June 14, 2024

Vokkuta News

kannada news portal

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಉಳ್ಳಾಲ ಮುಸ್ತಫಾ ಅಬ್ದುಲ್ಲಾ ನೇಮಕ

ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ರವರು ನೇಮಕ ಗೊಂಡಿದ್ದಾರೆ.

ಈ ಆಯ್ಕೆ ಪ್ರಕ್ರಿಯೆಯು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವೈ ಸಯೀದ್ ಅಹ್ಮದ್ ಅವರ ಶಿಫಾರಸಿನ ಮೇಲೆ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನದೀಂ ಜಾವೆದ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನುಮೋದನೆ ಯೊಂದಿಗೆ ಆಗಿರುತ್ತದೆ.

ಮುಸ್ತಫಾ ಅಬ್ದುಲ್ಲ ಉಳ್ಳಾಲ ರವರು ತನಗೆ ಅವಕಾಶ ಮಾಡಿ‌ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕ ಯುಟಿ ಖಾದರ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ‌ಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಾಗೂ ರಾಜ್ಯಾದ್ಯಂತ ವಿವಿಧ ಯೋಜನೆಗಳೊಂದಿಗೆ ಪಕ್ಷ ಸಂಘಟಿಸಲು ಶಕ್ತಿ ಮೀರಿ ಶ್ರಮಿಸುವ ಸವಾಲು ಅನ್ನು ಸ್ವಾಗತಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.