January 5, 2025

Vokkuta News

kannada news portal

ಪುತ್ತೂರು, ಅಖಿಲ ಭಾರತ ಬ್ಯಾರಿ ಮಹಾಸಭಾ, ಜಿಲ್ಲಾ ಸಮಾವೇಶದ ಪ್ರಚಾರಾರ್ಥ ಸ್ಟಿಕ್ಜರ್ ಬಿಡುಗಡೆ.

ಪುತ್ತೂರು: ತಾ 31-12-2024 ರಂದು ಅಖಿಲ ಬಾರತ ಬ್ಯಾರಿ ಮಹಾಸಭಾ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ಪುತ್ತೂರು ಮುಖ್ಯರಸ್ತೆಯಲ್ಲಿರುವ ಜುಮ್ಮಾಮಸೀದಿ ಹತ್ತಿರದ ಸೀರತ್ ಕಟ್ಥಡದಲ್ಲಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷರಾಗಿ ಜಿಲ್ಲಾ ಬ್ಯಾರಿ ಮಹಾಸಭೆಯ ಅದ್ಯಕ್ಷರಾದ ಅಜ಼ೀಜ಼್ ಬೈಕಂಪಾಡಿ ವಹಿಸಿ ಬ್ಯಾರಿ ಸಮುದಾಯದಲ್ಲಿ ಐ.ಎ. ಎಸ್ ,ಐ.ಪಿ.ಎಸ್ ಅಧಿಕಾರಿಗಳನ್ನು ತಯಾರುಗೊಳಿಸುವ ನಿಟ್ಥಿನಲ್ಲಿ,ಪ್ರತೀ ಜಮಾಅತ್ ಮಟ್ಟದಲ್ಲಿ ವಿದ್ಯಾವಂತ ವಿದ್ಯಾರ್ಥಿಗಳನ್ನ ಒಗ್ಗೂಡಿಸಿ ಉಚಿತ ವಿದ್ಯಾಬ್ಯಾಸ ನೀಡುವ ಪ್ರಯತ್ನ ಆಗಬೇಕಾಗಿದ್ದು ಈ ನಿಟ್ಥಿನಲ್ಲಿ ಬ್ಯಾರಿ ನಿಗಮದ ತಯಾರಿಗಾಗಿ ಸರಕಾರವನ್ನು ಕೇಳಿಕೊಂಡಿದ್ದು ಸರ್ಕಾರ ಎಲ್ಲಾ ಸಮುದಾಯಕ್ಕೂ ನಿಗಮ ಮಂಡಳಿ ನೀಡಿದ್ದು, ಈ ಪ್ರಕಾರ ನಮ್ನ ಬ್ಯಾರಿ ಸಮುದಾಯಕ್ಕೆ ನೀಡಿದಾಗ ಇದರಿಂದ ಸುಮಾರು 24 ಲಕ್ಷ ಬ್ಯಾರಿ ಸಮುದಾಯದ ಮದ್ಯೆ ಇರುವ ಅಗತ್ಯತೆ ಪೊರೈಸಲು ಸಾದ್ಯವಾಗುತ್ತದೆ ಎಂದರು.

ಈ ನಿಟ್ಥಿನಲ್ಲಿ ತಾ 08-01-2025 ರಂದು ಬುಧವಾರ ಬೆಳಿಗ್ಗೆ ಮಂಗಳೂರು ಪುರಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿಸಿಕೊಂಡರು.

ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆಯನ್ನು ಪುತ್ತೂರು ತಾಲೂಕು ಸ೦ಯುಕ್ತ ಜಮಾಅತ್ ಅದ್ಯಕ್ಷರು ಹಾಜಿ ಕೆ.ಪಿ ಮಹಮ್ಮದ್ ಹಾಜಿ ಬಿಡುಗಡೆ ಗೊಳಿಸಿದರು,

ಪುತ್ತೂರು ಜಮಾಅತ್ ಕಮೀಟಿಯ ಮಾಜಿ ಅದ್ಯಕ್ಷರು ಪ್ರಸಕ್ತ ಪುತ್ತೂರು ಕರವಡ್ತಾ ಉರೂಸ್ ಸಮೀತಿ ಅದ್ಯಕ್ಷರೂ ಆದ ಎಲ್.ಟಿ.ರಜ಼ಾಕ್ ಹಾಜಿಯವರು ಇಂತಹಾ ಉತ್ತಮ ಕಾರ್ಯದಲ್ಲಿ ಜಮಾಅತ್ ನ ಪ್ರತೀ ಏರ್ಯಗಳಲ್ಲಿ ಸಂಘಟನಾತ್ಮಕವಾಗಿ ಕಾರ್ಯಗತಗೊಳಿಸಿ ಬ್ಯಾರಿ ಸಮುದಾಯವನ್ನು ಎಜ್ಯುಕೇಶನ್ ನಲ್ಲಿ ಮುಂಚೂಣಿ ತರುವ ಕೆಲಸ ಒಗ್ಫ಼ಟ್ಥಿನಲ್ಲಿ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಸ೦ಯುಕ್ತ ಜಮಾಅತ್ ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ ಯವರು ಮಾತನಾಡಿ ಪ್ರತೀಯೊಬ್ಬ ನೂ ಇದರಲ್ಲಿ ಸಕ್ರೀಯನಾಗಿ ನಮ್ಮ ಸಮುದಾಯವನ್ನು ಬಲಪಡಿಸಲು ಶ್ರಮಿಸುವ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮೀತಿ ಅದ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಆಜ಼ಾದ್,ಪುತ್ತೂರು ಸೀರತ್ ಅದ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ,ದರ್ಬೆ ಮಸೀದಿ ಅದ್ಯಕ್ಷರಾದ ಪಿ ಬಿ ಹಸೈನಾರ್,ಕಾರ್ಯದರ್ಶಿ ಬಶೀರ್ ದರ್ಬೆ,ಉಪಾದ್ಯಕ್ಶ ಲತೀಫ಼್,ಆರ್ಲಪದವು ಅಬೂಬಕ್ಕರ್,ಮೋನು ಬಪ್ಪಳಿಗೆ,ರಜ಼ಾಕ್ ಹಾರಾಡಿ,ಜಮಾಲ್ ಬಪ್ಪಳಿಗೆ,ಅಶ್ರಫ಼್ ಕಲ್ಲೆಗ,ರಶೀದ್ ಮುರ,ಇಬ್ರಾಹಿಮ್ ಚೊಯಿಸ್,ಅನ್ವರ್ ಮೌಲವಿ,ಅಶ್ರಫ಼್ ಸೀರತ್,ಇನ್ನಿತರ ಪುತ್ತೂರು ಪ್ರತಿನಿದಿಗಳೊಂದಿಗೆ
ಜಿಲ್ಲಾ ಕನ್ವಿನರ್ಗಳಾದ ಮೊಹಮ್ಮದ್ ಶಾಕಿರ್ ಹಾಜಿ,ಹನೀಫ಼್ ಬೆಂಗ್ರೆ ,ಇಬ್ರಾಹಿಮ್ ಬಾವಾ,ಹುಸೈನ್ ಕೂಲೂರು,ಬಶೀರ್ ಹೊಕ್ಕಾಡಿ ಉಪಸ್ತಿತರಿದ್ದರು.
ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಪುತ್ತೂರು ಕನ್ವಿನರ್ ರಫ಼ೀಕ್ ದರ್ಬೆ ಸ್ವಾಗತಿಸಿ ವಂದಿಸಿದರು.