೆಪಿ ಪಕ್ಷ ಅಧಿಕಾರದ ಅವಧಿಯಲ್ಲಿ,ಹಗರಣ ಬೆಳಕಿಗೆ ಬಂದಿತ್ತು, ಈ ಬಗ್ಗೆ ಅಂದಿನ ಮುಖ್ಯ ಮಂತ್ರಿ ಸೂಚನೆ ನೀಡಿದ್ದರು, ಆಗ ನೀವು ಕೈ ಗೊಂಡ ಕ್ರಮ, ಮತ್ತು ಸಮುದಾಯಕ್ಕೆ ಆದ ಲಾಭ, ವಕ್ಫ್ ಗೆ ಮರಳಿ ಬಂದ ಪ್ರಕರಣ ಯಾವುದು?
4. ಶಾಫಿ ಸಅದಿ : ಈ ನಿಮ್ಮ ಎರಡು ಪ್ರಶ್ನೆಗಳು ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ಹಗರಣ ವರದಿ ಆಧಾರಿತ ಆಗಿದೆ. ಅವರು ಹೇಳುವುದು ಎರಡು ಲಕ್ಷ ಕೋಟಿ ರುಪಾಯಿ ಹಗರಣ ಎಂದು ಅದು ವಕ್ಫ್ ಬೋರ್ಡ್ನಲ್ಲಿ ಎಂದು,ಅದು ವಕ್ಫ್ ಬೋರ್ಡು ನಲ್ಲಿ ಎಂದು ಹೇಳಲು ಆಗಲ್ಲ, ಅದನ್ನು ಕಂಡು ಹಿಡಿಯಲು ಆಗುವುದಿಲ್ಲ, ವಕ್ಫ್ ಬೋರ್ಡ್ ಗೆ ಯಾರೆಲ್ಲಾ ಬಂದಿದ್ದಾರೆ ಅವರೆಲ್ಲ ಹಗರಣ ಮಾಡಿದ್ದಾರೆ ಕಳೆದ ಎಪ್ಪತ್ತು ವರ್ಷದಿಂದ ಬಂದವರೆಲ್ಲ ಮಾಡಿದ್ದಾರೆ, ವಕ್ಫ್ ಬೋರ್ಡ್ ನಲ್ಲಿ ಸಿಗುವುದಿಲ್ಲ, ಎರಡು ಲಕ್ಷ ಕೋಟಿ ಬಿಡಿ, ಎರಡು ರುಪಾಯಿ ಹಗರಣ ಕೂಡಾ ಅಲ್ಲಿ ಸಿಗುವುದಿಲ್ಲ ಮತ್ತು ಆಯಾಯ ಸಂಸ್ಥೆಗಳಲ್ಲಿ ಹಗರಣ ನಡೆದಿರಬಹುದು, ಆ ನಡೆದ ಹಗರಣದಲ್ಲಿ ವ್ಯಕ್ತಿಗಳು ಪ್ರಭಾವಿಗಳು ಅನ್ನು ಗುರುತಿಸಬೇಕು ಅಂತ ಹೇಳದರೆ ಅವರು ಗ್ಲೌಸ್ ಹಾಕಿಯೇ ಕೆಲಸ ಮಾಡಿದ್ದಾರೆ, ಯಾರು ನೇರ ನೇರ ಮಾಡಿಲ್ಲ,ನೇರ ಮಾಡಿದ ವರ ವಿರುದ್ಧ ಕ್ರಮ ಕೈಗೊಳ್ಳಲು ವಕ್ಫ್ ಬೋರ್ಡ್ ಗೆ ಶಕ್ತಿ ತುಂಬಿಸ ಬೇಕು ಅಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯಬಾರದು, ವಕ್ಫ್ ಬೋರ್ಡ್ ನಲ್ಲಿ ಒಂದು ಮೂರು ನಾಲ್ಕು ಉಲೇಮಾ,ನಾಲ್ಕು ಎಕ್ಸ್ಪರ್ಟ್ ಗಳು, ಇಬ್ಬರು ಶ್ರೀಮಂತರು, ಆಕಾಂಕ್ಷೆ ರಹಿತರು, ಸಮುದಾಯದ ಹಿತಚಿಂತಕರು,ದಾನಿಗಳು, ಸಮುದಾಯದ ಬಗ್ಗೆ ಕಾಳಜಿ ಇರುವವರು, ಹಿರಿಯ ಎರಡು ವಕೀಲರು ಬಂದರೆ ವಕ್ಫ್ ಬೋರ್ಡ್ ಹಗರಣದ ಆರೋಪಿಗಳನ್ನು ಯಾವ್ದೇ ಮುಲಾಜು ಇಲ್ಲದೆ ಕ್ರಮ ಕೈಗೊಳ್ಳಲು ಬಹುದು, ಅಂಜಿಕೆ ಇಲ್ಲದೆ ಕೆಲಸ ಮಾಡಬಹುದು, ಹಾಲಿ ವಕ್ಫ್ ಬೋರ್ಡ್ ನಲ್ಲಿ ಕೆಲಸ ಮಾಡುವಾಗ ರಾಜಕೀಯ ಹಸ್ತಕ್ಷೇಪ ಬಂದೆ ಬರುತ್ತದೆ, ಅಲ್ಲಿನ ವ್ಯವಸ್ಥೆ ಹಾಗೆ ಇದೆ, ಒಬ್ಬ ಎಂಪಿ, ಎರಡು ಎಂ ಎಲ್ ಎ, ನಾಮ ನಿರ್ದೇಶನ ಮಾಡುವುದು ಸರಕಾರ, ಅಂದರೆ ಹಾಲಿ ವ್ಯವಸ್ಥೆ ಬಿಡಲ ಎಂದಲ್ಲ, ಆದರೆ ರಾಜಕೀಯ ಹಸ್ತಕ್ಷೇಪ ಅಲ್ಲಿ ಇದೆ. ಆದರೆ.ಯಾವುದೇ ಕೆಲಸ ಮಾಡುವುದಿದ್ದರೂ ರಾಜಕೀಯ ಹಸ್ತಕ್ಷೇಪ ಪರುತ್ತದೆ. ಉದಾ ಹರಣೆಗೆ ನಾನು ಅಧಿಕಾರದಲ್ಲಿ ಇರುವಾಗ, ಮುಖ್ಯ ಮಂತ್ರಿ ಹೇಳಿದರು ಒಂದು ಕಾರ್ಯಕ್ರಮದಲ್ಲಿ, ನಾವು ಅದಕ್ಕೆ ಮುಂಚೆ ಕೆಲಸ ಶುರು ಮಾಡಿದ್ದೇವೆ, ನಾವು ಮುಗಿಸಿದ್ದೇವಿ, ಈ ಕೆಲಸ ಮಾಡುವಾಗ ಕೆಲವು ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳಲು ಬೇಕಾಗುತ್ತದೆ, ವಕ್ಫ್ ಆಸ್ತಿ ಮಾರಾಟ ಡಲ್ಲಿ ಕೆಲವು ಅಧಿಕಾರಿಗಳ ಪಾತ್ರ ಇರುತ್ತದೆ, ಮುಟವಲ್ಲಿಗಳ ದೊಡ್ಡ ಪಾತ್ರ ಇರುತ್ತದೆ, ಅವರನ್ನು ನಾವು ವರ್ಗಾವಣೆ ಮಾಡುವಾಗ ರಾಜಕೀಯ ಹಸ್ತಕ್ಷೇಪ ನಡೆಯುತ್ತದೆ, ಯಾವುದೇ ಓರ್ವ ಚೇರಮನ್ ಗೆ ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ,ಪ್ರೊಸೀಡಿಂಗ್ಸ್ ಮಾಡುವಾಗ ಒಟ್ಟು ಹನ್ನೊಂದು ಮಂದಿ ಸದಸ್ಯರಲ್ಲಿ ಆರು ಮಂದಿಯ ಬಹುಮತ ಇದ್ದರೆ ಮಾತ್ರ ನಡೆಯುತ್ತದೆ. ಊರಿನ ಒಂದು ಮಸೀದಿಯ ಮೂರು ವರ್ಷದ ಆಡಳಿತ ಮಂಡಳಿಯ ಅನುಮೋದನೆ ಗೆ ಕೂಡಾ ಇದೇ ನಿಯಮ ಆಗಿದೆ, ಒಬ್ಬ ಅಧ್ಯಕ್ಷರಿಗೆ ಏಕಾಂಗಿ ಅನುಮೋದನೆ ಮಾಡಲು ಆಗುವುದಿಲ್ಲ, ಇಂತಹ ವ್ಯವಸ್ಥೆ ಇರುವುದರಿಂದ, ಕಾನೂನು ಕ್ರಮ, ಇಲ್ಲಿ ಸಮುದಾಯಕ್ಕೆ ಸಿಗುವ ಸೌಲಭ್ಯ ಸಿಗುವುದಿಲ್ಲ, ಒಂದು ಪ್ರೀಯರಿಟೀ ಯಲ್ಲಿ ಎಲ್ಲೆಲ್ಲಿ ಕಬಳಿಕೆ ಆಗಿದೆ, ಅಲ್ಲಿನ ಕಾನೂನು ಪ್ರಕರಣಗಳನ್ನು ಗಟ್ಟಿ ಗೊಳಿಸಿದ್ದೇವ್, ವಾಪಾಸು ಪಡೆಯಲು ಪ್ರಯತ್ನಿಸಲಾಗಿದೆ, ಸಾವಿರಾರು ಎಕರೆ ಹಿಂಪಡೆಯಲಾಗಿದೆ,ಖಾಲಿ ಇರುವ ಜಾಗದಲ್ಲಿ ಸ್ಕೂಲು ಕಾಲೇಜು, ದಾರುಲ್ ಉಳೂಂ , ಯತೀಮ್ ಖಾನ,ಇಂತಹ ಸಂಸ್ಥೆ ಮಾಡಬೇಕು ಎಂದು ಹೇಳಿ, ಆ ಪ್ರಯತದಲ್ಲಿ ನಾನು ವಕ್ಫ್ ಬೋರ್ಡ್ ನಲ್ಲಿ ಇದ್ದ ನಲವತ್ತು ಕೋಟಿ ರೂಪಾಯಿ ಹನ್ನೊಂದು ಮಹಿಳಾ ಕಾಲೇಜು ಮಾಡಲು ತೀರ್ಮಾನಕ್ಕೆ ಬಂದಿದ್ದೇನೆ, ದುಡ್ಡು ಕೂಡಾ ನಾನು ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇನೆ, ಈ ಕಾಲೇಜು ಸ್ಥಾಪನೆ ವಿರುದ್ಧ ಶಾಫಿ ಸಹಾದಿ ಹಿಜಾಬ್ ಗೆ ಬೆಂಬಲಿತ ಸಂಸ್ಥೆಗೆ ಮಾಡುತ್ತಾರೆ ಎಂದು ಸಂಘ ಪರಿವಾರದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸರಕಾರಕ್ಕೆ ದೂರು ಕೊಟ್ಟು, ಶೋಕಾಸ್ ನೋಟಿಸ್ ಬಂತು, ಸರಕಾರ.ಅದನು ತಡೆ ಹಿಡಿಯಿತು, ಅದು ಮಾಡಬಾರದು ಎಂದು ಯಾಕೆಂದರೆ,ಹಿಜಾಬ್ ಪರ ಇವರು ಎಂದು ಅದು ಮಾಡಿದ್ದು ನಮ್ಮದೇ ಅಧಿಕಾರಿಗಳು, ನಮ್ಮದೇ ಪ್ರಭಾವಿಗಳು,ಸಂಘ ಪರಿವಾರದವರಿಗೇ ಹಿಜಾಬ್ ಬೇಕಿತ್ತು, ಹಿಜಾಬ್ ಪರವಾಗಿ ಶಾಫಿ ಅವರು ಸರಕಾರದ ದುಡ್ಡು ಅನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು, ಅದು ವಕ್ಫ್ ದುಡ್ಡು ಆಗಿತ್ತು ಸರಕಾರದ ದುಡ್ಡು ಅಲ್ಲ, ಈಗ ಜಮೀರ್ ಸಾಬ್ ಬಂದ ನಂತರ ಹದಿನೈದು ಮಹಿಳಾ ಕಾಲೇಜು ಗಳಿಗೆ ಈಗಾಗಲೇ ಶಿಲಾ ನ್ಯಾಸ ಆಗಿದೆ .

ಪಬ್ಲಿಕ್ ವಾಯ್ಸ್ ಮುಖ್ಯ ಅಡ್ಮಿನ್ ಸಲೀಮ್ ಬೀ.ಸಿ ರೋಡ್ ಪ್ರಸ್ತಾವನೆ, ಇರ್ಫಾನಿ ಮೌಲಾನ ದುವಾ ಗೈದು, ಸೋಶಿಯಲ್ ಫಾರೂಕ್ ಸ್ವಾಗತಿಸಿ ಕೊನೆಯಲ್ಲಿ ಇಮ್ತಿಯಾಜ್ ಕೇದುಂಬಾಡಿ ಧನ್ಯವಾದ ಗೈದರು.