ಬೆಳ್ತಂಗಡಿ: ಜನವರಿ 8 ರಂದು ಮಂಗಳೂರಿನ ಪುರಭವನದಲ್ಲಿ ಅಖಿಲ ಭಾರತ ಬ್ಯಾರಿ ಮಹಾ ಸಭಾ ವತಿಯಿಂದ ದ.ಕ.ಜಿಲ್ಲಾ ಪ್ರತಿನಿಧಿ ಸಮಾವೇಶ ಜರುಗಲಿದ್ದು, ಜಿಲ್ಲೆಯ ಹಲವು ನಗರ ಕೇಂದ್ರಗಳಲ್ಲಿ ಪ್ರಚಾರಾರ್ಥ ಕಾರ್ಯಕ್ರಮದ ಭಾಗವಾಗಿ ನಿನ್ನೆ ತಾರೀಕು 02 ಜನವರಿ ಯಂದು ಬೆಳ್ತಂಗಡಿಯಲ್ಲಿ ಸಮಾವೇಶದ ಪ್ರತಿನಿಧಿ ಗುರುತು ಚೀಟಿ ಬಿಡುಗಡೆ ಗೊಳಿಸಲಾಯಿತು.
ಬೆಳ್ತಂಗಡಿ ತಾಲೂಕು ಘಟಕ ಜಮ್ಮಿಯತುಲ್ ಫಲಾಹ್ ಅಧ್ಯಕ್ಷರಾದ ಜ.ಬಿ. ಶೇಖುಞಿ ರವರು ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ಗುರುತು ಚೀಟಿ ಬಿಡುಗಡೆ ಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಬ್ಯಾರಿ ಮಹಾ ಸಭಾದ ದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ರವರು ಸಮಾವೇಶದ ಉದ್ದೇಶವನ್ನು ವಿವರಿಸಿದರು. ಸಭೆಯಲ್ಲಿ ಅಶ್ರಫ್ ಬದ್ರಿಯಾ, ಮಾಜಿ ತಾಲುಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಇ.ಕೆ. ಹುಸೈನ್, ಇಬ್ರಾಹಿಮ್ ಬಾವ ಬಜಾಲ್, ಯು . ಎಚ್ಛ್
ಮೊಹಮ್ಮದ್, ಉಮರ್ ಕುಂಞಿ ನಡ್ಜೆ ,ಜಿ.ಕೆ.ಉಮರ್, ಜಿ.ಹಸೈನಾರ್ ಶಾಫಿ, ಅಬ್ಬಾಸ್ .ಎಂ, ಪ್ರಿನ್ಸಿಪಾಲ್ ಉಮ್ಮರಬ್ಬ, ಉಮರ್.ಬಿ , ಮುಸ್ತಾಫಾ. ಜಿ. ಕೆ, ಅಕ್ಬರ್, ಅಬ್ಬೊನು ಮದ್ದಡ್ಕ, ಬಿ.ಎಂ. ಹನೀಫ್, ನವಾಝ್ ಶರೀಫ್ ಕಟ್ಟೆ, ರಾಹಿಲ್ ಉಪಸ್ಥಿತರಿದ್ದರು.
kannada news portal
ಇನ್ನಷ್ಟು ವರದಿಗಳು
ಪ್ರೊ. ಮುಝಾಫರ್ ಅಸ್ಸಾದಿ ನಿಧನ,ಪಿಯುಸಿಎಲ್ ಮೈಸೂರು ತೀವ್ರ ಸಂತಾಪ.
ಕರಾವಳಿ ಉತ್ಸವದ ಅಂಗವಾಗಿ ದ್ವಿದಿನ ಚಲನಚಿತ್ರೋತ್ಸವ ಉದ್ಘಾಟನೆ
ಪುತ್ತೂರು, ಅಖಿಲ ಭಾರತ ಬ್ಯಾರಿ ಮಹಾಸಭಾ, ಜಿಲ್ಲಾ ಸಮಾವೇಶದ ಪ್ರಚಾರಾರ್ಥ ಸ್ಟಿಕ್ಜರ್ ಬಿಡುಗಡೆ.