July 17, 2025

Vokkuta News

kannada news portal

ಇಂದು ಮು.ವಾಯ್ಸ್ ವತಿಯಿಂದ ಮಂಗಳೂರಿನಲ್ಲಿ ಸೋಷಿಯಲ್ ಮೀಡಿಯ ಡೇ ಸ್ನೇಹ ಸಮ್ಮಿಲನ.

ಮಂಗಳೂರು:

ಜಾಗತಿಕ ಸೋಷಿಯಲ್ ಮೀಡಿಯಾ ಡೇ ಸ್ಮರಣಾರ್ಥ, ಜುಲೈ 17 ರಂದು, ಇಂದು ಬೆಳಿಗ್ಗೆ ಗಂಟೆ 11.00 ರಿಂದ ಮಂಗಳೂರಿನ ಪನ್ಪ್ ವೆಲ್ ವೃತ್ತದಲ್ಲಿನ ಹೋಟೆಲ್ ಹೀರಾ ಇನ್ ನಲ್ಲಿ ಮುಸ್ಲಿಮ್ ವಾಯ್ಸ್ ಗ್ರೂಪ್ ನಿಂದ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ಗ್ರೂಪ್ ಮುಖ್ಯಸ್ಥರಾದ ಅಶ್ಫಾಕ್ ತೋಟಾಲ್ ಮತ್ತು ಮೊಹಮ್ಮದ್ ಹನೀಫ್.ಯು ಹೇಳಿದ್ದಾರೆ.

ಸಮಾಜೋ ರಾಜಕೀಯ ಪ್ರಮುಖರಾದ ಕೆ.ಅಶ್ರಫ್ , ಇನಾಯತ್ ಆಲಿ, ಅಬ್ದುಲ್ ಜಲೀಲ್ ಕೃಷ್ಣಾಪುರ , ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಶಾಹುಲ್ ಹಮೀದ್ ಕೆ.ಕೆ, ಮುಜಾಫರ್ ಅಹ್ಮದ್, ರಿಯಾಝ್ ಫರಂಗಿಪೇಟೆ, ಹನೀಫ್ ಖಾನ್ ಕೊಡಾಜೇ, ಇಲ್ಲಿಯಾಸ್ ಅಹ್ಮದ್ ತುಂಬೆ, ಮೊಯ್ದೀನ್ ಬಾವಾ, ಸುಹೈಲ್ ಕಂದಕ, ಮುನೀರ್ ಕಾಟಿಪಳ್ಳ, ರಫೀ ಉದ್ದೀನ್ ಕುದ್ರೋಳಿ ಮುಂತಾದವರನ್ನು ಆಹ್ವಾನಿಸಲಾಗಿದ್ದು ಗ್ರೂಪ್ ಸದಸ್ಯರನ್ನು ಒಳಗೊಂಡಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂವಹನಕ್ಕೆ ಸಾಮಾಜಿಕ ಜಾಲ ತಾಣದ ಪಾತ್ರ ಬಹು ಮುಖ್ಯ ಮತ್ತು ಬದಲಾದ ಮಾಧ್ಯಮ ವ್ಯವಸ್ಥೆಯಲ್ಲಿ ಸಾಮಾಜಿಕ ಜಾಲ ತಾಣದ ಅವಲಂಬನೆ ಮತ್ತು ಮಹತ್ವ ಈ ಬಗ್ಗೆ ಚರ್ಚೆ, ಸಕ್ರಿಯ ಜಾಲತಾಣದ ಚಟುವಟಿಕೆಗಳ ಪರಿಚಯಿಸುವಿಕೆ, ಸದಸ್ಯರ ಗುರುತಿಸುವಿಕೆ,  ಇತ್ಯಾದಿ ಪ್ರಯತ್ನದ ಅಂಗವಾಗಿ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಮತ್ತು ಆನ್ ಲೈನ್ ಸಂವಹನ ವನ್ನು ಆಯೋಜಿಸಲಾಗಿದೆ, ಸದಸ್ಯರು ಮತ್ತು ಮಿತ್ರರಿಗೆ ಈ ಕಾರ್ಯ ಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಅಡ್ಮಿನ್ ಬಳಗ ಹೇಳಿದೆ.